ಮುಳಬಾಗಿಲು: ಮಳೆಯಿಲ್ಲದೆ ರೈತಾಪಿ ವರ್ಗ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗದೆ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಅಲ್ಪಸ್ವಲ್ಪ ನೀರಿನಿಂದ ಬೆಳೆದ ಟೊಮ್ಯಾಟೊಗೆ ಬೆಲೆ ಇಲ್ಲದೆ ರೈತಾಪಿ ವರ್ಗದವರು ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರ ಈ ಬಗ್ಗೆ ಹೆಚ್ಚಿನ ಕಾಲಜಿ ವಹಿಸುವಂತೆ ಆದಿವೇಶನದಲ್ಲಿ ಆಗ್ರಹಿಸಲಾಗುವುದು ಎಂದು ಶಾಸಕ ಸಮೃದ್ಧಿ ವಿ ಮಂಜುನಾಥ್ ತಿಳಿಸಿದರು.ತಾಲ್ಲೂಕಿನ ತಿರುಮನಹಳ್ಳಿ ನೂತನ ಹಾಲು ಉತ್ಪಾದಕರ ಸಂಘ ಉದ್ಘಾಟನೆ ಮಾಡಿ ಮಾತನಾಡಿ, ರೈತರ ಜೀವನಾಡಿಯಾಗಿರುವ ಹೈನುಗಾರಿಕೆ ವೃತ್ತಿಯಿಂದ 15 ಸ್ವಲ್ಪ ಹಣ ಬರುತ್ತಿರುವುದರಿಂದ ಜೀವನ ನಡೆಸಲು ಸಾಧ್ಯವಾಗುತ್ತಿದೆ. ರೈತರಿಂದ ಖರೀದಿ ಮಾಡುವ ಪ್ರತಿ ಲೀಟರ್ ಹಾಲಿನ ದರ ಏರಿಕೆ ಮಾಡಬೇಕೆಂದು ವಿಧಾನಸಭೆೆ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ತಿಳಿಸಿದರು. ತಾಲ್ಲೂಕಿನ ಇಬ್ಬರು ನಿರ್ದೇಶಿಕರು ಹೊಸ ಡೈರಿಗಳ ಸ್ಥಾಪನೆಗೆ ಹಾಗೂ ಸಿಗುತ ಗೊಂಡಿರುವ ಡೈರಿಗಳನ್ನು ಪ್ರಾರಂಭಿಸಲು ಹೆಚ್ಚಿನ ಕಾಲಜಿ ವಹಿಸುತ್ತಿರುವುದು ಸಂತೋಷದ ಸಂಗತಿ ರೈತರ ಪರ ಯಾವುದೇ ಹೋರಾಟ ನಡೆಸಲು ಸಿದ್ಧ ಇದ್ದೇನೆ ತಾಲ್ಲೂಕಿನಲ್ಲಿ ಹೈನುಗಾರಿಕೆಯನ್ನು ಹೆಚ್ಚಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ತಿರುಮನಹಳ್ಳಿ ಮದ್ದಾರ ಕಳೆದ ಚುನಾವಣೆ ನನಗೆ ಬೆಂಬಲಿಸಿದ್ದಾರೆ ಈ ಗ್ರಾಮಕ್ಕೆ ಬೇಕಾದ ಎಲ್ಲಾ ರೀತಿಯ ಮೂಲ ಸೌಲಭ್ಯವನ್ನು ಕಲ್ಪಿಸಲಾಗುವುದು ಕಳೆದ ಬಾರಿ ನೀಡಿದ ಭರವಸೆಯಂತೆ ವೇಣುಗೋಪಾಲ್ ಮಹಾ ದ್ವಾರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದೇನೆ ಎಂದು ತಿಳಿಸಿದರು.ಕೋಮು ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿ. ಇತ್ತೀಚಿನ ದಿನಗಳಲ್ಲಿ ರೈತಾಪಿ ವರ್ಗಕ್ಕೆ ಹೈನುಗಾರಿಕೆ ನಡೆಸಲು ಹೆಚ್ಚು ಖರ್ಚು ಮಾಡಬೇಕಾಗಿದೆ ಈಗ ಸರ್ಕಾರ ರೈತರಿಗೆ ನೀಡುತ್ತಿರುವ ಬೆಲೆ ಸಾಕಾಗುತ್ತಿಲ್ಲ ಆದ ಕಾರಣ ಕೂಡಲೇ ಒಂದು ಲೀಟರ್ ಹಾಲುಗೆ 10 ರೂ ನೀಡಬೇಕು ಈ ಸಂಬಂಧ ಆಗಸ್ಟ್ 19 ರಂದು ತಾಲ್ಲೂಕಿನ 5 ಸಾವಿರ ರೈತರ ಜೊತೆಗೂಡಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ
ಮನವಿ ಸಲ್ಲಿಸಲಾಗುವುದು. ಶಾಸಕರು ಈ ಬಗ್ಗೆ ಅಧಿವೇಶನದಲ್ಲಿ ರೈತರ ಪರವಾಗಿ ವಾದ ಮಾಡಬೇಕೆಂದು ತಿಳಿಸಿದರು.ಪಶ್ಚಿಮ ಕ್ಷೇತ್ರದ ನಿರ್ದೇಶಕ ಬಿವಿ ಸಾಮೇಗೌಡ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಇದರಿಂದ ರೈತರು ತುಂಬಾ ತೊಂದರೆ ಅನುಭವಿಸಲಾಂತಾಗಿದೆ. ರೈತ ಬೆಳೆದ ಬೆಳೆಗಳಿಗೆ ಸೂಕ್ತ ದರ ಇಲ್ಲದೆ ಹಾರ್ದಿಕ ಹೋಗಿ ಸಂಕಷ್ಟದಲ್ಲಿದ್ದಾರೆ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು ಡಿಸಿಸಿ ಬ್ಯಾಂಕ್ ನಿರ್ದೇಶಕ ನಲ್ಲೂರು ರಘುಪತಿ ರೆಡ್ಡಿ. ಜೆಡಿಎಸ್ ಪಕ್ಷದ ವಕ್ತಾರ ಎಂಎಸ್ ಶ್ರೀನಿವಾಸ್ ರೆಡ್ಡಿ. ಚಾಮರಡ್ಡಿಹಳ್ಳಿ ಡಾ ಸಿಎನ್ ಪ್ರಕಾಶ್. ಮುಖಂಡರಾದ ಗೊಲ್ಲಹಳ್ಳಿ ಪ್ರಭಾಕರ್. ರೆಡ್ಡಪ್ಪ ರೆಡ್ಡಿ. ಕವತನಹಳ್ಳಿ ಮುನಿಸ್ವಾಮಿ ಗೌಡ. ಮುನಿಸ್ವಾಮಿ ಗೌಡ. ಲಕ್ಷಿ÷್ಮ ಪ್ರಿಯ ಅಕ್ಷಯ ಮಂಜುನಾಥ್. ಸತ್ಯಣ್ಣ. ಎಮ್ಮೆನತ್ತ ವೆಂಕಟೇಶ್. ಪಾಪಣ್ಣ. ಪೆದ್ದೂರು ವರದಪ್ಪ. ವೆಂಕಟರಮಣಪ್ಪ. ಡಿ ವಿಆರ್ ರಘು. ಡೈರಿ ಅಧ್ಯಕ್ಷ ಎನ್ ಮಂಜುನಾಥ್. ಉಪಾಧ್ಯಕ್ಷ ವಿ ಸುಬ್ರಮಣಿ. ಕಾರ್ಯದರ್ಶಿ ಟಿಎಸ್ ವಿಜಿ ಕುಮಾರ್. ಒಕ್ಕೂಟದ ಅಧಿಕಾರಿ ಚೇತನ್. ಉಪ ವ್ಯವಸ್ಥಾಪಕ ಡಾ ಕೆ ಕಿರಣ್. ವಿಸ್ತೀರ್ಣಾಧಿಕಾರಿಗಳಾದ ಎನ್ ವೇಣು. ಈ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.