ರಾಮನಗರ: ಮಕ್ಕಳಿಗಾಗಿ ಸಂಪತ್ತನ್ನು ಕೂಡಿಡುವ ಬದಲು ಮಕ್ಕಳನ್ನೇ ದೇಶದ ಸಂಪತ್ತನ್ನಾಗಿ ಮಾಡುವಂತೆ ಶಾಸಕ ಇಕ್ಬಾಲ್ ಹುಸೇನ್ ಪೋಷಕರಿಗೆ ಕರೆ ನೀಡಿದರು.
ತಾಲೂಕಿನ ಪಾದರಹಳ್ಳಿ ಕೆಪಿಎಸ್ ಶಾಲೆಯ ಮಕ್ಕಳಿಗೆ ಶಾಲಾ ಸಮವಸ್ತç ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಾಗೂ ಮಕ್ಕಳನ್ನು ಸರ್ಕಾರಿ ಶಾಲೆಗಳ ಕಡೆಗೆ ಆಕರ್ಷಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದರು.ನಾವು ಶಾಲೆಗೆ ಹೋಗುತ್ತಿದ್ದಾಗ ನೆಲದ ಮೇಲೆ ಕೂರುತ್ತಿದ್ದೆವು. ನಾಲ್ಕಾರು ತರಗತಿಗಳಿಗೆ ಒಂದೇ ಕೊಠಡಿ, ಒಬ್ಬರೇ ಶಿಕ್ಷಕರು ಇರುತ್ತಿದ್ದರು. ಆದರೆ, ಕಾಲದ ಜತೆಗೆ ಎಲ್ಲವೂ ಬದಲಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಕುಳಿತುಕೊಳ್ಳಲು ಡೆಸ್ಕ÷್ಗಳು, ಸಮವಸ್ತç, ಪಠ್ಯಪುಸ್ತಕಗಳು, ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು, ಶಾಲೆಗೆ ಕರೆತರಲು ವಾಹನಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.ಪಾದರಹಳ್ಳಿಯಲ್ಲಿ ನಿರ್ಮಿಸಿರುವ ಕೆಪಿಎಸ್ ಶಾಲೆಯು ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶಕ್ಕೆ ಮಾದರಿಯಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನೂ ಒದಗಿಸಲಾಗಿದೆ. ಅದರ ಸದ್ಬಳಕೆ ಮಾಡಿಕೊಂಡು ರಾಜ್ಯಕ್ಕೆ ಮಾದರಿ ಫಲಿತಾಂಶ ನೀಡಬೇಕು. ಈ ಜವಾಬ್ದಾರಿಯನ್ನು ಶಿಕ್ಷಕರು ಹೊರಬೇಕು ಎಂದು ಹೇಳಿದರು.ಕೆಪಿಎಸ್ ಶಾಲೆಯು ಜಿಲ್ಲೆಯ ಮನೆ ಮಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರ ಕನಸಾಗಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಭವ್ಯವಾದ ಶಾಲೆ ನಿರ್ಮಾಣ ಆಗಿದೆ ಎಂದರೆ ಅದರ ಹಿಂದೆ ಶ್ರಮ ಅಡಗಿದೆ. ಸಿಎಸ್‌ಆರ್ ನಿಧಿಯಡಿ ಇಂತಹ ಕಟ್ಟಡ ನಿರ್ಮಿಸಿಕೊಟ್ಟಿರುವ ಟೊಯೋಟಾ ಕಂಪೆನಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.ಜಿಬಿಡಿಎ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜು ಹಾಗೂ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್ ಅವರು ಶಾಲೆಯ ಎಲ್ಲಾ ಮಕ್ಕಳಿಗೂ ತಲಾ ಎರಡು ಜತೆ ಸಮವಸ್ತç ನೀಡುತ್ತಿದ್ದಾರೆ. ಅವರ ಸಾಮಾಜಿಕ ಕಳಕಳಿಗೆ ನಾವೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದರು.ಆಧುನಿಕ ಯುಗದಲ್ಲಿ ಪ್ರತಿ ನಿತ್ಯವೂ ತಂತ್ರಜ್ಞಾನ ಬದಲಾಗುತ್ತಿರುತ್ತದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಶಿಕ್ಷಕರು ಹೊಂದಿಕೊಳ್ಳಬೇಕು. ಗ್ರಾಮೀಣ ಮಕ್ಕಳನ್ನು ಜಾಗತಿಕ ಸ್ಪರ್ಧೆಗೆ ಅಣಿಗೊಳಿಸಬೇಕು. ಆಗ ಮಾತ್ರ ಸರ್ಕಾರದ ಆಶಯ ಈಡೇರಿದಂತಾಗಲಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಶ್ರಮ ಅಗತ್ಯ ಎಂದು ಹೇಳಿದರು.
ಈ ವೇಳೆ ಜಿಬಿಡಿಎ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚೇತನ್‌ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಎನ್.ಆರ್. ವೆಂಕಟೇಶ್, ಮುಖಂಡರಾದ ಡಾಕ್ಯಾ ನಾಯಕ್, ಮಂಚೇಗೌಡ, ಗುರುಪ್ರಸಾದ್, ಮಹದೇವು, ಸತೀಶ್, ಅನಿಲ್, ನಗರಸಭೆ ಮಾಜಿ ಸದಸ್ಯ ಬೈರೇಗೌಡ, ಡಿಡಿಪಿಐ (ಪ್ರಭಾರ) ಭಾಗ್ಯಲಕ್ಷಿö?ಮ, ಬಿಇಒ ಸೋಮಲಿಂಗಯ್ಯ ಇತರರು ಇದ್ದರು.