ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ. ನಿರ್ಮಾಣದ `ಹುಬ್ಬಳ್ಳಿ ಹಂಟರ್ಸ್’ ಡಿ.11ಕ್ಕೆ ಬಿಡುಗಡೆ ಆಗಲಿದೆ.ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಆ್ಯಕ್ಷನ್ ಕಟ್ ಹೇಳಿದ್ದಾರೆ.ಉತ್ತರ ಕರ್ನಾಟಕದ ಸೊಗಡು ಸಂಸ್ಕöÈತಿ ಒಳಗೊಂಡ ಈ ಚಿತ್ರ ಹುಬ್ಬಳ್ಳಿಯಲ್ಲೇ ಮುಹೂರ್ತ ನೆರವೇರಿಸಿ ಕೊಂಡು ಮೊದಲ ಹಂತದಲ್ಲಿ ಹುಬ್ಬಳ್ಳಿಯ ಪ್ರಮುಖ ಸ್ಥಳಗಳಲ್ಲಿ ಮತ್ತು ನಂತರ ಶಿರಸಿ ಹಾಗೂ ಧಾರವಾಡದ ಸುಂದರ, ನೈಜ ತಾಣಗಳಲ್ಲೇ ಚಿತ್ರೀಕರಣ ನಡೆಸಿದೆ.ಪ್ರಮೋದ್ ಶೆಟ್ಟಿ,ಚೇತನ್ ಮಾರಂಬೀಡ್, ಪವನ್ ಕುಲಕರ್ಣಿ, ಸುಮಿತ್ ಸಂಕೋಜಿ, ನಮನ್ ಅರೋರ, ಧನ್ಯಶ್ರೀ ಸುಜಿತ್, ವನು ಪಾಟೀಲ್ ದೀಪಕ್ ರಾವ್, ಶಿವು ಗುಂಡಣ್ಣನವರ್, ವಿನಯ್ ದೊಡ್ಡಮನಿ,ಪವನ್ ಅಣ್ಣೆಗೇರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ನಟರಾದ ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ರಮೇಶ್ ಭಟ್ ಚಿತ್ರದ ತಾರಾಗಣ ಇದೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ ಕಂಟೆAಟ್ ಕ್ರಿಯೇಟರ್ಸ್ ಈ ಚಿತ್ರದ ಮೂಲಕ ದೊಡ್ಡ ಪರದೆಗೆ ಬಣ್ಣ ಹಚ್ಚುತ್ತಿರುವುದು ವಿಶೇಷ. ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಈ ಚಿತ್ರಕ್ಕೆ ಕಥೆ ಬರೆದಿದ್ದು, ರಾಹುಲ್ ವಿ. ಪರ್ವತಿಕರ್, ಅಮಿತ್ ಕಾರ್ವ್ಕರ್ ಮತ್ತು ಚೇತನ್ ಮರಂಬೀದ್ ಅವರೊಂದಿಗೆ ಜಂಟಿಯಾಗಿ ಸಂಭಾಷಣೆ ಹೆಣೆದಿದ್ದಾರೆ.