LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಟ್ಯುನೀಷಿಯಾ ಚಲನಚಿತ್ರೋತ್ಸವದಲ್ಲಿ ಭಾರತದ ಛಾಪು; `ತೋಯಜ್' ಕಿರುಚಿತ್ರಕ್ಕೆ ಪ್ರಶಸ್ತಿ


ಟ್ಯುನೀಷಿಯಾದಲ್ಲಿ ನಡೆದ 12ನೇ ಜೆರ್ಬಾ ಅಂತರರಾಷ್ಟಿçÃಯ ಮಹಿಳಾ ಮತ್ತು ಯುವ ಚಲನಚಿತ್ರೋತ್ಸವದಲ್ಲಿ `ಗೌರವ ಅತಿಥಿ’ ರಾಷ್ಟçವಾಗಿ ಪಾಲ್ಗೊಳ್ಳುವ ಮೂಲಕ ಭಾರತ ತನ್ನ ರಾಜತಾಂತ್ರಿಕ ಮತ್ತು ಸಿನಿಮಾ ಶ್ರೇಷ್ಠತೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಿತು. ಅಕ್ಟೋಬರ್ 24ರಿಂದ 27ರವರೆಗೆ ನಾಲ್ಕು ದಿನಗಳ ಕಾಲ ನಡೆದ ಈ ಪ್ರತಿಷ್ಠಿತ ಉತ್ಸವ ಭಾರತದ ಪಾಲಿಗೆ ವಿಶೇಷವಾಗಿತ್ತು. ಭಾರತದ `ತೋಯಜ್’ ಕಿರುಚಿತ್ರ ದೇಶಕ್ಕೆ ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟಿತು.ಅಭಿಜೀತ್ ಶ್ರೀವಾಸ್ತವ ನಿರ್ದೇಶನದ ಭಾರತೀಯ ಕಿರುಚಿತ್ರ `ತೋಯಜ್’ ಈ ಅಂತರರಾಷ್ಟ್ರೀಯ ಉತ್ಸವದಲ್ಲಿ ಪ್ರದರ್ಶನಗೊಂಡಿದ್ದಷ್ಟೇ ಅಲ್ಲದೆ, ತೀವ್ರ ಸ್ಪರ್ಧೆಯಿದ್ದ ಕಿರುಚಿತ್ರ ವಿಭಾಗದಲ್ಲಿ ತೃತೀಯ ಬಹುಮಾನವನ್ನೂ ಗೆದ್ದುಕೊಂಡಿದೆ. ಇದು ಮಹತ್ವದ ಸಾಧನೆಯಾಗಿದೆ. ಚಿತ್ರದ ಕಥಾಹಂದರ ಮತ್ತು ತಾಂತ್ರಿಕ ಶ್ರೇಷ್ಠತೆ ಅಂತರರಾಷ್ಟ್ರೀಯ ಪ್ರೇಕ್ಷಕರ ಜೊತೆಗೆ ತೀರ್ಪುಗಾರರ ಮನಸ್ಸನ್ನೂ ಗೆದ್ದಿತು.
ಟ್ಯುನೀಷಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಾಮಾಜಿಕ ಮಾಧ್ಯಮ ವೇದಿಕೆ `ಎಕ್ಸ್’ನಲ್ಲಿ, `ಗೆಲುವು! 12ನೇ ಜೆರ್ಬಾ ಅಂತರರಾಷ್ಟ್ರೀಯ ಮಹಿಳಾ ಮತ್ತು ಯುವ ಚಲನಚಿತ್ರೋತ್ಸವದ ಅಧಿಕೃತ ಕಿರುಚಿತ್ರ ಸ್ಪರ್ಧೆಯಲ್ಲಿ `ವೈಟ್ ಲೋಟಸ್’ ತೃತೀಯ ಬಹುಮಾನ ಗೆದ್ದುಕೊಂಡಿದೆ! ನಿರ್ದೇಶಕ ಅಭಿಜೀತ್ ಶ್ರೀವಾಸ್ತವ ಮತ್ತು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು!? ಎಂದು ಬರೆದಿದೆ.ಮಹಿಳೆಯರು ಮತ್ತು ಯುವ ಸಿನಿಮಾ ನಿರ್ಮಾತೃಗಳಿಗೆ ಮೀಸಲಾದ ಈ ಅಂತರರಾಷ್ಟಿçÃಯ ಸಿನಿಮಾ ಹಬ್ಬದಲ್ಲಿ ವಿಶ್ವದ ವಿವಿಧ ದೇಶಗಳ ಕಲಾತ್ಮಕ ಕೃತಿಗಳು ಒಂದೆಡೆ ಸೇರಿದ್ದವು. ಭಾರತದ ಜೊತೆಗೆ ಅಲ್ಜೀರಿಯಾ, ಮೊರಾಕ್ಕೊ, ಲೆಬನಾನ್, ಈಜಿಪ್ಟ್, ಸಿರಿಯಾ, ಬಹ್ರೇನ್, ಕತಾರ್, ಕ್ರೊಯೇಷಿಯಾ, ಅಮೆರಿಕ, ಫ್ರಾನ್ಸ್ ಮತ್ತು ಪ್ಯಾಲೆಸ್ಟೀನ್ ಸೇರಿದಂತೆ 38 ದೇಶಗಳ 68 ಅತ್ಯುತ್ತಮ ಚಲನಚಿತ್ರಗಳು ಉತ್ಸವದಲ್ಲಿ ಪ್ರದರ್ಶನಗೊಂಡವು.ಉತ್ಸವದಲ್ಲಿ `ಗೌರವ ಅತಿಥಿ’ ರಾಷ್ಟçವಾಗಿ ಭಾರತಕ್ಕೆ ದೊರೆತ ವಿಶೇಷ ಮನ್ನಣೆ ಹಾಗೂ `ತೋಯಜ್’ ಕಿರುಚಿತ್ರದ ಗಮನಾರ್ಹ ಯಶಸ್ಸು ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಿನಿಮಾದ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಭಾರತ ಮತ್ತು ಟ್ಯುನೀಷಿಯಾ ನಡುವಿನ ಸಾಂಸ್ಕöÈತಿಕ ವಿನಿಮಯವನ್ನು ಗಾಢವಾಗಿಸುವಲ್ಲಿ ಮತ್ತು ಕಲಾತ್ಮಕ ಸಹಯೋಗವನ್ನು ಉತ್ತೇಜಿಸುವಲ್ಲಿ ಸಿನಿಮಾದ ಮಹತ್ವದ ಪಾತ್ರವನ್ನು ಈ ಸಾಧನೆ ಎತ್ತಿ ತೋರಿಸುತ್ತದೆ. 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST