ಬಹುಮುಖ ಪ್ರತಿಭೆ ಕಾರ್ತಿಕ್ ಶರ್ಮಾ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ ನೀಡಿ, ನಟಿಸಿ ನಿರ್ದೇಶಿಸಿರುವ ಈ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ.
ನೈಜ ಘಟನೆಗಳಿಂದ ಪ್ರೇರಿತವಾದ ಈ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆಯ ಜೊತೆಗೆ ಮಂಗಳಮುಖಿಯರ (ಟ್ರಾನ್ಸ್ಜೆಂಡರ್) ಸಮುದಾಯದ ಬದುಕು, ಭಾವನೆಗಳು, ನೋವು ಹಾಗೂ ಹೋರಾಟವನ್ನು ಕಟ್ಟಿಕೊಡಲಾಗಿದಹಲವು ವರ್ಷಗಳ ಹಿಂದೆ ಕೇಳಿದ್ದ ಹಳ್ಳಿಯೊಂದರ ವಿಶಿಷ್ಟ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಒಂದು ಎಳೆಯನ್ನಿಟ್ಟುಕೊಂಡು ಈ ಕಥೆ ಹೆಣೆಯಲಾಗಿದೆ. ಈವರೆಗೆ ಬಂದಿರುವ ಮಂಗಳಮುಖಿಯರ ಕಥೆಗಳಿಗಿಂತ ಇದು ಸಂಪೂರ್ಣ ಭಿನ್ನವಾಗಿದ್ದು, ಸುಮಾರು 80% ಜನರಿಗೆ ತಿಳಿಯದ ಅಚ್ಚರಿಯ ಆಚರಣೆ ಹಾಗೂ ವಾಸ್ತವ ಸಂಗತಿಗಳು ಸಿನಿಮಾದಲ್ಲಿರಲಿವೆ ಎನ್ನುತ್ತಾರೆ ಕಾರ್ತಿಕ್. ಬರವಣಿಗೆ, ನಟನೆ ಮತ್ತು ಸಂಗೀತ ಎಲ್ಲವನ್ನೂ ತಾವೇ ನಿಭಾಯಿಸಿರುವ ಕಾರ್ತಿಕ್, ಈ ಕಥೆ ಒಬ್ಬ ನಿರ್ದೇಶಕನಾಗಿ ತಮಗೆ ದೊಡ್ಡ ಮಟ್ಟದ ಸೃಜನಶೀಲ ಸವಾಲನ್ನು ಒಡ್ಡಿದೆ ಎಂದಿದ್ದಾರೆ.ಚಿತ್ರದ ತಾರಾಗಣದಲ್ಲಿ ನೃತ್ಯಪಟು ಹಾಗೂ ನಟಿ ತನ್ವಿ ರಾವ್ `ರಾಧೆ’ ಎಂಬ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟ ಪ್ರಣವ್ ಶ್ರೀಧರ್ `ಅಭಿಮನ್ಯು’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ತಿಕ್ ಶರ್ಮಾ ಅವರು `ಮಾಧವ’ ಹಾಗೂ `ಮಾಧವಿ‘ ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಣವ್ ಮತ್ತು ತನ್ವಿ ರಾವ್ ಅವರೊಂದಿಗಿನ ದೃಶ್ಯಗಳು ಟ್ರೆöÊಆಂಗಲ್ ಲವ್ ಸ್ಟೋರಿಯ ಆಳವನ್ನು ತೆರೆದಿಡಲಿವೆ. ಇವರೊಂದಿಗೆ ಶ್ರೀ ವೈಷ್ಣವ್ `ಬ್ಯಾಟರಿ’ ಪಾತ್ರದಲ್ಲಿ ಹಾಗೂ ವೇದಾ ರಾವ್ `ತ್ರಿವೇಣಿ’ ಪಾತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.ಕಾರ್ತಿಕ್ ಶರ್ಮಾ, ಪ್ರತಾಪ್ ಕೃಷ್ಣ ಮತ್ತು ಮನೋಜ್ ಕುಮಾರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. `ಹೊಂಬಾಳೆ ಮ್ಯೂಸಿಕ್’ ಭಾವಾಂತರ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.