ಅಮೇರಿಕಾದಲ್ಲಿ ಉದ್ಯೋಗದಲ್ಲಿರುವ ಕನ್ನಡತಿ ವಾಣಿ ಸತೀಶ್ ಸಂಗೀತ ಸಂಯೋಜಿಸಿ, ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಅವರ ಜೊತೆಗೆ ಹಾಡಿರುವ “ನಿನ್ನಂತ ಅಪರೂಪ 5.1” ಆಲ್ಬಮ್ ಹಾಡು ಇತ್ತೀಚಿಗೆ ಅನಾವರಣವಾಯಿತು. ದ್ವಾರ್ ಮ್ಯೂಸಿಕ್ ವತಿಯಿಂದ ಹೊರಬಂದಿರುವ “ಆಲ್ಬವ್ ಗೆ ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ. “ನಿನ್ನಂತ ಅಪರೂಪ” ಹಾಡು ಸಿನಿಮಾ ಹಾಡಿನ ರೀತಿಯಲ್ಲಿ ಮೂಡಿಬಂದಿದೆ.ಮೂಲತಃ ದಾವವಣಗೆರೆಯ ವಾಣಿ ಸತೀಶ್, ಕೆಲಸದ ಜೊತೆ ಜೊತೆಗೆ ಅಮೇರಿಕದ ವಿವಿಧ ಭಾಗಗಳಲ್ಲಿ ಹಾಗು ಕನ್ನಡ ಕೂಟಗಳಲ್ಲಿ 150 ಕ್ಕೂ ಕಾರ್ಯಕ್ರಮ ನೀಡಿ ಹಲವು ಪ್ರಶಸ್ತಿ ಮತ್ತು ಮೆಚ್ಚುಗೆಯ ಪಡೆದುಕೊಂಡಿದ್ದಾರೆ.
ಅಮೇರಿಕಾದ ಪೋರ್ಟ್ ಲ್ಯಾಂಡ್ ನಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ವಾಣಿ ಸತೀಶ್ ಅವರು ಮತ್ತಷ್ಟು ಹಾಡು ಬಿಡುಗಡೆ ಮಾಡಲಿ. ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದರು.ಸಂಗೀತ ನಿರ್ದೇಶಕ.ಗಾಯಕಿ, ಸಂಗೀತ ನಿರ್ದೇಶಕಿ ವಾಣಿ ಸತೀಶ್ ಮಾತನಾಡಿ ಈ ಆಲ್ಬಂ ಸಾಂಗ್, ರೋಮಾಂಟಿಕ್ ಮೆಲೋಡಿ, ಬ್ಯಾಲೆ ಸ್ಟೈಲ್ ನಲ್ಲಿದೆ. ವಿಜಯ್ ಪ್ರಕಾಶ್ ಅವರ ಜೊತೆ ಹಾಡುವುದು ಬಹು ವರ್ಷದ ಕನಸು. ಇದು ನನ್ನ ಕನಸಿನ ಯೋಜನೆ ಅಂದರು.ಗೀತ ರಚನೆಕಾರ ಪ್ರಮೋದ್ ಮರುವಂತೆ ಹಾಗೂ ಮ್ಯೂಸಿಕ್ ಆರೆಂಜ್ ಮಾಡಿರುವ ಹರ್ಷವರ್ಧನ್ ರಾಜ್ ಅವರು ಸಹ ಹಾಡಿನ ಬಗ್ಗೆ ಮಾತನಾಡಿದರು.