ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿದ್ದು, `ಅನಿಮಾ’ ಎಂಬ ವಿಭಿನ್ನ ಶೀರ್ಷಿಕೆಯ ಮೂಲಕ ಭಾರಿ ಸದ್ದು ಮಾಡುತ್ತಿದೆ. ಪ್ರೀತಿ, ನಿಗೂಢ ಘಟನೆಗಳು, ರಹಸ್ಯಗಳು ಹಾಗೂ ಪ್ರೇಕ್ಷಕರ ಊಹೆಗೂ ಸಿಗದ ಅನಿರೀಕ್ಷಿತ ತಿರುವುಗಳನ್ನು ಒಳಗೊಂಡಿದೆ. `ಅನಿಮಾ’ ಸಿನಿಮಾದ ಆಡಿಯೋ ಹಕ್ಕುಗಳು ಭರ್ಜರಿ ಮೊತ್ತಕ್ಕೆ ಪ್ರಮುಖ ಆಡಿಯೋ ಸಂಸ್ಥೆಯ ಪಾಲಾಗಿವೆ. ಉತ್ತಮ ಬೆಲೆಗೆ ಸಂಗೀತದ ಹಕ್ಕುಗಳನ್ನು ಖರೀದಿಸಿದೆ.ಪುನೀತ್ ಎಂ. ಎಚ್. (ವರ್ಧನ್) ಬಂಡವಾಳ ಹೂಡಿದ್ದು, ಸಂಜು ಎಂ. ಎಚ್. ಹಾಗೂ ಮಲ್ಲೇಶ್ ರೆಡ್ಡಿ ಸಹ-ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ ವರ್ಧನ್ ಎಂ. ಎಚ್., ಹೇಮಂತ್ ಕುಮಾರ್ ಎನ್. ಸಹ-ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.ನಟ ಶರತ್ ಪದ್ಮನಾಭ್ ಮತ್ತು ನಟಿ ಅನುಷಾ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅವರೊಂದಿಗೆ ಸುಶ್ಮಿತಾ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಫಾರ್ಮ್ಹೌಸ್ ಹಿನ್ನೆಲೆಯಲ್ಲಿ ಸಾಗುವ ನಿಗೂಢ ಕಥೆಇದು. ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿರುವ `ಅನಿಮಾ’ ಸದ್ಯದಲ್ಲೇ ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ.