LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಭಾರತೀಯಸಂಗೀತದಲೆಗಳಲಿ ರಾಷ್ಟ್ರೀಯ ಏಕತೆ!


ಬೆಂಗಳೂರು: ಭಾಷೆ, ಧರ್ಮ, ಪ್ರಾಂತಗಳ ಎಲ್ಲ ಗಡಿಗಳನ್ನು ಮೀರಿದ ಸಂಗೀತದ ಮೂಲಕ ರಾಷ್ಟಿçÃಯ ಏಕತೆ, ಸೌಹಾರ್ದ ಮತ್ತು ಸಹೋದರತ್ವದ ಸಂದೇಶ ಸಾರುವ ಉದ್ದೇಶದಿಂದ ಬಸವ ಸಮಿತಿ ಹಾಗೂ ಸ್ವರ ಫೌಂಡೇಶನ್ ಜಂಟಿಯಾಗಿ ಎರಡು ದಿನಗಳ ವಿಶಿಷ್ಟ ಸಂಗೀತೋತ್ಸವವನ್ನು ಆಯೋಜಿಸಿವೆ.`ಸ್ಪಿರಿಟ್ ಆಫ್ ಯೂನಿಟಿ ಕನ್ಸರ್ಟ್’ ಸಂಗೀತದ ಮೂಲಕ ರಾಷ್ಟಿçÃಯ ಏಕತೆ ಎಂಬ ಪರಿಕಲ್ಪನೆಯಲ್ಲಿ ನಡೆಯಲಿರುವ ಈ ಸಂಗೀತೋತ್ಸವವು ಅಕ್ಟೋಬರ್ 31ರ ಶನಿವಾರ ಮತ್ತು ನವೆಂಬರ್ 1ರ ಭಾನುವಾರ ಬೆಂಗಳೂರಿನ ಬಸವ ಭವನದ ಅನುಭವ ಮಂಟಪ ಸಭಾಂಗಣದಲ್ಲಿ ಜರುಗಲಿದೆ.ಭಾರತದ ಶಾಸ್ತ್ರೀ ಯ ಸಂಗೀತ ಪರಂಪರೆಯ ವೈವಿಧ್ಯ, ವೈಭವ ಮತ್ತು ಸೌಹಾರ್ದದ ಆಶಯವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಈ ಕಾರ್ಯಕ್ರಮದಲ್ಲಿ ದೇಶದ ಹೆಸರಾಂತ ಸಂಗೀತ ಕಲಾವಿದರು ಭಾಗವಹಿಸಲಿದ್ದಾರೆ.ಅಕ್ಟೋಬರ್ 31: ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತದ ಅಪೂರ್ವ ಸಂಗಮಶನಿವಾರ ಸಂಜೆ ನಡೆಯಲಿರುವ ಸಂಗೀತ ಕಾರ್ಯಕ್ರಮದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ದಿಗ್ಗಜರಾದ ಎಂ.ಎಸ್. ಸುಬ್ಬುಲಕ್ಷ್ಮೀ  ಅವರ ವಂಶಜರಾದ ಶ್ರೀಮತಿ ಎಸ್. ಐಶ್ವರ್ಯ ಮತ್ತು ಕುಮಾರಿ ಎಸ್. ಸೌಂದರ್ಯ ಸಂಗೀತ ಪ್ರಸ್ತುತಿ ನೀಡಲಿದ್ದಾರೆ. ಇವರೊಂದಿಗೆ ಪ್ರಸಿದ್ಧ ಹಿಂದೂಸ್ತಾನಿ ಶಾಸಸ್ತ್ರೀಯ ಸಂಗೀತಗಾರ ಪಂಡಿತ್ ವಿನಾಯಕ ತೊರ್ವಿ ತಮ್ಮ ಗಾಯನದ ಮೂಲಕ ಸಂಗೀತಾಸಕ್ತರನ್ನು ರಂಜಿಸಲಿದ್ದಾರೆ.ಭಾರತೀಯ ಸಂಗೀತದ ಎರಡು ಪ್ರಮುಖ ಪರಂಪರೆಗಳ ಸೊಬಗು, ಶಾಸ್ತಿçÃಯತೆಯ ಗಾಂಭೀರ್ಯ ಮತ್ತು ಭಾವಪೂರ್ಣ ಅಭಿವ್ಯಕ್ತಿಗೆ ಈ ಸಂಜೆ ಸಾಕ್ಷಿಯಾಗಲಿದೆ.ನವೆಂಬರ್ 1: ಸಿತಾರ್ ಜುಗಲ್ಬಂದಿ ಹಾಗೂ ಶಾಸ್ತಿçÃಯ ಗಾಯನದ ರಸದೌತಣ; ಭಾನುವಾರ ಬೆಳಿಗ್ಗೆ ನಡೆಯಲಿರುವ ಸಂಗೀತೋತ್ಸವದಲ್ಲಿ ಖ್ಯಾತ ಸಿತಾರ್ ವಾದಕರಾದ ಉಸ್ತಾದ್ ರೈಸ್ ಬೇಲೆ ಖಾನ್ ಮತ್ತು ಉಸ್ತಾದ್ ಹಫೀಜ್ ಬೇಲೆ ಖಾನ್ ಅವರ ಸಿತಾರ್ ಜುಗಲ್ಬಂದಿ ಪ್ರಮುಖ ಆಕರ್ಷಣೆಯಾಗಲಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತ ಡಾ. ಮುದ್ದು ಮೋಹನ್ ಹಾಗೂ ಇಂದೋರ್‌ನ ಖ್ಯಾತ ಸಂಗೀತ ಪರಂಪರೆಯ ಪ್ರತಿನಿಧಿ, ದಿಗ್ಗಜ ಗಾಯಕ ಕುಮಾರ್ ಗಂಧರ್ವ ಅವರ ಮೊಮ್ಮಗ ಪಂಡಿತ್ ಭುವನೇಶ್ ಕೊಂಕಳಿ ತಮ್ಮ ಸಂಗೀತ ಪ್ರಸ್ತುತಿಗಳ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದ್ದಾರೆ.ಸಂಗೀತದ ಮೂಲಕ ಸೌಹಾರ್ದದ ಸೇತುವೆ: ಸಂಗೀತವು ಕೇವಲ ಮನರಂಜನೆಯ ಮಾಧ್ಯಮವಲ್ಲ; ಅದು ಮಾನವೀಯ ಭಾವನೆಗಳನ್ನು ಬೆಸೆಯುವ, ಭಿನ್ನತೆಗಳ ನಡುವೆ ಸಾಮರಸ್ಯ ಮೂಡಿಸುವ ಮತ್ತು ಸಮಾಜದಲ್ಲಿ ಪ್ರೀತಿ, ವಿಶ್ವಾಸ ಹಾಗೂ ಸಹಬಾಳ್ವೆಯನ್ನು ಬಲಪಡಿಸುವ ಶಕ್ತಿಯುತ ಅಭಿವ್ಯಕ್ತಿ. ಈ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ `ಸ್ಪಿರಿಟ್ ಆಫ್ ಯೂನಿಟಿ’ ಸಂಗೀತೋತ್ಸವವನ್ನು ಆಯೋಜಿಸಲಾಗಿದೆ.ಭಾರತದ ಬಹುಸಂಸ್ಕೃತಿ , ಬಹುಭಾಷೆ ಮತ್ತು ವೈವಿಧ್ಯಮಯ ಸಂಗೀತ ಪರಂಪರೆಗಳ ನಡುವಿನ ಏಕತೆಯನ್ನು ಸಂಭ್ರಮಿಸುವ ಈ ಕಾರ್ಯಕ್ರಮವು ಸಾಂಸ್ಕöÈತಿಕ ಪರಂಪರೆಯ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಅದರ ಪರಿಚಯವನ್ನು ನೀಡುವ ಉದ್ದೇಶವನ್ನೂ ಹೊಂದಿದೆ.
ಸAಗೀತದ ನಾದದಲ್ಲಿ ಮಾನವೀಯತೆ ಅರಳಲಿ; ಕಲೆಯ ಮೂಲಕ ಹೃದಯಗಳು ಬೆಸೆಯಲಿ; ವೈವಿಧ್ಯದಲ್ಲಿ ಏಕತೆಯ ಭಾರತೀಯ ಆಶಯ ಮತ್ತಷ್ಟು ಬಲಗೊಳ್ಳಲಿ ಎಂಬುದು ಈ ಸಂಗೀತೋತ್ಸವದ ಆಶಯವಾಗಿದೆ.ಪ್ರಭುದೇವ ಚಿಗಟೇರಿ ಉಪಾಧ್ಯಕ್ಷರು, ಬಸವ ಸಮಿತಿ, ಡಾ. ಮುದ್ದು ಮೋಹನ್, ಗಾಯಕರು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.
ನಿರ್ಮಲಾ ಸಿ. ಯಲಿಗಾರ್

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST