LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chamarajanagara

ಭಾರತೀಯ ಸಾಹಿತ್ಯ ಸಂಸ್ಕೃತಿಗೆ ವಾಲ್ಮೀಕಿಯವರ ಕೊಡುಗೆ ಅಪಾರ

 ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅಭಿಪ್ರಾಯ


ಚಾಮರಾಜನಗರ: ಭಾರತದ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣದ ಮೂಲಕ ಮಾನವ ಸಂಬಂಧಗಳ ಜೀವನಾದರ್ಶ ಸಂದೇಶಗಳನ್ನು ಇಡೀ ಜಗತ್ತಿಗೆ ಪ್ರಸ್ತುತಪಡಿಸಿದ ಮಹರ್ಷಿ ವಾಲ್ಮೀಕಿಯವರು ಭಾರತೀಯ ಸಾಹಿತ್ಯ, ಸಂಸ್ಕçತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.ನಗರದ ಶ್ರೀ ಮಾರಮ್ಮ ದೇವಸ್ಥಾನದ ಮುಂಭಾಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.ರಾಮಾಯಣ ಭಾರತದ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾಗಿದೆ. ವಾಲ್ಮೀಕಿಯವರು ಪಿತೃವಾಕ್ಯ ಪರಿಪಾಲನೆ, ಸಮಚಿತ್ತದಿಂದ ಕರ್ತವ್ಯ ನಿಭಾಯಿಸುವಿಕೆ, ರಾಜನಾದವನು ಯಾವುದೇ ಸಮಯದಲ್ಲಿ ಪ್ರಜೆಗಳ ಸಂಕಷ್ಟ ಕೇಳುವುದು ಸೇರಿದಂತೆ ರಾಮಾಯಣದ ಎಲ್ಲಾ ಪಾತ್ರಗಳಿಗೂ ಮಹತ್ವ ದೊರಕಿಸಿಕೊಟ್ಟಿದ್ದಾರೆ. ಮಾನವ ಸಂಬಂಧಗಳು ಹೇಗಿರಬೇಕು ಎಂಬುದನ್ನು ಇಂದಿನ ಯುವಜನರು ಮನಗಾಣಬೇಕು. ಅದರಲ್ಲಿನ ಜೀವನಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ರಾಮಾಯಣವನ್ನು ಪ್ರತಿಯೊಬ್ಬರು ಓದಲೇಬೇಕು. ಅದರ ಪ್ರಾಮುಖ್ಯತೆ ತಿಳಿದುಕೊಳ್ಳಬೇಕು ಎಂದರು. ಶಿಕ್ಷಣ, ಸಮಾನತೆ, ಸಾಮಾಜಿಕ ನ್ಯಾಯ ಎಲ್ಲರಿಗೂ ದೊರೆಯಬೇಕು. ಶಿಕ್ಷಣದಿಂದ ಯಾರು ವಂಚಿತರಾಗಬಾರದು. ಸಮುದಾಯದ ಯುವಜನತೆ ಉತ್ತಮ ಶಿಕ್ಷಣ ಪಡೆಯಬೇಕು. ಸರ್ಕಾರವು ಮಕ್ಕಳನ್ನು ಶಿಕ್ಷಣಕ್ಕೆ ಪ್ರೇರೇಪಿಸಲು ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾAಧಿ, ಆದರ್ಶ ವಸತಿಶಾಲೆಗಳನ್ನು ತೆರೆದಿದೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮಹನೀಯರ ಜಯಂತಿ ಕಾರ್ಯಕ್ರಮಗಳಲ್ಲಿ ಮೆರವಣಿಗೆ ಕಡಿಮೆ ಮಾಡಿ ವೇದಿಕೆಗಳಲ್ಲಿ ಮುಖ್ಯ ಭಾಷಣ ಆಲಿಸಬೇಕು. ಅದರ್ಶ ವ್ಯಕ್ತಿಗಳ ಇತಿಹಾಸ, ಪರಂಪರೆ, ಚಿಂತನೆಗಳನ್ನು ಅರಿಯಬೇಕು. ಜಿಲ್ಲಾಕೇಂದ್ರದಲ್ಲಿ ಮುಂದಿನ ವರ್ಷದ ಜಯಂತಿಯೊಳಗೆ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ನಿರ್ಮಿಸಲಾಗುವುದು ಎಂದು ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಮುಖ್ಯ ಭಾಷಣ ಮಾಡಿದ ಸಂಸ್ಕೃತಿ ಚಿಂತಕರಾದ ಉದ್ದನೂರು ಮಹಾದೇವನಾಯಕ ಅವರು ಮಾತನಾಡಿ ರಾಮಾಯಣದಲ್ಲಿ 24 ಸಾವಿರ ಸಂಸ್ಕೃತ ಶ್ಲೋಕಗಳನ್ನು ರಚಿಸಿ ಸುಸ್ಥಿರ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದವರು ಮಹರ್ಷಿ ವಾಲ್ಮೀಕಿ. ರಾಮ, ಲಕ್ಷö್ಮಣ, ಸೀತೆ, ರಾವಣರ ಪಾತ್ರಗಳ ಮೂಲಕ ಭೂಮಿಯ ಮೇಲಿನ ಜನರನ್ನೇ ದೇವರನ್ನಾಗಿ ಮಾಡಿರುವುದು ವಾಲ್ಮೀಕಿಯವರ ಶ್ರೇಷ್ಠತೆಯಾಗಿದೆ. ವಾಲ್ಮೀಕಿಯವರು ರಾಮಾಯಣದಲ್ಲಿ ಮಾನವ ಸಂಬಂಧಗಳ ಬಾಂಧವ್ಯಗಳನ್ನು ಸಾರ್ವತ್ರಿಕಗೊಳಿಸಿದ್ದಾರೆ. ವಾಲ್ಮೀಕಿಯವರ ರಾಮಾಯಣದ ಗರ್ಭವನ್ನು ಅರಿತಷ್ಟು, ತಿಳಿದಷ್ಟು ಬತ್ತಿಹೋಗದ ಜ್ಞಾನಗಂಗೆಯಾಗಿದೆ. ಅದನ್ನು ಹೆಚ್ಚು ಜನರಿಗೆ ವ್ಯಾಪಕವಾಗಿ ಪ್ರಸ್ತುತಪಡಿಸಬೇಕಾಗಿದೆ ಎಂದರು.ಪರಿಶಿಷ್ಟ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ಕಲ್ಪಿಸಲು ಸರ್ಕಾರವು ಸಂವಿಧಾನದ 15 ಮತ್ತು 16ನೇ ವಿಧಿಗೆ ಶಾಶ್ವತ ತಿದ್ದುಪಡಿ ತರಬೇಕಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಸುವರ್ಣ ಚತುಷ್ಪತ ರಸ್ತೆಗೆ ವಾಲ್ಮೀಕಿಯವರ ಹೆಸರಿಡಬೇಕು. ರಾಮಾಯಣದಲ್ಲಿ ಪುಷ್ಪಕ ವಿಮಾನ ಮಹರ್ಷಿ ವಾಲ್ಮೀಕಿಯವರ ಸೃಷ್ಠಿಯಾಗಿರುವುದರಿಂದ ದೇಶದ ಪ್ರಮುಖ ವಿಮಾನ ಸಂಸ್ಥೆಗೆ ಅಥವಾ ವಿಮಾನಗಳಿಗೆ ವಾಲ್ಮೀಕಿ ಹೆಸರಿಡಬೇಕು. ಇಡೀ ಜಗತ್ತಿಗೆ ರಾಮನನ್ನು ಮೊದಲು ಪರಿಚಯಿಸಿದ್ದು ವಾಲ್ಮೀಕಿಯವರಾಗಿರುವುದರಿಂದ ಎಲ್ಲಾ ರಾಮಮಂದಿರಗಳಲ್ಲಿ ನಾಯಕ ಸಮುದಾಯದ ಪೂಜಾರಿಗಳನ್ನು ನೇಮಕ ಮಾಡಬೇಕು ಎಂದು ಉದ್ದನೂರು ಮಹಾದೇವನಾಯಕ ಅವರು ತಿಳಿಸಿದರು.ಇದೇ ವೇಳೆ ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮತ್ತು ವೈದ್ಯಕೀಯ, ಎಂಜಿನಿಯರಿAಗ್ ಸೇರಿದಂತೆ ವೃತ್ತಿಪರ ಕೋರ್ಸ್ಗಳಿಗೆ ಸೇರ್ಪಡೆಗೊಂಡಿರುವ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಳಿಕ ಕಲಾವಿದರಾದ ನಟರಾಜು ಮತ್ತು ತಂಡದವರಿAದ ‘ಹಂಪೆಯ ವೈಭವ’ ಕುರಿತು ಎಚ್ಚಮನಾಯಕನ ಶರ‍್ಯ, ಸಾಹಸದ ಕಿರು ಪ್ರಹಸನ ನಡೆಯಿತು. ವೇದಿಕೆಯಲ್ಲಿ ಬಸವ ರಾಜು ಮತ್ತು ಲತಾ ಪುಟ್ಟಸ್ವಾಮಿ ತಂಡದವರು ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.  
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಿAದ ವಿವಿಧ ಆಕರ್ಷಕ ಕಲಾತಂಡಗಳೊAದಿಗೆ ಬೆಳ್ಳಿರಥದಲ್ಲಿ ಅಲಂಕೃತ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮುತ್ತುರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿ.ವೈ.ಎಸ್.ಪಿ ಸ್ನೇಹರಾಜ್ ಇದ್ದರು. ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಮಾರಮ್ಮ ದೇವಸ್ಥಾನದ ಮುಂಭಾಗದಲ್ಲಿ ಮುಕ್ತಾಯಗೊಂಡಿತು. ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ (ಮುನ್ನ), ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹರೀಶ್, ಮುಖಂಡರಾದ ಎಂ. ರಾಮಚಂದ್ರ, ಸುರೇಶ್ ನಾಯಕ, ರಾಮಸಮುದ್ರ ಸುರೇಶ್, ಅರಕಲವಾಡಿ ಸೋಮನಾಯಕ, ಕೆಲ್ಲಂಬಳ್ಳಿ ಸೋಮನಾಯಕ, ಚಾ.ಸಿ. ಸೋಮನಾಯಕ, ಶ್ರೀನಿವಾಸ ನಾಯಕ, ರಮೇಶ್, ಜಯಸಂದರ್, ಕಪನೀ ನಾಯಕ, ಚೆಂಗುಮಣಿ, ಶಿವರಾಜು, ನಾಗರಾಜು, ಚಿಕ್ಕ ಮಹದೇವು, ಎನ್. ರಾಚಪ್ಪ, ವಿರಾಟ್ ಶಿವು, ಪರಶಿವಮೂರ್ತಿ, ವರದನಾಯಕ, ಚಂದ್ರು, ನಾಗೇಂದ್ರ ನಾಯಕ, ಮನೋಜ್ ಕುಮಾರ್, ಮಾದಪ್ಪ, ಪ್ರಸಾದ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST