LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban | Entertainment News

ಮ್ಯಾಗ್ನುಮ್ ಓಪಸ್ ಸೌಂದರ್ಯ 

ಸ್ಪರ್ಧೆಯಲ್ಲಿ ಕಿರುತೆರೆ ಸುಂದರಿಯರ ಕಲರವ

ಬೆಂಗಳೂರು: ಮ್ಯಾಗ್ನುಮ್ ಓಪಸ್ ಪ್ರೊಡಕ್ಷನ್ಸ್ ಸಂಸ್ಥೆ ಆಯೋಜನೆ ಮಾಡಿದ  ‘ಫ್ಯಾಷನ್ ವೀಕ್ ಸೀಜನ್ -4’ ಫ್ಯಾಷನ್ ಷೋ ಸ್ಪರ್ಧೆ ಕೋರಮಂಗಲದ ಬಿಲ್ಡರ್ಸ್ ಎನ್.ಜಿ.ಓ. ಕ್ಲಬ್ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು. ವೇದಿಕೆಯಲ್ಲಿ ನಡೆದ ಕ್ಯಾಟ್ ವಾಕ್ ನಲ್ಲಿ ನೂರಾರು ಸುಂದರಿಯರು ಭಾಗವಹಿಸಿ ತಮ್ಮ ಪ್ರತಿಭೆ ಮೆರೆದರು.ಈ ಸಂದರ್ಭಲ್ಲಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ವಿಜಯಕುಮಾರ್ 2013ರಲ್ಲಿ ಪ್ರಾರಂಭವಾದ ನಮ್ಮ ಮ್ಯಾಗ್ನಮ್ ಓಪಸ್ ಪ್ರೊಡಕ್ಷನ್ ಸಂಸ್ಥೆಯಿಂದ ಆಯೋಜಿಸಿರುವ ನಾಲ್ಕನೇ ಫ್ಯಾಷನ್ ಷೋ ಇದು. ನಮ್ಮ ಸಂಸ್ಥೆಯ ಎ.ಡಿ ಅಜಯ್ ಕುಮಾರ್ ಅವರು ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ನಮ್ಮ ಸಂಸ್ಥೆಯಿಂದ ಚಲನಚಿತ್ರ ನಿರ್ಮಾಣ, ಜಾಹೀರಾತು, ಸೌಂದರ್ಯ ಸ್ಪರ್ಧೆಯಲ್ಲಿ ಹೆಚ್ಚಾಗಿ ಹೊಸ ಪ್ರತಿಭಾವಂತ ಸ್ಪರ್ಧಿಗಳಿಗೆ ಅವಕಾಶ ನೀಡುತ್ತಿದ್ದೇವೆ ಎಂದು ವಿವರಿಸಿದರು. ನಂತರ ಎಂಡಿ ಅಜಯಕುಮಾರ್ ಮಾತನಾಡುತ್ತ ನಾವು ಈ ಫ್ಯಾಷನ್ ಷೋ ಮೂಲಕ  ನ್ಯೂ ಫೇಸಸ್ ಇಂಟ್ರಡ್ಯೂಸ್ ಮಾಡ್ತಿದ್ದೇವೆ. ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಶ್ರೀಲಂಕಾ ಹೀಗೆ ಹಲವಾರು ಕಡೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೀಜನೆ ಮಾಡಿದ್ದೇವೆ ಎಂದರು. ಈ ಕಾರ್ಯಕ್ರಮದಲ್ಲಿ ಆಕರ್ಷಕ ಡ್ಯಾನ್ಸ್  ಪರ್ ಫಾರ್ಮನ್ಸ್, ಎಂಟರ್ ಟೈನ್ ಮೆಂಟ್ ಕಾರ್ಯಕ್ರಮ ನಡೆದವು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST