LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ರಾಜಕೀಯ ಮೌಲ್ಯ ಕುಸಿತ, ಪ್ರಜಾಪ್ರಭುತ್ವಕ್ಕೆ ದೊಡ್ಡ ಹಾನಿ 

ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಕಳವಳ | ಜ್ಞಾನ ಭಾರತಿ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ



ಕುಣಿಗಲ್ : ಇತ್ತೀಚಿನ ದಿನಗಳಲ್ಲಿ ರಾಜಕೀಯ ಮೌಲ್ಯಗಳು ಕುಸಿಯುತ್ತಿವೆ ಎಂದು ವಿಷಾಧೀಸಿದ ಮಾಜಿ ಶಾಸಕ, ಒಕ್ಕಲಿಗ ಸಂಘದ ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡ ರಾಜಕಾರಣದಲ್ಲಿ ನೈತಿಕತೆ, ಪ್ರಮಾಣಿಕತೆ ಜನಪರ ಕಾಳಜಿ ಕಡಿಮೆಯಾಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಹಾನಿಯಾಗಿತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪಟ್ಟಣದ ಜ್ಞಾನ ಭಾರತಿ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ 80 ನೇ ಸ್ವಾತಂತ್ರೊ÷್ಯÃತ್ಸವ ಕಾರ್ಯಕ್ರಮದಲ್ಲಿ ದ್ವಾಜರೋಹಣ ನೆರವೇರಿಸಿ ಮಾತನಾಡಿದರು.ಪರಕೀಯರ ಗುಲಾಮ ಗಿರಿಯಿಂದ ದೇಶದ ಜನರನ್ನು ಮುಕ್ತಿಗೊಳಿಸಲು ಗಾಂಧೀಜಿ, ನೆಹರು, ಸುಭಾಷ್‌ಚಂದ್ರಬೋಸ್, ಭಗತ್‌ಸಿಂಗ್, ಚಂದ್ರಶೇಖರ್‌ಅಜಾದ್, ವಲ್ಲಭಬಾಯ್‌ಪಟೇಲ್, ಮೌಲಾನ್ ಆಜಾದ್, ಲಜಪುತ್‌ರಾಯ್, ಸಂಗೋಳ್ಳಿರಾಯಣ್ಣ, ಜಾನ್ಸಿರಾಣಿ ಲಕ್ಷ್ಮೀ ಭಾಯಿ ಸೇರಿದಂತೆ ಸಾವಿರಾರು ಮಂದಿ ಹೋರಾಟದ ಮೂಲಕ ತಮ್ಮ ಪ್ರಾಣವನ್ನು ಬಲಿದಾನ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ, ಆ ಮಹನೀಯರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಪರಕೀಯರು ದೇಶದ ಸಂಪತ್ತನ್ನು ಲೂಟಿ ಮಾಡಿ ಬರಿದಾಗಿ ಬಿಟ್ಟು ಹೋಗಿದ್ದರು, ಆ ವೇಳೆಯಲ್ಲಿ ಬಡತನ ತಾಂಡವಾಡುತ್ತಿತು, ಜನರು ಹಸಿವಿನಿಂದ ನೆರಳುತ್ತಿದ್ದರು, ಜನರು ಆನೇಕ ರೋಗಗಳಿಗೆ ತುತ್ತಾಗುತ್ತಿದ್ದರು, ವಾಹನಗಳ ಸೌಲಭ್ಯ ಇರಲಿಲ್ಲಾ, ಕೈಗಾರಿಕೆ, ನೀರಾವರಿ, ನಿರುದ್ಯೋಗ ಸೇರಿದಂತೆ ಆನೇಕ ಸಮಸ್ಯೆಗಳು ದೇಶ ಎದರಿಸುತ್ತಿತ್ತು, ಆ ವೇಳೆ ಅಧಿಕಾರಕ್ಕೆ ಬಂದ ನೆಹರು ನೇತೃತ್ವದ ಕೇಂದ್ರ ಸರ್ಕಾರ ದೇಶ ರಕ್ಷಣೆ, ನೀರಾವರಿ, ಕೈಗಾರಿಕೆ, ವಿದ್ಯುತ್, ಶಿಕ್ಷಣ, ಆರೋಗ್ಯ, ರಸ್ತೆಗಳ ನಿರ್ಮಾಣ ಸೇರಿದಂತೆ ಆನೇಕ ಅಭಿವೃದ್ದಿಗೆ ಒತ್ತು ನೀಡಿ ಜನರನ್ನು ಬಡತನದಿಂದ ಮೇಲೆತ್ತುವಂತ ಅಭಿವೃದ್ದಿ ಕೆಲಸ ಮಾಡಿದ ಪ್ರತಿಫಲವಾಗಿ ಇಂದು ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತ ದೇಶವಾಗಿದೆ ನಂತರ ಪ್ರದಾನಿಗಲಾದ ಲಾಲ್ ಬಹುದ್ದೂರು ಶಾಸ್ತ್ರೀ, ಇಂದಿರಾಗಾಂಧಿ, ರಾಜೀವ್‌ಗಾಂಧಿ, ನರಸಿಂಹ ರಾವ್, ವಾಜಪೇಯಿ, ಡಾ.ಮನ ಮೋಹನ್‌ಸಿಂಗ್ ಅವರ ನಿಷ್ಠೆ, ಪ್ರಮಾಣಿಕತೆ ಯಿಂದ್ದಾಗಿ ದೇಶ ಅಭಿವೃದ್ದಿ ಕಂಡಿದೆ ಆದರೆ ಇತ್ತೀಚಿಗೆ ರಾಜಕಾರಣಿಗಳಲ್ಲಿ ನಿಷ್ಠೆ ಪ್ರಾಮಾಣಿಕತೆ, ಮಾಸುತ್ತಿದೆ, ಪ್ರಾಮಾಣಿಕತೆ, ನೇರ ನುಡಿಯ ರಾಜಕಾರಣಿಗಳಿಗೆ ಬೆಲೆ ಇಲ್ಲದಂತ್ತಾಗಿದೆ, ಸ್ವಾರ್ಥ, ಭ್ರಷ್ಟಾಚಾರ ಹೆಚ್ಚಾಗಿದೆ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಠಿಯಾಗಿದೆ, ಶಿಕ್ಷಣ ಮೌಲ್ಯ ಕುಸಿಯುತ್ತಿದೆ, ಈ ಸಮಸ್ಯೆ ಪರಿಹರಿಸಿ ಜನರಿಗೆ ಉತ್ತಮ ಆಡಳಿತ ನೀಡುವಲ್ಲಿ ರಾಜಕಾರಣಿಗಳು ಪ್ರಾಮಾಣಿಕ ಪ್ರಯತ್ನ ಮಾಡದೇ ಇರುವುದು ವಿರ್ಪಯಾಸವೇ ಸರಿ ಎಂದು ಹೇಳಿದರು,  ಇದೇ ವೇಳೆ ತಾಲೂಕು ಆಡಳಿತದಿಂದ ಜಿಕೆಬಿಎಂಎಸ್ ಶಾಲಾ ಅವರಣದಲ್ಲಿ ಆಯೋಜಿಸಿ ಸ್ವಾತಂತ್ರ್ಯೋ ತ್ಸವ ಕಾರ್ಯಕ್ರಮದಲ್ಲಿ ಜ್ಞಾನ ಭಾರತಿ ಶಾಲೆಯ 170 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಡೆಸಿಕೊಟ್ಟ ದೇಶ ಭಕ್ತಿ ಗೀತೆಯ ನೃತ್ಯರೂಪ, ವಿವಿಧತೆಯಲ್ಲಿ ಏಕತೆಯನ್ನು ಸಾರುವಂತಿತ್ತು. ಸ್ವಾತಂತ್ರ್ಯಸಂಗ್ರಾಮದ ನೆನಪನ್ನು ತರಿಸುವಂತಿತ್ತು. ವಿವಿಧ ವೇಷಭೂಷಣ ತೊಟ್ಟ ಮಕ್ಕಳು ರಾಷ್ಟçಧ್ವಜ ಹಿಡಿದು ಪ್ರದರ್ಶನ ಮಾಡಿದ ನೃತ್ಯಕ್ಕೆ ಪ್ರಥಮ ಬಹುಮಾನ ಬಂದ ಹಿನ್ನಲೆಯಲ್ಲಿ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಒಕ್ಕಲಿಗ ಸಂಘದ ಉಪಾಧ್ಯಕ್ಷ ಟಿ.ಗಿರೀಶ್, ಕಾರ್ಯದರ್ಶಿ ಚನ್ನಪ್ಪ, 
ಖಜಾಂಚಿ ಎಂ.ಎನ್.ಶಿವಣ್ಣಗೌಡ, ನಿರ್ದೇಶಕ ರಾದ ಚಂದ್ರೇಗೌಡ, ಸೀತಾ ರಾಮಯ್ಯ, ಶಿವರಾಮ್, ಬೆಟ್ಟಸ್ವಾಮಿಗೌಡ, ಕೆ.ಎಚ್‌ಗೌಡ, ನವೀನ್, ಶಿವಣ್ಣ ಪ್ರಾಚಾರ್ಯ ಗೋವಿಂದೇ ಗೌಡ್ರು, ಮುಖ್ಯಶಿಕ್ಷಕರಾದ ಪ್ರಕಾಶ್‌ಮೂರ್ತಿ, ಗಂಗಮ್ಮ ಮತ್ತಿತರರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST