ಬೆಂಗಳೂರು: ಹಾಲಿನ ದರ ಏರಿಕೆ ಬೆನ್ನಲ್ಲೇ ಅದರ ಉತ್ಪನ್ನಗಳ ಬೆಲೆಯಲ್ಲೂ ಹೆಚ್ಚಳವಾಗ್ತಿದ್ದು, ಮೊಸರಿನ ಬೆಲೆಯಲ್ಲೂ ಗಣನೀಯ ಏರಿಕೆಯಾಗಿದೆ. ಲೀಟರ್‌ಗೆ ಮೊಸರಿನ ಬೆಲೆ ರೂ.54 ರಿಂದ ರೂ.68ಕ್ಕೆ ಹೆಚ್ಚಿದ್ದು, ಬರೋಬ್ಬರಿ 14 ರೂಪಾಯಿ ಏರಿಕೆ ಕಂಡಿದೆ. ಅರ್ಧ ಲೀಟರ್ ಮೊಸರಿನ ಪ್ಯಾಕೆಟ್ ಬೆಲೆಯಲ್ಲಿ 6 ರೂಪಾಯಿ ಹೆಚ್ಚಳವಾಗಿದ್ದು, ರೂ.28 ರಿಂದ ರೂ.34ಕ್ಕೆ ತಲುಪಿದೆ. ಈಗಾಗಲೇ ನಂದಿನಿ ಹಾಲಿನ ದರ ಲೀಟರ್‌ಗೆ ರೂ.8 ಏರಿಕೆಗೆ ನಿರ್ಧರಿಸಲಾಗಿದ್ದು, ನಂದಿನಿ ಹಾಲು ಮತ್ತು ಮೊಸರಿನ ಈ ಪರಿಷ್ಕöÈತ ದರ ನಾಳೆಯಿಂದಲೇ ರಾಜ್ಯದಲ್ಲಿ ಜಾರಿಗೆ ಬರಲಿದೆ.