ಬೆಂಗಳೂರು: ಕರ್ನಾಟಕ ರಾಜ್ಯ ದೇವಾಂಗ ಸಂಘದ 2026-2031ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಚಿತ್ರದುರ್ಗ ಜಿಲ್ಲೆ ಮಲ್ಲಾಡಿಹಳ್ಳಿಯ ಹೆಚ್.ಸಿ. ಪ್ರಭಾಕರ್ ಆಯ್ಕೆಯಾಗಿದ್ದಾರೆ. ಹೆಚ್.ಸಿ. ಪ್ರಭಾಕರ್ ರವರು 27 ಮತಗಳನ್ನು ಪಡೆದು ಆಯ್ಕೆಯಾದರು. ಅಕ್ಟೋಬರ್ 4ರಂದು ಸಂಘದ 47 ನಿರ್ದೇಶಕ ಹುದ್ದೆಗಳಿಗೆ ಚುನಾವಣೆ ಘೋಷಣೆ ಆಗಿತ್ತು. ಈ ಪೈಕಿ 43 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು. ಪದಾಧಿಕಾರಿಗಳ ಹುದ್ದೆಗೆ ದಿನಾಂಕ 24-10-2026ರಂದು ಚುನಾವಣೆ ನಡೆಯಿತು. ಪದಾಧಿಕಾರಿಗಳ ಚುನಾವಣೆಯಲ್ಲಿ 43 ನಿರ್ದೇಶಕರುಗಳು ಮಾತ್ರ ಭಾಗವಹಿಸಿದ್ದರು. ನಾಲ್ವರು ಗೈರು ಹಾಜರಾಗಿದ್ದರು.
ಉಪಾಧ್ಯಕ್ಷರುಗಳಾಗಿ ಸಿ ರಾಜಣ್ಣ (ಬೆಂಗಳೂರು ನಗರ), ವತ್ಸಲ ಜಗನ್ನಾಥ್ (ದೊಡ್ಡಬಳ್ಳಾಪುರ), ಶಂಕರಪ್ಪ ಮುರುಡಿ (ರಾಮದುರ್ಗ) ಸಿ.ಎಸ್. ರವಿಕುಮಾರ್ (ಚಿಕ್ಕಮಗಳೂರು) ಪ್ರಧಾನ ಕಾರ್ಯದರ್ಶಿಗಳಾಗಿ ಜೆ. ಕಾಂತರಾಜ್ (ಬೆಂಗಳೂರು ನಗರ), ಪ್ರಧಾನ ಸಂಘಟನಾ ಕಾರ್ಯದರ್ಶಿಗಳಾಗಿ ಪ್ರೊ. ಸಿ.ಎಲ್. ಧನಪಾಲ್(ಬೆಂಗಳೂರು ನಗರ), ರಾಜ್ಯ ಕಾರ್ಯದರ್ಶಿಯಾಗಿ ಬೆಂಗಳೂರು ನಗರ ಜಿಲ್ಲೆಯ ಲಿಂಗರಾಜು ಡಿ. ನೊಣವಿನಕೆರೆ (ಅವಿರೋಧ) ಖಜಾಂಚಿಯಾಗಿ ಹಾವೇರಿಯ ಲಕ್ಷ್ಮೀಕಾಂತ್ ಎಸ್. ಹುಲಗೂರ (ಅವಿರೋಧ), ಮಾಧ್ಯಮ ಕಾರ್ಯದರ್ಶಿಯಾಗಿ ಕೆ.ಸಿ. ತಿಮ್ಮಶೆಟ್ಟಿ ರವರುಗಳು ಆಯ್ಕೆಯಾಗಿದ್ದಾರೆ. ಇನ್ನು ಸಹ ಕಾರ್ಯದರ್ಶಿಗಳಾಗಿ ಎಸ್ ಸುರೇಶ್ (ಚಿತ್ರದುರ್ಗ), ಹರೀಶ್ ಕುಮಾರ್ (ಕಡೂರು), ಎಚ್ ಪ್ರದೀಪ್ (ತುಮಕೂರು), ಬಸವರಾಜ ಮಿಣಜಗಿ- ಸೂಳೇಭಾವಿ (ಎರಡೂವರೆ ವರ್ಷ) ಆರೂಡಿ ರಮೇಶ್-ದೊಡ್ಡಬಳ್ಳಾಪುರ ( ಎರಡೂವರೆ ವರ್ಷ), ಸಂಘಟನಾ ಕಾರ್ಯದರ್ಶಿಗಳಾಗಿ ಪೀತಾಂಬ್ರಪ್ಪ ಹವೇಲಿ (ಕೆರೂರು), ಆನಂದ ಹುಲಮನಿ (ವಿಜಯಪುರ), ರವೀಂದ್ರ ಗೌಡ ಬಿಜ್ಜಲ್ (ರಾಯಚೂರು), ರಾಘವೇಂದ್ರ ಯಳವತ್ತಿ(ಗದಗ), ಚೆಲುವರಾಜಕುಮಾರ್ (ಮೈಸೂರು), ಬಸವರಾಜ ಢವಳಿ (ಬೆಳಗಾವಿ), ಅಗಳಿ ಪಂಪಾಪತಿ (ವಿಜಯನಗರ ಜಿಲ್ಲೆ) ಮತ್ತು ಎಂ. ಗುರುಶಾಂತಪ್ಪ (ಶಿವಮೊಗ್ಗ) ಇವರೆಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.