LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಹೈಲೋ ಓಪನ್ ಗೆದ್ದ ಪಿವಿ ಸಿಂಧು, ಲಕ್ಷ್ಯಸೇನ್


ಸಾರ್‌ಬ್ರೂಕನ್: ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಹಾಗೂ ಯುವ ತಾರೆ ಲಕ್ಷ್ಯಸೇನ್ ಭಾನುವಾರ ಮುಕ್ತಾಯಗೊಂಡ ಹೈಲೋ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ-ಪುರುಷರ ಸಿಂಗಲ್ಸ್ನಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸಿದರು. ವಿಶ್ವ ನಂ.8 ಸಿಂಧು 21-12, 21-14 ನೇರ ಗೇಮ್?ಗಳಿಂದ ವಿಶ್ವ ನಂ.25 ಲೈನ್ ಹೋಜ್‌ಮಾರ್ಕ್ ಕರ್ಜೆಲ್ಡ್ರನ್ನು ಮಣಿಸಿದರು. ಈ ಮೂಲಕ ಹಾಲಿ ವರ್ಷ 2ನೇ ಹಾಗೂ ವೃತ್ತೀಜಿವನದ 7ನೇ ಬಿಡಬ್ಲುಎಫ್ ಟೂರ್ ಪ್ರಶಸ್ತಿ ಒಲಿಸಿಕೊಂಡರು. ಕಳೆದ ವಾರ ಫ್ರೆಂಚ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದ 31 ವರ್ಷದ ಸಿಂಧು, ಇದಕ್ಕೆ ಮುನ್ನ ಜಪಾನ್‌ಸೂಪರ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಪುರುಷರ ವಿಭಾಗದಲ್ಲಿ ಲಕ್ಷ್ಯಸೇನ್ 21-7, 21-10 ರಿಂದ 4ನೇ ಶ್ರೇಯಾಂಕಿತ ಜೋನಾಥನ್ ಕ್ರಿಸ್ಟಿ ಎದುರು ಜಯ ಸಾಧಿಸಿ, ಹಾಲಿ ವರ್ಷ ಮೊದಲ ಪ್ರಶಸ್ತಿ ಒಲಿಸಿಕೊಂಡರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST