LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಪಡಿಕ್ಕಲ್ 167, ಜುರೆಲ್ 51, 2ನೇ ದಿನದಾಟದಂತ್ಯಕ್ಕೆ ಭಾರತ 460/9


ಕ್ರೀಡೆ: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಗಾಲೆ ಅಂತರರಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೊದಲ ಎರಡು ದಿನಗಳ ಆಟ ಅಂತ್ಯವಾಗಿದ್ದು ಟೀಮ್ ಇಂಡಿಯಾ 9 ವಿಕೆಟ್ ನಷ್ಟಕ್ಕೆ 460 ರನ್ ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ.  ಮೊದಲ ದಿನದ ಅಂತ್ಯಕ್ಕೆ 131 ರನ್ ಗಳಿಸಿ ಅಜೇಯರಾಗಿದ್ದ ಕರ್ನಾಟಕದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್, ಎರಡನೇ ದಿನವೂ ಅದ್ಭುತ ಪ್ರದರ್ಶನ ನೀಡಿದರು. ಅವರು ಅಸಿತ ಫೆರ್ನಾಂಡೋ ಅವರ ಬೌಲಿಂಗ್‌ನಲ್ಲಿ ಫೋರ್ ಬಾರಿಸುವ ಮೂಲಕ 215 ಎಸೆತಗಳಲ್ಲಿ ತಮ್ಮ ಚೊಚ್ಚಲ 150 ರನ್‌ಗಳ ಮೈಲಿಗಲ್ಲನ್ನು ದಾಟಿದರು. ಒಟ್ಟಾರೆ 167 ರನ್ ಗಳಿಸಿದ ಪಡಿಕ್ಕಲ್, ಪ್ರಭಾತ್ ಜಯಸೂರ್ಯ ಅವರ ಸ್ಪಿನ್ ಜಾಲಕ್ಕೆ ಸಿಲುಕಿ ಸ್ಟಂಪ್ ಔಟ್ ಆದರು. ಮಿಂಚಿದ ಶ್ರೀಲಂಕಾ ಸ್ಪಿನ್ನರ್: ಮೊದಲ ದಿನ 288 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಭದ್ರವಾಗಿದ್ದ ಭಾರತಕ್ಕೆ ಎರಡನೇ ದಿನ ಶ್ರೀಲಂಕಾ ಸ್ಪಿನ್ನರ್‌ಗಳು ಭಾರಿ ಶಾಕ್ ನೀಡಿದರು. ಮಳೆಯ ವಿರಾಮದ ನಂತರ ಲೈನ್ ಮತ್ತು ಲೆಂತ್ ಕಂಡುಕೊAಡ ಆತಿಥೇಯ ಬೌಲರ್‌ಗಳು 172 ರನ್ ನೀಡುವಷ್ಟರಲ್ಲಿ ಭಾರತದ 7 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಮೊದಲ ದಿನ 27 ರನ್ ಗಳಿಸಿದ್ದ ಪಂತ್ ಬಿರುಸಿನ ಆಟಕ್ಕೆ ಕೈಹಾಕಿ 39 ರನ್‌ಗಳಿಗೆ ಔಟಾದರು. ಮೊದಲ ದಿನದಂದು ಕ್ರಾ÷್ಯಂಪ್ಸ್ (ಸ್ನಾಯು ಸೆಳೆತ) ಕಾರಣದಿಂದಾಗಿ 77 ರನ್ ಗಳಿಸಿದ್ದಾಗ ನಿವೃತ್ತಿಯಾಗಿದ್ದ ರಾಹುಲ್, ಎರಡನೇ ದಿನ ಮತ್ತೆ ಕ್ರೀಸ್‌ಗೆ ಬಂದರಾದರೂ ಆ ಮೊತ್ತಕ್ಕೆ ಕೇವಲ 4 ರನ್ ಸೇರಿಸಿ ಔಟಾದರು. ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದೆ ಕೇವಲ 6 ರನ್ ಗಳಿಸಿ ಎಲ್‌ಬಿಡಬ್ಲೂ÷್ಯ ಆದರು. ಭಾರತ 377 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಜವಾಬ್ದಾರಿಯುತ ಆಟವಾಡಿದರು. 29 ರನ್ ಗಳಿಸಿದ್ದಾಗ ಕ್ಯಾಚ್ ಕೈಬಿಟ್ಟ ಶ್ರೀಲಂಕಾ ನಾಯಕ ಧನಂಜಯ ಡಿ ಸಿಲ್ವಾ ಅವರ ತಪ್ಪಿನ ಲಾಭ ಪಡೆದ ಜುರೆಲ್, ಸತತ ವೈಫಲ್ಯಗಳ ನಂತರ ಕೊನೆಗೂ ಅರ್ಧಶತಕ (57 ರನ್) ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಆಲ್-ರೌಂಡರ್ ಮಾನವ್ ಸುತಾರ್ 24 ರನ್ ಕೊಡುಗೆ ನೀಡಿದರು. ಜುರೆಲ್ ಬೆನ್ನಲ್ಲೇ ಸಿರಾಜ್ 11, ಮಾನವ್ ಸುತಾರ್ 24 ರನ್ ಗಳಿಸಿ ಔಟ್ ಆದರು. ಪ್ರಸ್ತುತ ಭಾರತ ತಂಡ 9 ವಿಕೆಟ್ ಕಳೆದುಕೊಂಡು 460 ರನ್ ಗಳಿಸಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST