ಕನಕಪುರ: ಇಡೀ ಭೂಮಂಡಲದಲ್ಲಿಯೇ ಸಾರ್ವಭೌಮ ಸ್ವಾತಂತ್ರ್ಯದ ನಾಡಾಗಿದ್ದ ಭಾರತವು ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು ಸಾವಿರಾರು ವರ್ಷಗಳ ಕಾಲ ದಾಸ್ಯ ಮತ್ತು ಗುಲಾಮಗಿರಿಯ ಒಳ ಪಟ್ಟಿದ್ದು ಏಕೆ ಎಂಬುದನ್ನು ನಮ್ಮ ದೇಶದ ಪ್ರಜೆಗಳು ಅವಲೋಕಿಸಬೇಕು ಎಂದು ನಗರದ ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ತಿಳಿಸಿದರು. ಬನವಾಸಿ ಸರ್ಕಾರಿ ಪ್ರೌಢಶಾಲೆಯಲ್ಲಿ ದೇಶದ 80 ನೇ ಸ್ವಾತಂತ್ರ್ಯ ದಿನೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಧ್ವಜಾರೋಹಣ ವನ್ನು ನೆರವೇರಿಸಿ ಮಾತನಾಡಿದ ಅವರು ನಮ್ಮ ಈ ದೇಶದಲ್ಲಿ ಮನುವಾದಿಗಳು ಸೃಷ್ಟಿಸಿದ ಮೇಲು ಕೀಳೆಂಬ ಅನಿಷ್ಟ ಜಾತಿ ಪದ್ಧತಿಯ ವ್ಯವಸ್ಥೆ ಯಿಂದಾಗಿ ಒಂದು ಜಾತಿಯನ್ನು ಕಂಡರೆ ಇನ್ನೊಂದು ಜಾತಿಗೆ ಆಗದಂತಹ, ಒಬ್ಬ ರಾಜನನ್ನು ಮತ್ತೊಬ್ಬ ರಾಜ ಮತ್ತೊಬ್ಬ ಸಾಮಂತ ವಿರೋಧಿಸುವಂತಹ ಅಸಹಿಷ್ಣು ಮನಸ್ಥಿತಿಯನ್ನ ಬಿತ್ತಿದ್ದರ ಪರಿಣಾಮವಾಗಿ ಭಾರತ ದೇಶ ತನ್ನಲ್ಲಿದ್ದ ಸಾರ್ವಭೌಮತೆ ಸ್ವಾತಂತ್ರ್ಯವನ್ನು ಕಳೆದು ಕೊಂಡು ಮೊಘಲರು,ಡಚ್ಚರು ಊಣರು,ಪೋರ್ಚುಗೀಸ ರು,ಬ್ರಿಟಿಷರು ಸೇರಿದಂತೆ ಹಲವು ಪರಕೀಯರ ದಾಳಿಗೆ ತುತ್ತಾಗಿ ದಾಸ್ಯಕ್ಕೆ ಒಳ ಪಡುವಂತಾಯಿತು ಎಂದರು ದಾಸ್ಯಕ್ಕೆ ಸಿಲುಕಿದ್ದ ಭಾರತವನ್ನು 1818 ರಲ್ಲಿ ಪೇಶ್ವೆ ಬಾಜಿ ರಾಯ ಮತ್ತು ಬ್ರಿಟಿಷರ ವಿರುದ್ಧ ದೇಶದ ಮೂಲ ನಿವಾಸಿ ಸಿದ್ಧನಾಕ ಹೋರಾಡಿ ಜಯಗಳಿಸಿ ದೇಶದ ಮೂಲ ನಿವಾಸಿಗಳ ಶಕ್ತಿ ಸಾಮರ್ಥ್ಯವನ್ನು ನಿರೂಪಿಸಿನು,ಇದರ ಸವಿ ನೆನಪಿಗಾಗಿ ಕೋರೆಗಾವ್ ಎಂಬ ಸ್ಥಳದಲ್ಲಿ ಒಂದು ಐತಿಹಾಸಿಕ ಸ್ಮಾರಕವನ್ನು ಸಿದ್ದನಾಕ ಮತ್ತು ಅವರ ತಂಡದ ಹುತಾತ್ಮ ಸೈನಿಕರ ನೆನಪಿಗಾಗಿ ವಿಕ್ಟೋರಿಯಾ ರಾಣಿ ನಿರ್ಮಿಸಿದರು ಎಂದು ತಿಳಿಸಿದರು.
ಈ ಎಲ್ಲಾ ಘಟನೆಯಿಂದ ಪ್ರೇರಣೆ ಪಡೆದ ಗಾಂಧೀಜಿ, ಜವಾಹರ್ ಲಾಲ್ ನೆಹರು ಸರ್ದಾರ್ ವಲ್ಲಭಬಾಯಿ ಪಟೇಲ್,ಸರೋಜಿನಿ ನಾಯ್ಡು ಬಾಲಗಂಗಾಧರನಾಥ ತಿಲಕ್, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ ರಾಜಗುರು ಮೊದಲಾದವರು ಶಾಂತಿ ಮತ್ತು ಕ್ರಾಂತಿಯಿಂದ ದೇಶವು ಸ್ವಾತಂತ್ರ್ಯಗಳಿಸ ಬೇಕು ಎಂಬ ಸ್ವತಂತ್ರ ಹೋರಾಟಗಳನ್ನು ಏಕಕಾಲಕ್ಕೆ ಪ್ರಾರಂಭಿಸಿದರು, ಜುಲೈ 1947ಕ್ಕೆ ಬ್ರಿಟಿಷ್ ಸರ್ಕಾರ ಭಾರತಕ್ಕೆ ಸ್ವಾತಂತ್ರ್ಯವನ್ನು ಘೋಷಿಸಿ ಸ್ವಾತಂತ್ರ್ಯ ವನ್ನು ನೀಡಿದರೂ ಸಹ ಅದನ್ನು ಆಗಸ್ಟ್ 15 1947ರ ವರೆಗೆ ಮುಂದೂಡಲಾಯಿತು ಇದು ಇತಿಹಾಸದಲ್ಲಿ ಇತಿಹಾಸ ಕಾರರು ಎಲ್ಲಿಯೂ ದಾಖಲೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದರು. 1848 ರಿಂದ 1950 ಜನವರಿ 26 ರ ವರೆಗೆ ಈ ನೆಲದ ಆದಿ ಗುರು ಭಗವಾನ್ ಬುದ್ಧ ಮತ್ತು ಬಸವಾದಿ ಶರಣರ ತತ್ವ ಸಿದ್ಧಾಂತಗಳಿಂದ ಪ್ರೇರೇಪಿತರಾಗಿ ಮಹಾರಾಷ್ಟ್ರ ದ ಸತಾರ ಜಿಲ್ಲೆಯ ಕಟಗುಣ ಎಂಬ ಹಳ್ಳಿಯ ಮಹಾತ್ಮ ಜ್ಯೋತಿಬಾ ಫುಲೆ,ಸಾವಿತ್ರಿ ಬಾಪುಲೆ ಹಾಗು ಕೊಲ್ಲಪುರದ ಛತ್ರಪತಿ ಶಾಹು ಜಿ ಮಹಾರಾಜ, ಕೇರಳದ ಮಹಾತ್ಮಾ ಅಯ್ಯನ್ ಕಾಳಿ ಶ್ರೀ ನಾರಾಯಣ ಗುರು, ತಮಿಳುನಾಡಿನ ತಂದೆ ಪೆರಿಯಾರ್ ,ಕರ್ನಾಟಕದ ನಾಲ್ವಡಿ ಕೃಷ್ಣರಾಜ ಒಡೆಯರ್, ಮಹಾರಾಷ್ಟçದ ಪೂಜ್ಯ ಡಾ ಅಂಬೇಡ್ಕರ್ ರವರ ನೇತೃತ್ವದಲ್ಲೂ ಸಹ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಯಶಸ್ವಿ ಸಂಗ್ರಾಮ ಆಂದೋಲನವನ್ನು ನಡೆಸಿದ್ದರು. ಪ್ರಜಾಪ್ರಭುತ್ವಕ್ಕಾಗಿಯೇ ನಡೆದ ಬಹುದೊಡ್ಡ ಹೋರಾಟ ಮಹಾತ್ಮ ಜ್ಯೋತಿಬಾ ಫುಲೆ ಅವರಿಂದ ಆರಂಭವಾದರೂ ಈ ಹೋರಾಟಕ್ಕೆ ಹೆಚ್ಚಿನ ಪ್ರಚಾರ ಮತ್ತು ಆದ್ಯತೆಯನ್ನು ರಾಷ್ಟçಮಟ್ಟದಲ್ಲಿ ನೀಡದಿರುವುದು ಇತಿಹಾಸದ ಮೇಲೆ ಎಸಗಿದ ಘೋರ ಅಪಚಾರ ಮತ್ತು ದುರಂತವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ ಅವರು ವಿದ್ಯಾರ್ಥಿ ಯುವ ಸಮುದಾಯವು ಚರಿತ್ರೆಯಲ್ಲಿ ಮರೆ ಮಾಚಲ್ಪಟ್ಟ ಕೆಲವು ಇತಿಹಾಸವನ್ನು ಅಧ್ಯಯನ ಮಾಡುವ ಮೂಲಕ ದೇಶದ ಸತ್ಯದ ಇತಿಹಾಸವನ್ನು ಅರಿಯಬೇಕು ಎಂದು ಸಲಹೆ ನೀಡಿದರು
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಣಿ ಪುಷ್ಪಲತಾ ಎಸ್ ಡಿ ಎಂ ಸಿ ಅಧ್ಯಕ್ಷ ನಾಗೇಶ್ ಮಹದೇವ ನಾಯಕ ಸಿಂಹಾದ್ರಿ ಎಸ್ಟೇಟ್ ನ ಸಿಂಹ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಂಜುನಾಥ್ ರಾಜೇಶ್ ಪ್ರಕಾಶ್ ಉಪಾಧ್ಯಾಯರುಗಳಾದ ಎನ್ ರಾಜೇಶ್ ಸಹ ಶಿಕ್ಷಕರಾದ ಕೆ ರಾಜೇಶ್, ಗಾನಶ್ರಿ, ಸಿಂಚನ,ಹರೀಶ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು,ಶಾಲಾ ಮಕ್ಕಳು ದೇಶಭಕ್ತಿ ಗೀತೆಗಳ ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟರು.