ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸಿರುವ ಹಾಗೂ ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ರಾಜೇಶ್ ನಟರಂಗ ಪ್ರಮುಖಪಾತ್ರದಲ್ಲಿ ನಟಿಸಿರುವ “NH66” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಸಹ ಪೂರ್ಣವಾಗಿದೆ. ಇತ್ತೀಚಿಗೆ ಈ ಚಿತ್ರದ ಪ್ರಮುಖಪಾತ್ರಧಾರಿ ಪ್ರಮೋದ್ ಶೆಟ್ಟಿ ಅವರ ಫಸ್ಟ್ ಲುಕ್ ಅನಾವರಣವಾಗಿದೆ. ಫಸ್ಟ್ ಲುಕ್ ವಿಶೇಷವಾಗಿದ್ದು, ಕುತೂಹಲ ಮೂಡಿಸಿದೆ.
NH66” ಚಿತ್ರದ ಹೆಸರೇ ಹೇಳುವಂತೆ ಒಂದು ಸಂಚಾರದ ಕಥೆ. ಮಂಗಳೂರಿನಿAದ ಮುಂಬೈಗೆ ಹೋಗುವ ಮಧ್ಯೆ ನಡೆಯುವ ಎರಡು ದಿನಗಳ ಕಥೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗುರುರಾಯರ ಪರಮಭಕ್ತರಾದ ನಿರ್ಮಾಪಕ - ನಿರ್ದೇಶಕ ಟಿ.ಆರ್ ಮಂಜುನಾಥ್ ರಾಯರ ಸನ್ನಿಧಿಯಲ್ಲೇ ಈ ಚಿತ್ರವನ್ನು ಆರಂಭಿಸಿದ್ದರು. ರಾಯರ ಕರುಣೆಯಿಂದಲೇ ಚಿತ್ರ ಅಂದುಕೊAಡ ಹಾಗೆ ಆಗಿದೆ ಎನ್ನುತ್ತಾರೆ ಟಿ.ಆರ್.ಮಂಜುನಾಥ್. ನಿರ್ದೇಶಕರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸುನೀತ್ ಹಲಗೇರಿ ಅವರ ಛಾಯಾಗ್ರಹಣವಿರುವ “ಓಊ 66” ಚಿತ್ರಕ್ಕೆ ಸ್ವಾಮಿನಾಥನ್ ಅವರ ಸಂಗೀತ ನಿರ್ದೇಶನವಿದೆ.