LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News | Sports News

ಭಾರತ 114 ಪದಕ ಗೆಲುವಿನ ಇತಿಹಾಸ: ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಸಾಧನೆ


ಐಚಿ-ನಗೋಯಾ: ಕೋಟಾ ಸ್ಥಾನ ಜತೆಗೆ ಕ್ರೀಡಾಸ್ಪರ್ಧಿಗಳ ಸಂಖ್ಯೆಯೂ ಕಡಿತಗೊಳಿಸಿದ ಸವಾಲಿನ ನಡುವೆ ನಿರೀಕ್ಷೆಗೂ ಮೀರಿದ ನಿರ್ವಹಣೆ ತೋರಿದ ಭಾರತದ ಪ್ಯಾರಾ ಕ್ರೀಡಾಪಟುಗಳು ಐದನೇ ಆವೃತ್ತಿಯ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಸಾರ್ವಕಾಲಿಕ ಶ್ರೇಷ್ಠ 114 ಪದಕ ಗೆಲುವಿನ ಹೊಸ ದಾಖಲೆ ಸೃಷ್ಟಿಸಿದ್ದಾರೆ. 2023ರ ಆವೃತ್ತಿಯಲ್ಲಿ 108 ಪದಕ ಜಯಿಸಿದ್ದು, ಹಿಂದಿನ ಅತ್ಯುತ್ತಮ ಸಾಧನೆ ಆಗಿದೆ.
ಪದಕ ಸ್ಪರ್ಧೆಯ ಐದನೇ ದಿನವಾದ ಶುಕ್ರವಾರ ಭಾರತದ ಅಂಗವಿಕಲ ಕ್ರೀಡಾಪಟುಗಳು ಒಟ್ಟು 26 ಪದಕ ಬಾಚಿಕೊಳ್ಳುವ ಮೂಲಕ ಅಭಿಯಾನಗೊಳಿಸಿದ್ದು, ಇದರಲ್ಲಿ 9 ಸ್ವರ್ಣ, 8 ರಜತ ಹಾಗೂ 8 ಕಂಚು ಸೇರಿವೆ. ಈ ಮೂಲಕ ಭಾರತ ಸತತ ಎರಡನೇ ಬಾರಿಗೆ ಆವೃತ್ತಿಯೊಂದರಲ್ಲಿ 100ಕ್ಕಿಂತ ಅಧಿಕ ಪದಕ ಗೆದ್ದ ಸಾಧನೆಯನ್ನೂ ಮಾಡಿತು. ಭಾರತ ಇದುವರೆಗೆ ಗೆದ್ದಿರುವ ಒಟ್ಟು 114 ಪದಕಗಳಲ್ಲಿ 30 ಚಿನ್ನ, 35 ಬೆಳ್ಳಿ ಮತ್ತು 49 ಕಂಚಿನ ಪದಕಗಳಾಗಿವೆ.112 ಪುರುಷ, 156 ಮಹಿಳೆಯರ ಸಹಿತ ಒಟ್ಟು 168 ಅಂಗವಿಕಲ ಕ್ರೀಡಾಪಟುಗಳ ಬೃಹತ್ ತಂಡದೊAದಿಗೆ ಕಣಕ್ಕಿಳಿಯಳಿದಿದ್ದ ಭಾರತ ಪದಕ ಪಟ್ಟಿಯಲ್ಲಿ ಸದ್ಯ 4ನೇ ಸ್ಥಾನದಲ್ಲಿದ್ದು, ಅಗ್ರ 5ರೊಳಗೆ ಸ್ಥಾನ ಖಾತ್ರಿ ಎನಿಸಿದೆ. ಶನಿವಾರ ಇನ್ನೂ ಕೆಲ ವಿಭಾಗಗಳ ಫೈನಲ್ ನಡೆಯಲಿದ್ದು, ಭಾರತದ ಯಾವುದೇ ಸ್ಪರ್ಧಿಗಳು ಅರ್ಹತೆ ಪಡೆದಿಲ್ಲ. ಸದ್ಯ 5ನೇ ಸ್ಥಾನದಲ್ಲಿರುವ ದ.ಕೊರಿಯಾ ಕೂಟದ ಅಂತಿಮ ದಿನ ಕನಿಷ್ಠ 2 ಚಿನ್ನ ಗೆದ್ದರೂ, 4ನೇ ಸ್ಥಾನಕ್ಕೇರುವ ಅವಕಾಶ ಹೊಂದಿದೆ. ಪ್ಯಾರಾ ಶೂಟರ್ ಮೋನಾ ಅಗರ್ವಾಲ್ ಮಹಿಳೆಯರ 50 ಮೀಟರ್ ರೈಲ್ 3 ಪೊಸಿಷನ್ ಎಸ್‌ಎಚ್1 ಸ್ಪರ್ಧೆಯಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದರು. ನಲ್‌ನಲ್ಲಿ 357.5 ಅಂಕ ಗಳಿಸಿದ ಮೋನಾ, ಹಾಲಿ ವರ್ಷ ವಿಶ್ವಕಪ್‌ನಲ್ಲಿ ಸ್ವೀಡನ್‌ನ 
ಅನ್ನಾ ಬೆನ್ಸನ್ (356) ರಚಿಸಿದ ವಿಶ್ವ ದಾಖಲೆಯನ್ನು ಮುರಿದರು. ಇದರೊಂದಿಗೆ 2028ರ ಪ್ಯಾರಾಲಿಂಪಿಕ್ ಅರ್ಹತೆ ಪಡೆದ ಮೊದಲ ಭಾರತೀಯ ಶೂಟರ್ ಎನಿಸಿದ 38 ವರ್ಷದ ಮೋನಾ, ಇದಕ್ಕೆ ಮುನ್ನ ಎಸ್‌ಎಚ್1 10 ಮೀಟರ್ ಏರ್ ರೈಲ್‌ನಲ್ಲಿ ಕೂಟ 
ದಾಖಲೆಯೊಂದಿಗೆ ಸ್ವರ್ಣ ಗೆದ್ದು ಸಂಭ್ರಮಿಸಿದ್ದರು. ಪ್ಯಾರಾ ಗೇಮ್ಸ್ಗೆ ಇಂದು ತೆರೆ: ಏಷ್ಯನ್ ಪ್ಯಾರಾ ಗೇಮ್ಸ್ ಐದನೇ ಆವೃತ್ತಿಗೆ ಶನಿವಾರ ಅದ್ದೂರಿ ಸಮಾರೋಪ ಸಮಾರಂಭದೊAದಿಗೆ ತೆರೆ ಬೀಳಲಿದೆ. ಸಮಾರಂಭದ ನಿರ್ಗಮನ ಪಥಸಂಚಲನದಲ್ಲಿ ಧ್ವಜಧಾರಿಗಳಾಗಿ ನಿಶಾದ್ ಕುಮಾರ್ ಹಾಗೂ ಮೋನಾ ಅಗರ್ವಾಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST