ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿದ್ದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಮುಗಿದಿದೆ. ಇಂದು ಮಧ್ಯಾಹ್ನ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ಮಧ್ಯಾಹ್ನ 3 ಗಂಟೆಗೆ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪ್ರಕಟವಾಗಲಿದೆ. ಕಳೆದ ಜೂನ್ ತಿಂಗಳಿನಿಂದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪ್ರಾರಂಭಗೊಂಡು ಕಳೆದ ಆಗಸ್ಟ್ 24 ರಂದು ಮೊದಲನೇ ಹಂತದ ಮತದಾರರ ಕರಡು ಪಟ್ಟಿ ಪ್ರಕಟಗೊಂಡಿತ್ತು.ಈ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಮತದಾರರು ಸೇರ್ಪಡೆಗೊಳ್ಳುವ ಹಾಗೂ ರದ್ದುಪಡಿಸುವ ಬಗ್ಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರತಿಪಕ್ಷಗಳ ಸಾಕಷ್ಟು ವಿರೋಧದ ನಡುವೆ ಮತದಾರರ ಪಟ್ಟಿಯಿಂದ ಹೆಸರು ಬಿಟ್ಟು ಹೋಗಿರುವ ಹಾಗೂ ಸೇರ್ಪಡೆ ಮಾಡುವ ಬಗ್ಗೆ ಸಾಕಷ್ಟು ವಾದ-ವಿವಾದಗಳು ಎದುರಾಗಿದ್ದವು. ಎಲ್ಲದರ ನಡುವೆ ಆಯೋಗ ಪರಿಷ್ಕರಣೆ ಕಾರ್ಯ ನಡೆಸಿ ಅಂತಿಮ ಪಟ್ಟಿ ಸಿದ್ದಪಡಿಸಿದೆ. ಪಟ್ಟಿ ಪ್ರಕಟಣೆ ನಂತರ ರಾಜ್ಯದ ಒಟ್ಟು ಮತದಾರರ ಪಟ್ಟಿ ಬಹಿರಂಗವಾದ ನಂತರ ರಾಜ್ಯದಲ್ಲಿರುವ ಮತದಾರರ ಸಂಖ್ಯೆ ತಿಳಿದುಬರಲಿದೆ.