NDW vs ZIMW: ನಿನ್ನೆ ಗಜರಾತ್‌ನ ವಡೋದರಾ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಜಿಂಬಾಬ್ವೆ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಸ್ಮöÈತಿ ಮಂಧಾನ ಪಡೆ 121 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ಟೀಮ್ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ, ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 328 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಹರ್ಮನ್‌ಪ್ರೀತ್ ಕೌರ್ (126 ರನ್) ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳನ್ನು ಕಾಡಿದರೆ, ಪ್ರತಿಕಾ ರಾವಲ್ 67 ಎಸೆತಗಳಲ್ಲಿ 61 ರನ್ ಗಳಿಸಿ ಇನ್ನಿಂಗ್ಸ್ಗೆ ಗಟ್ಟಿಯಾದ ಅಡಿಪಾಯ ಹಾಕಿದರು.ಅವರ ನಂತರದಲ್ಲಿ ಕ್ರೀಸ್‌ಗೆ ಬಂದ ದೀಪ್ತಿ ಶರ್ಮಾ, ಕೇವಲ 86 ಎಸೆತಗಳಲ್ಲಿ 15 ಬೌಂಡರಿಗಳೊAದಿಗೆ ಅಜೇಯ 106 ರನ್ ಸಿಡಿಸಿ, ತಂಡದ ಒಟ್ಟು ಮೊತ್ತವನ್ನು 300ರ ಗಡಿದಾಟಿಸಲು ದೊಡ್ಡ ಮಟ್ಟದ ಕೊಡುಗೆ ನೀಡಿದರು. ಇದರೊಂದಿಗೆ, ಒಂದೇ ಇನ್ನಿಂಗ್ಸ್ನಲ್ಲಿ ಭಾರತದ ಇಬ್ಬರು ಬ್ಯಾಟರ್‌ಗಳು ಶತಕ ಸಿಡಿಸಿ ಮಿಂಚಿದರು.ಭಾರತೀಯ ಬೌಲರ್‌ಗಳ ದಾಳಿಗೆ ನಲುಗಿದ ಜಿಂಬಾಬ್ವೆ: 329 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆಗೆ ಆರಂಭದಿAದಲೇ ಹಿನ್ನಡೆಯಾಯಿತು. ಭಾರತೀಯ ಬೌಲರ್‌ಗಳು ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಎದುರಾಳಿ ತಂಡದ ಮೇಲೆ ತೀವ್ರ ಒತ್ತಡ ಹೇರಿದರು. ಜಿಂಬಾಬ್ವೆ ಪರ ಮೋಡೆಸ್ಟರ್ ಮುಚಿಪಾಕಿವ 49 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಚಿಪೋ ಮುಗೆರಿ-ಟ್ರಿಪಾನೊ 46 ರನ್ ಮತ್ತು ಬಿಲವೆಡ್ ಬಿಜಾ 34 ರನ್ ಬಾರಿಸಿದರು. ತಂಡದ ಪರ ವೈಷ್ಣವಿ ಶರ್ಮಾ 3 ವಿಕೆಟ್ ಪಡೆದು ಜಿಂಬಾಬ್ವೆ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಇತರ ಬ್ಯಾಟರ್‌ಗಳು ದೊಡ್ಡ ಕೊಡುಗೆ ನೀಡಲು ವಿಫಲರಾದರು. ಹೀಗಾಗಿ, ಜಿಂಬಾಬ್ವೆ ತಂಡವು 48.5 ಓವರ್‌ಗಳಲ್ಲಿ ಕೇವಲ 207 ರನ್‌ಗೆ ಆಲೌಟ್ ಆಯಿತು. ಅಲ್ಲಿಗೆ,
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಮಹಿಳಾ ತಂಡವು ಸರಣಿಯನ್ನು ತನ್ನದಾಗಿಸಿಕೊಂಡಿದೆ. ಅಂತಿಮ ಏಕದಿನ ಪಂದ್ಯದಲ್ಲೂ ಇದೇ ಲಯವನ್ನುಕಾಯ್ದುಕೊಂಡು, ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಸ್ಮöÈತಿ ಪಡೆ ಎದುರುನೋಡುತ್ತಿದೆ(ಏಜೆನ್ಸೀಸ್).