LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ಅರಣ್ಯ ಅಧಿಕಾರಿಗಳ ಎನ್‌ಕೌಂಟರ್ ವಿರೋಧಿಸಿ ಪ್ರತಿಭಟನೆ


ರಾಮನಗರ: ಚಾಮರಾಜನಗರದಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ಮೂವರ ಬಗ್ಗೆ ರಾಜ್ಯದಲ್ಲಿ ಯಾರಾದರೂ ಒಬ್ಬರು ಧ್ವನಿ ಎತ್ತದೇ ಹೋದದ್ದು ದುರದೃಷ್ಟಕರ ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜು ಬೇಸರ ವ್ಯಕ್ತಪಡಿಸಿ ಮಾತನಾಡಿದರು.
ರಾಮನಗರದ ಐಜೂರು ವೃತ್ತದಲ್ಲಿ ಸೋಮವಾರ ಕರುನಾಡುಸೇನೆ ಹಾಗೂ ಕನ್ನಡ ವಾಟಾಳ್ ಪಕ್ಷದ ವತಿಯಿಂದ ಚಾಮರಾಜನಗರದಲ್ಲಿ ಪೊಲೀಸ್ ಎನ್‌ಕೌಂಟರ್ ವಿರೋಧಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಕಿದರು.ಮೂರು ಜನರು ಪೊಲೀಸರ ಗುಂಡೇಟಿಗೆ ಸತ್ತು ಮೂರು ದಿನಗಳು ಕಳೆದುಹೋಗಿದೆ. ಸ್ಥಳೀಯ ಶಾಸಕರು 10 ಮತ್ತು ಸರ್ಕಾರವು 5 ಒಟ್ಟು 15 ಲಕ್ಷ ರೂಗಳನ್ನು ಸತ್ತ ವ್ಯಕ್ತಿಯ ಕುಟುಂಬಕ್ಕೆ ಕೊಟ್ಟು ಕೈತೊಳೆದುಕೊಂಡಿದೆ. ಗುಂಟೇಟು ನೀಡಿದವರು ಮನೆಯಲ್ಲಿ ಆರಾಮವಾಗಿದ್ದಾರೆ. ರಾಜ್ಯದಲ್ಲಿ ಮೇದಾವಿಗಳು, ಸಾಹಿತಿಗಳು, ಪ್ರಬುದ್ಧರು, ವಕೀಲರು, ಬರಹಗಾರರು ಇದುವರೆವಿಗೂ ಯಾರೂ ಬಾಯ್ಬಿಟ್ಟು ಮಾತನಾಡಿಲ್ಲ ಹಾಗೂ ಜನಪ್ರತಿನಿಧಿ, ಶಾಸನಸಭೆ, ಆಡಳಿತ ಮತ್ತು ವಿರೋಧಪಕ್ಷದವರು ಇಬ್ಬರು ಸೇರಿ ಈ ಘಟನೆ ತೀವ್ರವಾಗಿ ಖಂಡನೆ ಮಾಡಬೇಕಿತ್ತು. ನೇರವಾಗಿ ಗೌರವದಿಂದ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಹಿಟ್ಲರ್, ಸ್ಟಾಲೀನ್, ಮುಸಲೋನಿ ಅವರ ಕಾಲದಲ್ಲಿ ನಡೆಯುತ್ತಿದ್ದ ಎನ್ಕೌಂಟರ್ನಂತೆ ಇಂದು ಆಂಧ್ರ ಪ್ರದೇಶ ಹಾಗೂ ಕರ್ನಾಟಕದಲ್ಲಿ ನಡೆದಿದೆ. ಆದರೆ ಈ ಬಗ್ಗೆ ಗಂಭೀರವಾದ ಚರ್ಚೆ ಸದನದಲ್ಲಿ ಪ್ರಜಾಪ್ರಭುತ್ವ ಜಾರಿಯಲ್ಲಿರುವ ದೇಶದಲ್ಲಿ ಯಾರೂ ಕೂಡ ಕಣ್ಣು, ಬಾಯಿ ತೆರೆದು ಮಾತನಾಡಲಿಲ್ಲ. ಸದನ ದನದ ದೊಡ್ಡಿಯಂತಾಗಿದೆ. ಇಂದು ಇಡೀ ರಾಜ್ಯ ಎನ್ಕೌಂಟರ್ ವಿರುದ್ಧ ನಿಲ್ಲಬೇಕಿತ್ತು. ಅವರವರ ತಮ್ಮ ವೈಯಕ್ತಿಕ ಚಿಂತೆಯಲ್ಲೇ ಮುಳುಗಿಹೋಗಿದ್ದಾರೆ. ದೇಶ ಮತ್ತು ರಾಜ್ಯದ ಮಾನವ ಹಕ್ಕುಗಳು ಬೀದಿಗೆ ಇಳಿದು ಹೋರಾಟ ಮಾಡಲು ಬರಲಿಲ್ಲ. ಅಲ್ಲಿನ ಶಾಸಕರನ್ನು ಕೂಡಲೇ ಬಂಧನ ಮಾಡಬೇಕು. ಈ ಘಟನೆಯನ್ನು ಚಾಮರಾಜನಗರ ಮಾತ್ರವಲ್ಲ, ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಖಂಡನೆ ಮಾಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರುಪ್ರತಿಭಟನೆಯಲ್ಲಿ ಕರುನಾಡು ಸೇನೆ ಉಪಾಧ್ಯಕ್ಷ ಐಜೂರು ಎಂ. ಜಗದೀಶ್, ರಾಜ್ಯ ಉಸ್ತುವಾರಿ ಅಧ್ಯಕ್ಷ ವಿ.ಎನ್.ಗಂಗಾಧರ್, ಜಿಲ್ಲಾಧ್ಯಕ್ಷ ಜಯಕುಮಾರ್ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಪುಷ್ಪಲತಾ, ಕಾರ್ಯದರ್ಶಿ ವೆಂಕಟಲಕ್ಷ್ಮೀ ಜಿಲ್ಲಾ ದಲಿತ ಘಟಕದ ಅಧ್ಯಕ್ಷ ಕೆ.ಜಯರಾಮು, ಯುವ ಘಟಕದ ಜಿಲ್ಲಾಧ್ಯಕ್ಷ ವಿ.ಎನ್.ಶ್ರೀನಿವಾಸ್, ತಾಲ್ಲೂಕು ಗೌರವಾಧ್ಯಕ್ಷ ಕೆಂಪರಾಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ಕಾರ್ಯಾಧ್ಯಕ್ಷ ಪಿ.ಸುರೇಶ್ ಕೊತ್ತಿಪುರ, ವಾಟಾಳ್ ಪಕ್ಷದ ಪಾರ್ಥಸಾರಥಿ ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST