LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban | Sports News

ಐಪಿಎಲ್‌ನಲ್ಲಿ CSK  ಸತತ ಕಳಪೆ ಪ್ರದರ್ಶನದ ಬಗ್ಗೆ ಎಂಎಸ್ ಧೋನಿ ಮುಕ್ತಮಾತುವ


ಬೆಂಗಳೂರು: ಐದು ಬಾರಿ ಐಪಿಎಲ್ ಟ್ರೋಫಿ ಬಾಚಿರುವ ಚೆನ್ನೆöÊ ಸೂಪರ್ ಕಿಂಗ್ಸ್(ಅSಏ) ತಂಡದ ಪ್ರದರ್ಶನ ಕಳೆದ ಮೂರು ವರ್ಷದಿಂದ ಪಾತಾಳಕ್ಕೆ ಕುಸಿದಿದೆ. 2023ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದೇ ಕೊನೆ. ಆ ಬಳಿಕ ತಂಡಕ್ಕೆ ಸಾಲು ಸಾಲು ಸಂಕಷ್ಟ. ಅಂದುಕೊAಡಿದ್ದು ಯಾವುದೂ ನಡೆಯುತ್ತಿಲ್ಲ. ಈ ಬಗ್ಗೆ ಇದೀಗ ಮಹೇಂದ್ರ ಸಿಂಗ್ ಧೋನಿ ಅವರು ಮಾತನಾಡಿದ್ದಾರೆ. ಇದೀಗ ಸತತ 2 ಬಾರಿ ಕಪ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು  ಸಹ ನಮ್ಮ ರೀತಿಯೇ ಸಂಕಷ್ಟ ಎದುರಿಸುತ್ತು ಎಂದು ತಿಳಿಸಿದ್ದಾರೆ. ನಗರದಲ್ಲಿ ನಡೆದ ಆರೋಗ್ಯ ಸಂಬಂಧಿತ ಕಾರ್ಯಕ್ರಮವೊಂದರಲ್ಲಿ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, "ಕಳೆದ ಎರಡು ವರ್ಷಗಳಲ್ಲಿ ನಾವು ಸಂಕಷ್ಟ ಎದುರಿಸಿದ್ದೇವೆ, ಇದು ಸತ್ಯ. ಖಅಃ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದೆ ಎಂಬ ವಾಸ್ತವವನ್ನು ಒಪ್ಪಿಕೊಳ್ಳುವುದರಲ್ಲಿ ಯಾವುದೇ ಹಿಂಜರಿಕೆ ಇಲ್ಲ. ಜೀವನ ಹೀಗೆಯೇ ಇರುತ್ತದೆ; ಒಳ್ಳೆಯ ಕಾಲ ಬರುತ್ತದೆ, ಕೆಟ್ಟ ಕಾಲವೂ ಬರುತ್ತದೆ. ಆದರೆ, ಅಂತಹ ಸಂದರ್ಭಗಳಿಂದ ನೀವು ಹೇಗೆ ಹೊರಬರುತ್ತೀರಿ ಮತ್ತು ತಂಡವಾಗಿ ನೀವು ಯಾವ ವಿಷಯಗಳ ಮೇಲೆ ಕೆಲಸ ಮಾಡುತ್ತೀರಿ ಎಂಬುದು ಅತ್ಯಂತ ಮುಖ್ಯ," ಎಂದು ಹೇಳಿದರು. "ನಾವು ಗೆಲ್ಲುತ್ತಿದ್ದಾಗಲೂ, ಒಂದು ಹಂತದಲ್ಲಿ ಸೋಲುಗಳು ಎದುರಾಗುತ್ತವೆ ಎಂಬುದು ನಮಗೆ ತಿಳಿದಿತ್ತು. ತಂಡವು ಕಳಪೆ ಪ್ರದರ್ಶನ ನೀಡುತ್ತಿರುವಾಗ ವ್ಯಕ್ತಿಯ ಅಥವಾ ತಂಡದ ನೈಜ ಸಾಮರ್ಥ್ಯ ಮತ್ತು ಗುಣಮಟ್ಟ ಪರೀಕ್ಷೆಗೆ ಒಳಗಾಗುತ್ತದೆ," ಎಂದು ತಿಳಿಸಿದರು.ಭವಿಷ್ಯದ ಬಗ್ಗೆ ಧೋನಿ ಮಾತು: ಇನ್ನು ಧೋನಿ ಅವರು ಐಪಿಎಲ್ ನ ಮುಂದಿನ ಸೀಸನ್ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಕುತೂಹಲ ಇದ್ದೇ ಇದೆ. ಈ ಬಗ್ಗೆ ಮಾತನಾಡಿ, ಡಿಸೆಂಬರ್‌ನಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು. "ನಾನು ಪರೀಕ್ಷೆಗಳಿಗೆ ಒಳಗಾಗಬೇಕಿದೆ. ನೀವು ನನಗೆ ವರದಿ ನೀಡಬೇಕು. ಆ ಬಳಿಕ, ಮತ್ತೊಂದು ಋತುವಿನಲ್ಲಿ ಆಡುವಷ್ಟು ನಾನು ದೈಹಿಕವಾಗಿ ಎಷ್ಟು ಸಶಕ್ತನಾಗಿದ್ದೇನೆ ಎಂಬುದನ್ನು ಡಿಸೆಂಬರ್ ಒಳಗೆ ಪರಿಶೀಲಿಸಬೇಕಿದೆ," ಎಂದು ಕಾರ್ಯಕ್ರಮದಲ್ಲಿದ್ದ ವೈದ್ಯರನ್ನು ಉದ್ದೇಶಿಸಿ ಧೋನಿ ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ. "ಒಂದು ವೇಳೆ ಐಪಿಎಲ್‌ನಲ್ಲಿ ಆಡಲು ನಾನು ಫಿಟ್ ಆಗಿಲ್ಲದಿದ್ದರೆ, ನಾನು ಮತ್ತೆ ಚೇತರಿಸಿಕೊಂಡು ಆಡುವ ಸ್ಥಿತಿಗೆ ಬರುವಂತೆ ವೈದ್ಯರು ಎಲ್ಲವನ್ನೂ ಸರಿಯಾಗಿ ಮಾಡಬೇಕಾಗುತ್ತದೆ ಎಂದು ತಮಾಷೆಯ ಮಾತುಗಳನ್ನು ಆಡಿದರು.3 ಸೀಸನ್ ನಿಂದ ಅSಏ ಸಂಕಷ್ಟ: 2034ರಲ್ಲಿ ಋತುರಾಜ್ ಗಾಯಕ್ವಾಡ್ ಅವರು ಸಿಎಸ್ ಕೆ ತಂಡದ ನಾಯಕತ್ವ ವಹಿಸಿಕೊಂಡರು. ಆ ಸೀಸನ್ ನಲ್ಲಿ ತಂಡ 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಐಪಿಎಲ್ 2025ರ ಪ್ರಥಮಾರ್ಥದಲ್ಲಿ ಋತುರಾಜ್ ತಂಡದಿಂದ ಹೊರಗುಳಿಯಬೇಕಾಯಿತು. ಈ ಆವೃತ್ತಿಯಲ್ಲಿ ಸಿಎಸ್‌ಕೆ ಲೀಗ್ ಹಂತವನ್ನು ದಾಟಲು ವಿಫಲವಾಯಿತು. ಇನ್ನು, ಋತುರಾಜ್ ನಾಯಕತ್ವದಲ್ಲಿ ನಡೆದ ಐಪಿಎಲ್ 2026ರಲ್ಲಿ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಐಪಿಎಲ್ ಇತಿಹಾಸದಲ್ಲಿ ಸತತವಾಗಿ ಪ್ರಶಸ್ತಿಗಳನ್ನು ಗೆದ್ದಿರುವ ಮೂರೇ ತಂಡಗಳೆಂದರೆ - ಆರ್‌ಸಿಬಿ , ಸಿಎಸ್‌ಕೆ CSK  ಮತ್ತು ಮುಂಬೈ ಇಂಡಿಯನ್ಸ್ . 2027ರಲ್ಲಿ ಆರ್‌ಸಿಬಿ ಟ್ರೋಫಿಯನ್ನು ಗೆದ್ದರೆ, ಸತತ ಮೂರು ಐಪಿಎಲ್ ( ಪ್ರಶಸ್ತಿಗಳನ್ನು ಗೆದ್ದ ಮೊದಲ ತಂಡವಾಗಿ ಇತಿಹಾಸ ನಿರ್ಮಿಸಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST