LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ನವದೆಹಲಿಯಲ್ಲಿ ಡಿ.ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಸಂಭ್ರಮ


ನವದೆಹಲಿ: ಕರ್ನಾಟಕ ರಾಜಕೀಯ ಅಕಾಡೆಮಿ (ರಿ) ಬೆಂಗಳೂರು ವತಿಯಿಂದ ಮಾಜಿ ಮುಖ್ಯಮಂತ್ರಿ ಡಿ. ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ನೆನಪಿನ ಕಾರ್ಯಕ್ರಮವು ನವದೆಹಲಿಯ ದೆಹಲಿ ಕನ್ನಡ ಶಾಲೆಯ ಜೆ.ಪಿ. ರಾಜರತ್ನಂ ಹಾಲ್‌ನಲ್ಲಿ ಜರುಗಿತು.
ಪ್ರಥಮವಾಗಿ ಶಾಲಾ ಶಿಕ್ಷಕಿಯೊಬ್ಬರು ಪ್ರಾರ್ಥನೆ ಸಲ್ಲಿಸಿದರು. ಕರ್ನಾಟಕ ರಾಜಕೀಯ ಅಕಾಡೆಮಿಯ ಗೌರವ ಅಧ್ಯಕ್ಷರಾದ ಶ್ರೀ ಸಿರಿಗೇರಿ ಯರಿಸ್ವಾಮಿ ಅವರು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು: ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಅವನೀಂದ್ರನಾಥ ರಾವ್ ಅವರು ಅಧ್ಯಕ್ಷತೆ ವಹಿಸಿ ರಾಮಕೃಷ್ಣ ಹೆಗಡೆ ಅವರ ಗುಣಗಾನ ಮಾಡಿದರು. ಹಿರಿಯ ಪತ್ರಕರ್ತರಾದ ಶ್ರೀ ಚಂದ್ರಹಾಸ ಹಿರೇಮಳಲಿ ಅವರು ರಾಮಕೃಷ್ಣ ಹೆಗಡೆಯವರ ಜೀವನದ ವಾಸ್ತವಾಂಶಗಳು ಮತ್ತು ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮೌಲ್ಯಾಧಾರಿತ, ವಿಕೇಂದ್ರೀಕರಣ ವ್ಯವಸ್ಥೆಯ ಹಿನ್ನೆಲೆಯಲ್ಲಿ ಆಗು-ಹೋಗುಗಳ ತಂತ್ರಗಾರಿಕೆ, ರಾಜಕಾರಣದ ಹಿನ್ನೆಲೆ ಬಗ್ಗೆ ವಿಸ್ತೃತ ಮಾಹಿತಿ ನೀಡುವ ಮೂಲಕ ಗಮನ ಸೆಳೆದರು.
ಪತ್ರಕರ್ತ ಎ.ಬಿ. ಶಿವರಾಜ (ನ್ಯಾಷನಲ್ ಕೌನ್ಸಿಲ್ ಮೆಂಬರ್,  ಮತ್ತು ಬಂಧುತ್ವ ಭಾರತದ ಸಂಸ್ಥಾಪಕ) ಅವರು ರಾಮಕೃಷ್ಣ ಹೆಗಡೆಯವರ ಶತಮಾನೋತ್ಸವ ಪ್ರಯುಕ್ತ ಅವರ ಮೌಲ್ಯಗಳನ್ನು ವಿವರಿಸುವ ಕವನವನ್ನು ವಾಚಿಸಿದರು ಮತ್ತು ‘ಶರಣಯ್ಯ ಶರಣು’ ಜನಪದ ಹಾಡಿನ ಮೂಲಕ ಪೂರ್ವಿಕರಿಗೆ ಶರಣು ಸಲ್ಲಿಸಿದರು.ಶರಣಯ್ಯ ಶರಣು ಶರಣು ಶರಣು,ಊರೂರಿಗೊಂದೊಂದು ಕೆರೆ ಕಟ್ಟೆ ಕಟ್ಟಿದ, ಕಟ್ಟೆಯ ಮೇಲೊಂದು ಅತ್ತಿಯ ಮರ ನೆಟ್ಟ, ದನ ಕರು ಕುಡಿಯೋಕೆ ಗೋಕುಂಟೆ ಕಟ್ಟಿದ, ಆ ಹಿರಿಯರ ಪಾದಕ್ಕೆ ಶರಣು, ಅವರು ಮುಟ್ಟಿದ ಮಣ್ಣಿಗೆ ಶರಣು... ಎಂದು ಹಿಂದಿನ ಹಿರಿಯರ ಬಗ್ಗೆ ಜಾನಪದ ಗೀತೆಯ ಮೂಲಕ ಶತಮಾನೋತ್ಸವದ ಅರ್ಥವನ್ನು ತಿಳಿಸಿದರು. ನಂತರ ಅವನೀಂದ್ರನಾಥ ರಾವ್ ರವರು ಸತ್ಯ-ಸತ್ಯತೆಗಳ ಬಗ್ಗೆ ಗುಣಗಾನ ಮಾಡುವ ರಾಮಕೃಷ್ಣ ಹೆಗಡೆಯವರಿಗೆ ದೆಹಲಿಯವರೆಗೂ ಬಂದು ಶತಮಾನೋತ್ಸವದ ಗೌರವ ಸಲ್ಲಿಸುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಕನ್ನಡ ಶಿಕ್ಷಣ ಸಂಸ್ಥೆಯ ಪ್ರಭಾವಿ ಅಧ್ಯಕ್ಷರಾದ ಅವನೀಂದ್ರನಾಥ ರಾವ್ ರವರು ಕರ್ನಾಟಕ ರಾಜಕೀಯ ಅಕಾಡೆಮಿಯ ಗೌರವ ಅಧ್ಯಕ್ಷರಾದ ಸಿರಿಗೇರಿ ಯರಿಸ್ವಾಮಿಯವರಿಗೆ ನೆನಪಿನ ಗೌರವ ಸಲ್ಲಿಸಿದರು. ಪ್ರಾಂಶುಪಾಲರು ಸೇರಿದಂತೆ ಕನ್ನಡ ಶಾಲಾ ಶಿಕ್ಷಣ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ವರ್ಗ, ಹೆಗಡೆಯವರ ಅಭಿಮಾನಿಗಳು ನೆರೆದಿದ್ದರು.ಮೌಲ್ಯಾಧಾರಿತ ರಾಜಕಾರಣದ ಪ್ರತೀಕವಾಗಿದ್ದ ರಾಮಕೃಷ್ಣ ಹೆಗಡೆ ಅವರನ್ನು ಸ್ಮರಿಸುವ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬಂದಿತು.
ವರದಿ: ಎ.ಬಿ. ಶಿವರಾಜ, ನವದೆಹಲಿ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST