ಮಮತ ಅಮಿನ್ ನಿರ್ಮಾಣದ ಅಜಯ್ ಸಾಗರ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ನಟಿಸಿರುವ “ಕೂಪ ಮಂಡೂಕ” ಚಿತ್ರದ ಮೋಷನ್ ಪೋಸ್ಟರ್ ಅನ್ನು ಶಿವರಾಜಕುಮಾರ್ ಬಿಡುಗಡೆ ಮಾಡಿದರು.ಕೆಲವು ಚಿತ್ರಗಳಲ್ಲೂ ಅಭಿನಯಿಸಿರುವ ಅಜಯ್ ಸಾಗರ್ ನಿರ್ದೇಶನದ ಜೊತೆ ನಾಯಕನಾಗಿ ನಟಿಸುತ್ತಿದ್ದಾರೆ.ಕನ್ನಡದಲ್ಲಿ ಅಪರೂಪ ಎನ್ನಬಹುದಾದ ಸೈಕಾಲಜಿ ಹಾಗೂ ಮೈಥಾಲಜಿ ಯ ಮಿಶ್ರಣದ ಜಾನರ್ ನಲ್ಲಿ ಈ ಚಿತ್ರ ಮೂಡಿಬಂದಿದೆ. ಆಸ್ತಿಕ ಹಾಗೂ ನಾಸ್ತಿಕನ ನಡುವೆ ನಡೆಯುವ ಕಥೆಯೂ ಇದಾಗಿದೆ. ಈಗಾಗಲೇ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಪೂರ್ಣವಾಗಿ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಅಂದರು ಅಜಯ್ ಸಾಗರ್. ತಾರಾಬಳಗದಲ್ಲಿ ಅಜಯ್ ಸಾಗರ್, ಚಿರಶ್ರಿ ಅಂಚನ್, ಕಾರ್ತಿಕ್ ರಾವ್, ಪ್ರಕಾಶ್ ತುಮಿನಾಡ್, ಚಂದ್ರಕಲಾ ಮೋಹನ್, ವಜ್ರಂಗ ಶೆಟ್ಟಿ ಮುಂತಾದವರಿದ್ದಾರೆ.