ಬೆಂಗಳೂರು: ದಕ್ಷಿಣ ಭಾರತದ ಪ್ರತಿಷ್ಠಿತ ಟಿಎನ್‌ಐಟಿ ಸೌತ್ ಇಂಡಿಯಾ ಪ್ರಶಸ್ತಿಗೆ ಕನ್ನಡದ ಜನಪ್ರಿಯ ಪತ್ರಿಕೆ `ಇಂದು ಸಂಜೆ' ಭಾಜನವಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ (ಪ್ಯಾಲೇಸ್ ಗ್ರೌಂಡ್ಸ್) 23 ರ ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ರಿಕೆಯ ಮುಖ್ಯಸ್ಥೆ ಡಾ.ಪದ್ಮಾ ನಾಗರಾಜ್ ಅವರು ಈ ಗೌರವವನ್ನು ಸ್ವೀಕರಿಸದರು ಪತ್ರಿಕೋದ್ಯಮ ಕ್ಷೇತ್ರದಲ್ಲಿ `ಇಂದು ಸಂಜೆ' ಪತ್ರಿಕೆಯ ಸಾಧನೆ ಹಾಗೂ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದ್ದು ಇದು ಸುದ್ದಿ ಮನೆಯ ಹೆಮ್ಮೆಯ ಸಂಗತಿಯಾಗಿದೆ. ಈ ಗೌರವವು ಪತ್ರಿಕೆಯ ಕಾರ್ಯನಿಷ್ಠೆ, ಸಾಮಾಜಿಕ ಬದ್ಧತೆ ಮತ್ತು ಕನ್ನಡ ಪತ್ರಿಕೋದ್ಯಮದ ಸಾಧನೆಗೆ ಸಂದ ಮನ್ನಣೆಯಾಗಿದೆ.