ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ಅತಿದೊಡ್ಡ ಆಘಾತ ನೀಡಿದ್ದ ಅಭಿನಯ ಚಕ್ರವರ್ತಿ, ಪವರ್ ಸ್ಟಾರ್ ಡಾ. ಪುನೀತ್ ರಾಜ್ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ ಬರೋಬ್ಬರಿ 5 ವರ್ಷಗಳು ಪೂರೈಸಿವೆ. ಅಕಾಲಿಕ ಹೃದಯಾಘಾತದಿಂದ ಭೌತಿಕವಾಗಿ ದೂರವಾದರೂ, ಅಭಿಮಾನಿಗಳ ಮನಸ್ಸಿನಲ್ಲಿ 'ಅಪ್ಪು' ಅಮರರಾಗಿದ್ದಾರೆ. ಈ ಕಹಿ ನೆನಪಿನ ಸವಿನೆನಪಿಗಾಗಿ ಇಂದು ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ಕುಮಾರ್ ಅವರ ಸಮಾಧಿ ಆವರಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.ಸಮಾಧಿ ಸ್ಥಳವನ್ನು ಸುಂದರವಾಗಿ ಅಲಂಕರಿಸಲಾಗಿದ್ದು, ಡಾ. ಪುನೀತ್ ರಾಜ್ಕುಮಾರ್ ಅವರಿಗೆ ಜೀವಿತಾವಧಿಯಲ್ಲಿ ಅತ್ಯಂತ ಇಷ್ಟವಾಗುತ್ತಿದ್ದ ವಿವಿಧ ಬಗೆಯ ತಿಂಡಿ-ತಿನಿಸುಗಳನ್ನು ಎಡೆ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ದಲ್ಲಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್, ಪುತ್ರಿ ವಂದಿತಾ, ಹಿರಿಯ ಸಹೋದರ ರಾಘವೇಂದ್ರ ರಾಜ್ ಕುಮಾರ್, ಮಂಗಳ ರಾಘವೇಂದ್ರ, ಗುರು ರಾಘವೇಂದ್ರ, ನಟ ವಿನಯ್ ರಾಜ್ಕುಮಾರ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದು ಪೂಜೆ ನೆರವೇರಿಸಿದರು.