ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಮಹಾಲಯ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ದುರ್ಗಾ ಮಾತೆಯ ಆಶೀರ್ವಾದವು ಸಮಾಜದಲ್ಲಿ ಸಂತೋಷ, ಕರುಣೆ ಮತ್ತು ಭರವಸೆಯನ್ನು ತುಂಬಲಿ ಹಾಗೂ ಎತ್ತ ನೋಡಿದರೂ ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಅವರು ಪ್ರಾರ್ಥಿಸಿದ್ದಾರೆ.ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಪ್ರಧಾನಿಯವರು, "ಶುಭ ಮಹಾಲಯ! ನಾವು ದುರ್ಗಾ ಮಾತೆಯ ಆಶೀರ್ವಾದವನ್ನು ಬೇಡುತ್ತೇವೆ. ದೇವಿಯ ಆಶೀರ್ವಾದವು ನಮ್ಮ ಸಮಾಜವನ್ನು ಸುಖ, ಶಾಂತಿ, ಕರುಣೆ ಮತ್ತು ಆಶೀರ್ವಾದದಿಂದ ತುಂಬಿಸಲಿ. ಎಲ್ಲೆಡೆಯೂ ಶಾಂತಿ ಮತ್ತು ಸಮೃದ್ಧಿ ನೆಲೆಸಲಿ" ಎಂದು ದೇಶದ ಜನತೆಗೆ ಶುಭ ಹಾರೈಸಿದ್ದಾರೆ.