ಬೆಂಗಳೂರಿನ ಜೆಪಿ ನಗರದಲ್ಲಿ ವಾಸಿಸುವ ಚರ್ಮರೋಗ ತಜ್ಞೆ ಶೀಲಾ ಮತ್ತು ರುದ್ರಗ ತಜ್ಞ ಡಾಕ್ಟರ್ ನಟರಾಜ ಶೆಟ್ಟಿ ದಂಪತಿಗಳು ಕಳೆದ 15 ವರ್ಷಗಳಿಂದ ಬೊಂಬೆಗಳ ಅಲಂಕಾರದ ಮೂಲಕ ಭಾರತೀಯ ಧಾರ್ಮಿಕ ಪರಂಪರೆ, ಆಧ್ಯಾತ್ಮಿಕತೆ, ಹಾಗೂ ಸಾಂಸ್ಕೃತಿಕ ವೈಭವವನ್ನು ಜನಮನಗಳಲ್ಲಿ ಬಿತ್ತುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಾಧನೆ.ಸಾಮ್ರಾಟ್ ಅಶೋಕನ ಧರ್ಮ ಚಕ್ರವೂ ಸಾಮಾಜಿಕ ನ್ಯಾಯವನ್ನು ಸದಾಕಾಲ ನೆಲೆ ನಿಲ್ಲಲಿ ಶಾಂತಿ ಮತ್ತು ಮಾನವೀಯತೆಯ ಸಂದೇಶ ಸಾರಿದರೆ, ಭರತನಾಟ್ಯದ ವಿವಿಧ ಭಂಗಿಗಳ ಗೊಂಬೆಗಳು ಭಾರತೀಯ ಶಾಸ್ತ್ರೀಯ ಕಲೆಯ ಸೌಂದರ್ಯವನ್ನು ಪರಿಚಯಿಸುತ್ತವೆ. ಸರಸ್ವತಿ ದೇವಿಯನ್ನು ಸ್ವಾಗತಿಸಲು ಸೊಂಡಿಲತ್ತಿ ಹೂಮಾಲೆ ಹಿಡಿದಿರುವ ಆನೆಗಳು, ಮಹಿಷಾಸುರನ ಸಂಹಾರಗೈವ ಚಾಮುಂಡೇಶ್ವರಿ, ಮಂದಹಾಸದೊಂದಿಗೆ ವೀಣವಾದನ ಮಾಡುತ್ತಿರುವ ಸರಸ್ವತಿ ಹಾಗೂ ಉಗ್ರ ಭಕ್ತಿಯ ಪ್ರತೀಕವಾದ ಪ್ರಹಲಾದನ ರೂಪ ಪ್ರತಿಯೊಂದು ಕಲಾ ಕೃತಿಯು ಒಂದೊಂದು ಕಥೆಯನ್ನು ಹೇಳುತ್ತವೆ.ತಿರುಮಲದ ಶ್ರೀನಿವಾಸ ಪದ್ಮಾವತಿಯ ದಿವ್ಯ ವೈಭವದಿಂದ ಆರಂಭಗೊಂಡ ಈ ಪಯಣ ಕಾಶಿ ವಿಶ್ವನಾಥನ ಭಕ್ತಿ ಪರಂಪರೆಯನ್ನು ಹಾದು, ಈ ವರ್ಷ ಪುರಿಯ ಜಗನ್ನಾಥ ಬಲರಾಮ ಮತ್ತು ಸುಭದ್ರಯರ ರಥಯಾತ್ರೆಯೊಂದಿಗೆ ಅಪೂರ್ವ ಕಲಾ ಲೋಕವನ್ನೇ ಅನಾವರಣಗೊಳಿಸಿದೆ. ದುರ್ಗೆಯ ಶಕ್ತಿ ಸ್ವರೂಪ, ಅರ್ಧ ನಾರೇಶ್ವರನ ತಾತ್ವಿಕ ಸಂದೇಶ, ಮೈಸೂರಿನ ಅರಮನೆಯ ಸಂಭ್ರಮದ ದರ್ಬಾರ್ ಮತ್ತು ವರುಣ ರಂಜಿತ ಬೆಳಕಿನ ಅಲಂಕಾರ, ಮಹಾದ್ವಾರದ ಎದುರಿನಲ್ಲಿ ಗಣೇಶನ ದಿವ್ಯ ರೂಪ, ಶ್ರೀ ಕೃಷ್ಣನ ನೃತ್ಯ ಭಂಗಿ, ದಶಶಿರ ರಾವಣನ ಕಲಾ ಕೃತಿ, ಕನ್ನಡಿಗರ ಹೃದಯದಲ್ಲಿ ನೆಲೆಸಿರುವ ನಗು ಮೊಗದ ವೀರ ಸರದಾರ ಪುನೀತ್ ರಾಜಕುಮಾರ್ ಅವರ ನೆನಪಿನ ಕಲಾಕೃತಿ ಮೈಸೂರಿನ ಕುಸ್ತಿಪಟುಗಳ ಇತಿಹಾಸವನ್ನು ಸಾರುವ ಗೊಂಬೆಗಳು ಹಾಗೂ ಕರಾವಳಿಯ ಕಂಬಳದ ವೈಭವ ಇವೆಲ್ಲವೂ ಈ ಗೊಂಬೆಗಳ ಲೋಕಕ್ಕೆ ವಿಶೇಷ ಮೆರವ ನೀಡಿವೆ.ಇವೆಲ್ಲದರ ನಡುವೆ, ದೇವಲೋಕದಿಂದ ಶ್ರೀ ವೆಂಕಟೇಶ್ವರನ ಸನ್ನಿಧಿಯತ್ತ ಮಂದಹಾಸದೊಂದಿಗೆ ಹೆಜ್ಜೆ ಇಡುವ ಪದ್ಮಾವತಿ ದೇವಿಯ ಮನಮೋಹಕ ದೃಶ್ಯವೂ ಭಕ್ತಿ ಭಾವದ ಪರಕಾಸ್ಟೆಯನ್ನು ಸಾರುತ್ತದೆ. ಪ್ರತಿಯೊಂದು ಮೂಲೆಯಲ್ಲಿಯೂ ಒಂದೊAದು ಪೌರಾಣಿಕ ಕಥೆ, ಒಂದೊAದು ಕಲಾ ಸೌಂದರ್ಯ, ಒಂದೊಂದು ಆಧ್ಯಾತ್ಮಿಕ ಸಂದೇಶವನ್ನು ಹೊತ್ತಿರುವ ಈ ಅಲಂಕಾರವನ್ನು ನೋಡುವುದೇ ಪೂರ್ವ ಜನ್ಮದ ಸುಕೃತವೆಂಬ ಭಾವನೆ ಮೂಡುತ್ತದೆ. ಡಾ ಶೀಲಾ ಡಾಕ್ಟರ್ ನಟರಾಜ ಶೆಟ್ಟಿ ದಂಪತಿಗಳು ವೃತ್ತಿಯಿಂದ ವೈದ್ಯರಾದರು ಪ್ರವೃತ್ತಿಯಿಂದ ಕಲಾ ಸೇವಕರಾಗಿರುವ ಈ ದಂಪತಿಗಳು, ಗೊಂಬೆಗಳ ಮೂಲಕ ಮುಂದಿನ ಪೀಳಿಗೆಗೆ ಭಾರತೀಯ ಸಂಸ್ಕöÈತಿಯ ಅಮೂಲ್ಯ ಪರಂಪರೆಯನ್ನು ಪರಿಚಯಿಸುತ್ತಿದ್ದಾರೆ ಅವರ ಈ ಸತತ ಪ್ರಯತ್ನವೂ ಕೇವಲ ಅಲಂಕಾರವಲ್ಲ, ಅದು ಭಕ್ತಿ, ಕಲೆ, ಇತಿಹಾಸ ಮತ್ತು ಸಂಸ್ಕೃತಿ ಗಳ ಸುಂದರ ಸಂಗಮವಾಗಿದೆ. ಸರ್ವೇ ಜನಾ ಸುಖಿನೋ ಭವಂತು ಸರ್ವೇ ಸಂತು ನಿರಾಮಯಾ.ಸಂಸ್ಕೃತಿ ಉಳಿಯಲಿ, ದೈವ ಭಕ್ತಿ ಬೆಳೆಯಲಿ, ಆಧ್ಯಾತ್ಮಿಕ ಚಿಂತನೆ ಸದಾ ನವನವೀನವಾಗಿ ಬೆಳಗಲಿ, ಶೆಟ್ಟಿ ದಂಪತಿಗಳ ಈ ಸಾಂಸ್ಕೃತಿಕ ಸೇವೆ ನಿರಂತರವಾಗಿ ಮುಂದುವರೆದು, ಸಮಾಜಕ್ಕೆ ಸ್ಪೂರ್ತಿಯ ದಾರಿದೀಪವಾಗಲಿ.ಪುರಿಯ ಜಗನ್ನಾಥ್ ಸಂಪ್ರದಾಯವು ಭೇದ ಭಾವಗಳನ್ನು ಮೀರಿದ ಭಕ್ತಿಯ ಸಂದೇಶವನ್ನು ಸಾರುತ್ತದೆ. ಅದೇ ಭಾವನೆಯೊಂದಿಗೆ ರೂಪುಗೊಳ್ಳುವ ಗೊಂಬೆಗಳ ಅಲಂಕಾರವು ನಮ್ಮ ಮುಂದಿನ ಪೀಳಿಗೆಗೆ ಭಾರತೀಯ ಧಾರ್ಮಿಕ ಪರಂಪರೆ, ಸಂಸ್ಕöÈತಿ ಮತ್ತು ಕಲೆಯ ಮಹತ್ವವನ್ನು ಪರಿಚಯಿಸುವ ಸುಂದರ ಮಾಧ್ಯಮವಾಗಿದೆ. ಈ ಗೊಂಬೆಗಳ ಅಲಂಕಾರವು ಕೇವಲ ಬಾಹ್ಯ ಸೌಂದರ್ಯದ ಪ್ರದರ್ಶನವಲ್ಲ, ಅದರ ಹಿಂದೆ ಅಡಗಿರುವುದು ಅಪಾರ ಪ್ರೀತಿ, ಭಕ್ತಿ, ಶ್ರದ್ಧೆ ಮತ್ತು ದೇವರ ಮೇಲಿನ ನಿಸ್ವಾರ್ಥ ಅಮರತ್ವದ ಒಡನಾಟ. ಪ್ರತಿಯೊಂದು ಅಲಂಕಾರದಲ್ಲಿಯೂ ಭಕ್ತರ ಮನದ ಭಾವನೆಗಳು ಅರಳುತ್ತವೆ. ದೇವರ ದಿವ್ಯ ರೂಪವನ್ನು ಮನೆಯಲ್ಲಿ ಅಥವಾ ಪ್ರದರ್ಶನದಲ್ಲಿ ಕಣ್ತುಂಬಿಕೊಳ್ಳುವಾಗ, ಆ ಸ್ಥಳವೇ ಪುಣ್ಯಕ್ಷೇತ್ರದಂತೆ ಭಾಸವಾಗುತ್ತದೆ. ಜಗನ್ನಾಥನ ದರ್ಶನದಲ್ಲಿ ಭಕ್ತಿ ಅರಳಲಿ, ಬಲರಾಮನ ಕೃಪೆಯಲ್ಲಿ ಶಕ್ತಿ ಬೆಳಗಲಿ, ಸುಭದ್ರೆಯ ಆಶೀರ್ವಾದದಲ್ಲಿ ಸುಖ ಶಾಂತಿ ನೆಲೆಸಲಿ ಸಮೃದ್ಧಿ ಹೆಚ್ಚಾಗಲಿ, ಈ ದಿವ್ಯ ಗೊಂಬೆಗಳ ಅಲಂಕಾರವು ಪ್ರತಿಯೊಬ್ಬರ ಮನದಲ್ಲೂ ಭಕ್ತಿಯ ಬೆಳಕನ್ನು ಬೆಳಗಿಸಲಿ ಎಂದು ಸಮಸ್ತ ವಿಶ್ವದ ಕನ್ನಡ ಮನಸುಗಳಿಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.5 ಸಾವಿರ ಏಡ್ಸ್ ರೋಗಿಗಳಿಗೆ ಉಚಿತ ಚಿಕಿತ್ಸೆಡಾಕ್ಟರ್ ನಟರಾಜ್ ಶೆಟ್ಟಿ ಮತ್ತು ಶೀಲಾ ನಟರಾಜ್ ಶೆಟ್ಟಿ ಅವರು ರಾಷ್ಟ್ರ ಅಂತರಾಷ್ಟ್ರೀಯ ಹಾಗೂ ವಿಶ್ವವಿಖ್ಯಾತವಾದ ಎಲ್ಲಾ ರಾಷ್ಟçಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಹಾಗೆ ಮಾಹಿತಿಯನ್ನು ನೀಡುತ್ತಾ ಉಚಿತವಾಗಿ ಸುಮಾರು 5 ಸಾವಿರ ಏಡ್ಸ್ ರೋಗಿಗಳಿಗೆ ಅವರ ಮನೆಗಳಿಗೆ ತೆರಳಿ ತರಬೇತಿ ಕೇಂದ್ರಕ್ಕೆ ಬರಮಾಡಿಕೊಂಡು ಅವರಿಗೆ ಚಿಕಿತ್ಸೆಯನ್ನು ಮಾಡಿ ಯಶಸ್ವಿಯಾಗಿದ್ದಾರೆಂದು ನಾನು ನಮ್ಮ ನಾಡಿನ ಪರವಾಗಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ದಂಪತಿಗಳು ಆಹಾರ ಆಧ್ಯಾತ್ಮ ಆರೋಗ್ಯ ಈ ಮೂರು ಕ್ಷೇತ್ರಗಳನ್ನು ಉಚಿತವಾಗಿ ಸಮಾಜ ಸೇವೆ ಎಂದು ಭಾವಿಸಿ, ಸಮಸ್ತ ಜನರಿಗೆ ಸೇವೆಯನ್ನುನಿಸ್ವಾರ್ಥತೆಯಿಂದ ಮಾಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ಈ ಬಾರಿಯ ದಸರಾ ಮಹೋತ್ಸವ ವೈದಿಕತೆಗೆ ಆ ಸಂಸ್ಕೃತಿಗೆ ಸಾಂಸ್ಕೃ ತಿಕ ಪರಂಪರೆಯ ವೈಭವಕ್ಕೆ ಒಂದು ಸಾಕ್ಷಿಕರಿಸಿ ಅಭ್ಯಾಸದ ವೈಭವದ ಅನಾವರಣಗೊಳಿಸಿರುವುದು ಜನಮನ ಮುಟ್ಟುತ್ತದೆ ಭಕ್ತಿಯ ಪ್ರಕಾಶ್ ಗಳನ್ನು ಸಾರುತ್ತದೆ ಪ್ರತಿಯೊಬ್ಬರ ಮನೆಯಲ್ಲಿ ಬೆಳ್ಳಿ ಬಂಗಾರವಾಗಲಿ ಬದುಕು ಬೆಳಕಾಗಲಿ ಸಂಬಂಧಗಳು ಚಿರನೂತನವಾಗಿ ಉಳಿಯಲಿ ಎನ್ನುವ ಈ ಸಂದೇಶದಿಂದ ಅವರು ವೈವಿಧ್ಯಮಯವಾದ ಅರ್ಥಪೂರ್ಣವಾದ ವರ್ಣರಂಜಿತವಾದ ಪ್ರೀತಿ ನಗುನಗುತಾ ಪ್ರತಿಯೊಬ್ಬರನ್ನು ಸ್ವಾಗತಿಸಿ ಈ ಒಂದು ಅಲಂಕಾರವನ್ನ ಬೊಂಬೆಗಳ ಮೂಲಕವಾಗಿ ದೈವಿಕ ಪರಂಪರೆಯನ್ನು ಮುಂದಿನ ಸಂತತಿಗೆ ಮುಂದಿನ ಪೀಳಿಗೆಗೆ ಈವಶಕ್ತಿ ನಾಡಿನ ಶಕ್ತಿ ಆಗಲಿ ಅಂತ ಹೇಳಿ ಈ ನಾಡ ಹಬ್ಬವನ್ನು ಆಚರಿಸಿದ್ದಾರೆ ಅವರಿಗೆ ನಮ್ಮೆಲ್ಲರ ಪರವಾಗಿ ಸಮಸ್ತ ಕನ್ನಡ ಮನಸುಗಳ ಪರವಾಗಿ ನಮನಗಳು.