LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಹೈ ಅಂಗಳಕ್ಕೆ ಸ್ಟಿಂಗ್

ಎಐಸಿಸಿ ಪ್ರಮುಖ ವೇಣುಗೋಪಾಲ್‌ಗೆ ಸಿಎಂರಿAದ ವಿವರಣೆ



ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಬಗ್ಗೆ ಎಐಸಿಸಿ ವರಿಷ್ಠರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿವರ ನೀಡಿದ್ದಾರೆ.ನಿನ್ನೆ ದೆಹಲಿಗೆ ಬೇಟಿ ನೀಡಿದ್ದ ಮುಖ್ಯಮಂತ್ರಿ ಅವರು ಕೇಂದ್ರ ಸಚಿವರನ್ನು ಭೇಟಿಯಾದ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಸ್ಟಿಂಗ್ ಆಪರೇಷನ್ ಸಂಬAಧ ನಡೆದಿರುವ ವಿದ್ಯಮಾನಗಳ ಬಗ್ಗೆ ವಿವರಿಸಿದ್ದಾರೆ. ತಾವು ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ಹೋದ ಸಂದರ್ಭದಲ್ಲೇ ರಾಜ್ಯದ ಗೃಹ ಸಚಿವರು ಸಹ ಅವರೊಂದಿಗೆ ಮಾತನಾಡಲು ಅಲ್ಲಿಗೆ ಬಂದಿದ್ದರು ಎಂದು ತಿಳಿಸಿದ್ದಾರೆ.ಸ್ಟಿಂಗ್ ಆಪರೇಷನ್ ವಿಷಯವನ್ನು ಜೆಡಿಎಸ್ ಬಳಸಿಕೊಳ್ಳುತ್ತಿರುವ ಬಗ್ಗೆ ವೇಣುಗೋಪಾಲ್ ಅವರ ಗಮನಕ್ಕೆ ತಂದಿದ್ದೇನೆ ಎಂದು ಅವರು ಹೇಳಿದ್ದಾರೆ.ಒಟ್ಟಾರೆ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಇದೀಗ ದೆಹಲಿ ಅಂಗಳಕ್ಕೂ ತಲುಪಿದೆ. ಮತ್ತೊಂದೆಡೆ ಇಂದು ಮತ್ತೆ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸ್ಟಿಂಗ್ ಆಪರೇಷನ್ ಸಂಬಂಧ ನಡೆಯುತ್ತಿರುವ ತನಿಖೆ ವೇಳೆ ಸಿಸಿಬಿ ಅವರು ನೆಪಕ್ಕೆ ಹಿರಿಯ ಪತ್ರಕರ್ತನೋರ್ವನನ್ನು ಬಂಧಿಸಿ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.ಆತನನ್ನು ಕರೆತಂದು ಮತ್ತೆ ಬಿಟ್ಟು ಕಳುಹಿಸಿದ್ದಾರೆ. ಕಾಟಾಚಾರದ ತನಿಖೆ ನಡೆಯುತ್ತಿದೆ. ಮಾಧ್ಯಮ ಸಂಸ್ಥೆ ಮುಖ್ಯಸ್ಥರೋರ್ವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಪತ್ರಕರ್ತನ ಜೊತೆ ಕೆಲಸ ಮಾಡಿದ್ದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹೇಳಿದ ಅವರು 12 ಸ್ಟಿಂಗ್ ವಿಡೀಯೋ ಇದೆ ಎಂದು ಹೇಳಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಈ ಮಾತನ್ನು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬಿಟ್ಟು ಕಳುಹಿಸಿದ ಪತ್ರಕರ್ತನಿಗೆ ತೋರಿಕೆಗೆ ಸಮನ್ಸ್ ನೀಡಿದ್ದಾರೆ ಅಷ್ಟೆ ಎಂದು ಹೇಳಿದರು. ತನಿಖಾಧಿಕಾರಿ ಅಜಯ್ ಹಿಲೋರಿ ಅವರ ಮೇಲೆ ಐಎಂಎ ಪ್ರಕರಣದಲ್ಲಿ ಆರೋಪವಿತ್ತು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.ಹಿಲೋರಿಗೆ ಇದ್ದ ವಕೀಲನನ್ನೇ ಮಾಧ್ಯಮ ಮುಖ್ಯಸ್ಥನಿಗೂ ವಕೀಲರಾಗಿ ನೇಮಿಸಿದ್ದಾರೆ. ಸಿದ್ದರಾಮಯ್ಯ ನವರ ವರ್ಚಸ್ಸು ಹಾಳು ಮಾಡಿ ಕಾಂಗ್ರೆಸ್ ಮುಗಿಸುತ್ತಿದ್ದಾರೆ ಎಂದು ದೂರಿದ್ದಾರೆ.ಒಟ್ಟಾರೆ ಸ್ಟಿಂಗ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು ಹಾಲಿ ಮತ್ತು ಮಾಜಿ ಸಿಎಂಗಳ ನಡುವಿನ ವೈಯಕ್ತಿಕ ಹೋರಾಟವಾಗಿ ಪರಿಣಮಿಸುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST