LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಸತ್ಯ ಸನ್ ಆಫ್ ಹರಿಶ್ಚಂದ್ರ’  ಚಿತ್ರದ ಟೀಸರ್ ರಿಲೀಸ್


 ನಟ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿರುವ `ಸತ್ಯ ಸನ್ ಆಫ್ ಹರಿಶ್ಚಂದ್ರ’ ಸಿನಿಮಾದ ಟೀಸರ್  ಬಿಡುಗಡೆಯಾಗಿದೆ. ತೀರ್ಥಹಳ್ಳಿ ಸೇರಿದಂತೆ ಸುಂದರ ತಾಣಗಳಲ್ಲಿ ಚಿತ್ರ ಚಿತ್ರೀಕರಣಗೊಂಡಿದೆ ಟೀಸರ್‌ಗೆ ಧ್ವನಿ ನೀಡುವ ಮೂಲಕ ಚಿತ್ರತಂಡಕ್ಕೆ ಶಿವಣ್ಣ ಶುಭ ಹಾರೈಸಿದ್ದಾರೆ.ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ಸಾಯಿಕುಮಾರ್ ಅವರು ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. “ರಾಜಾ ಹರಿಶ್ಚಂದ್ರ ಕಾಲದಿಂದಲೂ ಈ ಹೆಸರಿಗೆ ಒಂದು ದೊಡ್ಡ ಗೌರವ ಮತ್ತು ತೂಕವಿದೆ. ಕಥೆ ಕೇಳಿದ ತಕ್ಷಣ ನನಗೆ ತುಂಬಾ ಇಷ್ಟವಾಯಿತು. ‘ರಂಗಿತರಂಗ’ ನಂತರ ಮತ್ತೆ ನಿರೂಪ್ ಜೊತೆ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ. ಸಿನಿಮಾದಲ್ಲಿ ನನ್ನ ಪಾತ್ರದ ಹೆಸರು ಹರಿಶ್ಚಂದ್ರ, ನಾನು ಸತ್ಯವನ್ನೇ ಹೇಳುತ್ತೇನೆ, ಇದು ನಿಜಕ್ಕೂ ಅತ್ಯುತ್ತಮವಾದ, ಭಾವನಾತ್ಮಕವಾದ ಸಿನಿಮಾ” ಎಂದರು. ಇದೇ ವೇಳೆ ಶಿವಣ್ಣ ಅವರ ಎಂಟ್ರಿ ಕುರಿತು ಮೆಲುಕು ಹಾಕಿದ ಸಾಯಿಕುಮಾರ್, “ಶಿವಣ್ಣನನ್ನು ಭೇಟಿಯಾದಾಗ ಈ ಕಥೆ ಹಾಗೂ ಪಾತ್ರದ ಬಗ್ಗೆ ಪ್ರಸ್ತಾಪಿಸಿದೆ. ಅವರು ತಕ್ಷಣವೇ ನಿರೂಪ್‌ಗೆ ಕರೆ ಮಾಡಲು ಹೇಳಿ, ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಪಾತ್ರ ಮಾಡಲು ಒಪ್ಪಿಕೊಂಡರು. ಅವರ ಉಪಸ್ಥಿತಿ ಸಿನಿಮಾಗೆ ಬಹುದೊಡ್ಡ ಬಲ ತಂದಿದೆ” ಎಂದರು.
ನಾಯಕ ನಟ ನಿರೂಪ್ ಭಂಡಾರಿ ಮಾತನಾಡಿ, “ಈ ಸಿನಿಮಾಗಾಗಿ ನನ್ನ ಜೀವನದ ಎರಡು ವರ್ಷಗಳನ್ನು ಮೀಸಲಿಟ್ಟಿದ್ದೇನೆ. ನಿರ್ದೇಶಕ ಸಚಿನ್ ಕಥೆ ಹೇಳಿದಾಗ ಇಷ್ಟವಾಯಿತು, ನಾವಿಬ್ಬರೂ ಜೊತೆಯಾಗಿ ಕುಳಿತು ಎರಡು-ಮೂರು ತಿಂಗಳು ಲ್ಯಾಪ್‌ಟಾಪ್‌ನಲ್ಲೇ ಸಂಪೂರ್ಣ ಚಿತ್ರಕಥೆಯನ್ನು ಹೊಸದಾಗಿ ತಿದ್ದಿ ತೀಡಿದೆವು. ಹರಿಶ್ಚಂದ್ರನ ಪಾತ್ರಕ್ಕೆ ಸಾಯಿಕುಮಾರ್  ಸೂಕ್ತ ಎಂದು ನಮ್ಮ ತಂದೆ ಸೂಚಿಸಿದರು. ಇನ್ನು ಶಿವಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದ ಸಮಯದಲ್ಲೂ ಅವರು ತೋರಿದ ಬದ್ಧತೆ, ಉತ್ಸಾಹ ಅದ್ಭುತ. ಶಾಟ್‌ಗೆ ಕರೆದ ತಕ್ಷಣ ಓಡೋಡಿ ಬಂದು ನಟಿಸುತ್ತಿದ್ದರು, ಡೈಲಾಗ್‌ಗಳನ್ನು ಮೊದಲೇ ಕಂಠಪಾಠ ಮಾಡಿಕೊಂಡು ತಯಾರಾಗಿದ್ದರು. ಅದಕ್ಕಾಗಿಯೇ ಅವರು ನಿಜವಾದ ಸೂಪರ್‌ಸ್ಟಾರ್. ಪುಣೆಯಿಂದ ಬಂದು ಕನ್ನಡದಲ್ಲೇ ಮೊದಲ ಸಿನಿಮಾ ನಿರ್ಮಿಸುತ್ತಿರುವ ನಿರ್ಮಾಪಕ ಅಂಕಿತ್ ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದರು. 
ನಾಯಕಿಯ ಬೃಂದಾ ಆಚಾರ್ಯ ಮಾತನಾಡಿ, “ಸಾಯಿಕುಮಾರ್  ಅವರಂತಹ ದಿಗ್ಗಜರ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವುದೇ  ಸೌಭಾಗ್ಯ.  ಕನ್ನಡ ಸಿನಿಮಾಗೆ ಜೀವ ತುಂಬುತ್ತಿರುವ ನಿರ್ಮಾಪಕರಿಗೆ ಧನ್ಯವಾದಗಳು. ಹೆದರಿಕೆ ಮತ್ತು ಜವಾಬ್ದಾರಿಯ ನಡುವ ಎಂದರು.ಮತ್ತೊಬ್ಬ ನಾಯಕಿ ಅಂಕಿತಾ ಅಮರ್ ಮಾತನಾಡುತ್ತಾ, “ಚಿತ್ರದಲ್ಲಿ ನಾನು ಪತ್ರಕರ್ತೆ  ಪಾತ್ರನಿರ್ವಹಿಸಿದ್ದೇನೆ. ಆ ಪಾತ್ರದಲ್ಲಿ ಒಂದು ಶಿಸ್ತು ಮತ್ತು ಪ್ರಾಮಾಣಿಕತೆ ಇತ್ತು. “ ಎಂದು ತಮ್ಮ ಅನುಭವ ಹಂಚಿಕೊಂಡರು.ನಿರೂಪ್ ಭಂಡಾರಿ ಅವರೇ ಚಿತ್ರಕಥೆ ರಚನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಅಂಕಿತ್ ಸೋನಿಗಾರ ಚಿತ್ರ ನಿರ್ಮಿಸಿದ್ದು, ಪ್ರಶಾಂತ್ ಮುಲಗೆ ಸಹ-ನಿರ್ಮಾಪಕರು. ಸಚಿನ್ ವಾಲಿ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST