ಮುಳಬಾಗಿಲು: ಬೆಂಗಳೂರಿನ ಕೆಲವರು ರಿಯಲ್ ಎಸ್ಟೇಟ್ ಉದ್ಯಮಿಗಳು ತಾಲ್ಲೂಕಿನ ಕಂದಾಯ ಇಲಾಖೆಯನ್ನು ಖರೀದಿ ಮಾಡಿದ್ದು, ಇದರಿಂದ ಭೂ ಹಗರಣ ನಡೆಸಿ ಸರ್ಕಾರಿ ಜಮೀನುಗಳು ಅವರ ಪಾಲಾಗಿದೆ. ಸರ್ಕಾರಿ ಜಮೀನು ಇಲ್ಲದೆ ಇರುವುದರಿಂದ ಆಟದ ಮೈದಾನ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಭೂಗಳ್ಳರ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದು ಶಾಸಕ ಸಮೃದ್ಧಿ ಮಂಜುನಾಥ್ ತಿಳಿಸಿದರು. ನಗರದ ಕೋಮುಲ್ ಶಿಬಿರ ಕಚೇರಿಯಲ್ಲಿ ಕೋಮುಲವತ್ತೆಯಿಂದ 70 ಮಂದಿ ರೈತರಿಗೆ ವಿದ್ಯುತ್ ಚಾಲಿತ ಹಾಲು ಕರೆಯುವ ಯಂತ್ರಗಳನ್ನು ವಿತರಿಸಿ ಮಾತನಾಡಿ, ತಾಲ್ಲೂಕಿನಲ್ಲಿ ಬಾರಿ ಭೂ ಹಗರಣ ನಡೆದಿದ್ದು, ಈ ಬಗ್ಗೆ ಕಂದಾಯ ಇಲಾಖೆ ಸಚಿವರನ್ನು ಚರ್ಚೆಗೆ ಆಹ್ವಾನಿಸಲಾಗಿದೆ. ಭೂ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕಂದಾಯ ಸಚಿವರನ್ನು ಆಗ್ರಹಿಸಲಾಗುವುದು ಎಂದು ತಿಳಿಸಿದರು.ತಾಲ್ಲೂಕಿನ ಬಹುತೇಕ ಬೋರ್ವೆಲ್‌ಗಳು ಸಿಗಿತಗೊಂಡಿದೆ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ ಇನ್ನು ಹತ್ತು ದಿನಗಳಲ್ಲಿ ರಾಸುಗಳಿಗೆ ಮೇವು ಸಿಗುತ್ತಿಲ್ಲ ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿತ ಕ್ರಮ ತೆಗೆದುಕೊಳ್ಳಬೇಕೆಂದು ಎಂದರು.
ಮಾಲೂರು ತಾಲೂಕಿಗೆ ಮಾರ್ಕಂಡೇಯ ಡ್ಯಾಮ್ ಇದೆ. ಕೋಲಾರ, ಬಂಗಾರಪೇಟೆಗೆ ಯರಗೋಳು ಯೋಜನೆ ಇದೆ. ಆದರೆ ಮುಳಬಾಗಲು ತಾಲ್ಲೂಕಿಗೆ ಮಳೆಯ ನೀರೇ ಗತಿ ಎಂದರು. ಕೆಸಿ ವ್ಯಾಲಿ ನೀರು ಕೂಡ ಮುಳಬಾಗಿಲಿಗೆ ತಲುಪುತ್ತಿಲ್ಲ ಈ ನೀರನ್ನು ಮಾಡಿದರು ಪ್ರಯೋಜನವಾಗಿಲ್ಲ ತಾಲ್ಲೂಕಿನ ಆಂಧ್ರ ಗಡಿಭಾಗದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ನೀರನ್ನು ಮುಳಬಾಗಿಲಿಗೆ ಹರಿಸಲು ಮುಖ್ಯಮಂತ್ರಿಗಳು ಗಮನ ಹರಿಸಬೇಕೆಂದು ಮನವಿ ಮಾಡಿದರು. ತಾಲ್ಲೂಕಿನಲ್ಲಿ ಆಂಧ್ರ ಹಾಗೂ ತಮಿಳುನಾಡಿನ ಖಾಸಗಿ ಡೈರಿಗಳಿಂದ ಕೋಮುಲ್‌ಗೆ ತುಂಬಾ ನಷ್ಟ ಉಂಟಾಗುತ್ತಿದೆ. ರೈತರು ಸಹಕಾರಿತತ್ವದಡಿ ನಡಿಯುತ್ತಿರುವ ಹಾಗೂ ರೈತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿರುವ ಕೋಮುಲ್‌ಗೆ ಮಾತ್ರ ಹಾಲನ್ನು ನೀಡಬೇಕು. ತಾಲ್ಲೂಕಿನ ರೈತರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ತಿಳಿಸಿದರು. ಕೋಮುಲ್ ಪೂರ್ವ ಕ್ಷೇತ್ರದ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ಪ್ರಥಮ ಹಂತದಲ್ಲಿ 70 ಮಂದಿಗೆ ಹಾಲು ಕರೆಯುವ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ನೀಡಿದ್ದು, ಮುಂದಿನ ಹಂತದಲ್ಲಿ ರೈತರಿಗೂ ವಿತರಣೆ ಮಾಡಲಾಗುವುದು. ಮೇವು ಕತ್ತರಿಸುವ ಯಂತ್ರ ಮ್ಯಾಟ್ ಶೀಘ್ರ ವಿತರಿಸುವುದಾಗಿ ತಿಳಿಸಿದರು.ಕೋಮುಲ್ ಪಶ್ಚಿಮ ಕ್ಷೇತ್ರ ನಿರ್ದೇಶಕ ಬಿವಿ ಸಾಮೇಗೌಡ ಮಾತನಾಡಿ. ಸಾಕಾರ ಸಂಘಗಳ ಕಾರ್ಯದರ್ಶಿಗಳ ಸಭೆಯಲ್ಲಿ ಕೆಲ ಸೊಸೈಟಿಗಳಲ್ಲಿ ನಡೆಯುತ್ತಿರುವ ಅಕ್ರಮದ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಗಿದ್ದು. ತಪುö್ಪ ದಾರಿಗೆ ಇಳಿದಿರುವ ಕಾರ್ಯದರ್ಶಿಗಳನ್ನು ಸುಮ್ನೆ ಬಿಡೋದಿಲ್ಲ ಎಂದರು. ಹಾಲಿನಲ್ಲಿ ಕಲಬೆರಿಕೆ ಮಾಡುವವರನ್ನು ಹಾಗೂ ಹಾಲಿನ ಹಣದಲ್ಲಿ ಅಕ್ರಮ ಮಾಡುವವರನ್ನು ದೇವರು ಮೆಚ್ಚುವುದಿಲ್ಲ. ರೈತರ ಬೆವರಿನ ಹಣವನ್ನು ದುರ್ಯೋಪಯೋಗ ಪಡಿಸಿಕೊಂಡವರು ಇಂದು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದರು.ಸಹಕಾರ ಸಂಘಗಳ ಕಾರ್ಯದರ್ಶಿಗಳು ತಮ್ಮ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಬೇಕು. ರೈತರಿಗೆ ನಂಬಿಕೆಯಿಂದ ನೀಡುವ ಹಾಲು ಹಾಗೂ ಅದರ ಹಣದಲ್ಲಿ ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ನೀಡಬಾರದು ಎಂದರು. ಅನುಮಾನವಿರುವ ಡೈರಿಗಳ ಮೇಲೆ ಮಾತ್ರವಲ್ಲದೆ ಅಂತಹ ಎಲ್ಲಾ ಸಹಕಾರ ಸಂಘಗಳ ಪರಿಶೀಲನೆ ನಡೆಸಲು ಸಿದ್ಧತೆ ನಡೆದಿದೆ. ದಾಖಲೆಗಳು ಹಣಕಾಸು ವ್ಯವಹಾರಗಳು ಹಾಗೂ ಸಂಘದ ಆಡಳಿತ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ನಲ್ಲೂರು ರಘುಪತಿ ರೆಡ್ಡಿ. ಜೆಡಿಎಸ್ ವಕ್ತಾರ ಎಂಎಸ್ ಶ್ರೀನಿವಾಸ್ ರೆಡ್ಡಿ. ಚಾಮರೆಡ್ಡಿಹಳ್ಳಿ ಡಾ. ಪ್ರಕಾಶ್. ಡೆಕ್ಕನ್ ಶಶಿಕಾಂತ್. ಮುಖಂಡರಾದ ಕೆಪಿ ಟ್ರಾವೆಲ್ಸ್ ಮಾಲೀಕ
ಗೊಲ್ಲಹಳ್ಳಿ ಪ್ರಭಾಕರ್. ಲಕ್ಷ್ಮೀಪ್ರಿಯಾ ಅಕ್ಷಯ ಮಂಜುನಾಥ್. ಮುನಿಸ್ವಾಮಿ ಗೌಡ. ವೆಂಕಟರಮಣಪ್ಪ. ಚಿನ್ನಹಳ್ಳಿ ಗೋಪಾಲ್. ನಾಗಮಂಗಲ ಶಂಕ್ರಪ್ಪ. ಪೆದ್ದೂರು ವರದಪ್ಪ. ವಸಂತ್. ಒಕ್ಕೂಟದ ಅಧಿಕಾರಿ ಚೇತನ್. ಉಪ ವ್ಯವಸ್ಥಾಪಕ ಡಾ. ಕಿರಣ್. ವಿಸ್ತರಣಾ ಧಿಕಾರಿಗಳಾದ ರವಿಕುಮಾರ್. ಶ್ರೀನಿವಾಸ್. ವೇಣು. ಚಂದ್ರಶೇಖರ್. ಸುಬ್ರಮಣ್ಯ ರೆಡ್ಡಿ, ಪುರುಷೋತ್ತಮ್ ರೆಡ್ಡಿ ಹಾಜರಿದ್ದರು.