LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ಗಂಧದಗುಡಿ ಸಿನಿಹಬ್ಬ'ದ ಲಾಂಛನ ಬಿಡುಗಡೆ 


ಕಳೆದ ಐದು ವರ್ಷಗಳಿಂದ ಮೈಸೂರು ಕೇಂದ್ರವಾಗಿರಿಸಿಕೊAಡು ಸಿನಿಮಾ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ `ಮೈಸೂರು ಸಿನಿಮಾ ಸೊಸೈಟಿ’ ಇದೀಗ ತನ್ನ ಕಾರ್ಯ ಚಟುವಟಿಕೆಗಳನ್ನು ಬೆಂಗಳೂರಿಗೂ ವಿಸ್ತರಿಸುತ್ತಿದೆ. 
ಈಗಾಗಲೇ ಮೈಸೂರಿನಲ್ಲಿ `ಪರಿದೃಶ್ಯ’ ಎಂಬ ಹೆಸರಿನಲ್ಲಿ ಕಿರುಚಿತ್ರೋತ್ಸವವನ್ನು ಆಯೋಜಿಸುತ್ತ ಬಂದಿರುವ `ಮೈಸೂರು ಸಿನಿಮಾ ಸೊಸೈಟಿ’, ಈ ಬಾರಿ ಬೆಂಗಳೂರಿನಲ್ಲಿ `ಗಂಧದಗುಡಿ ಸಿನಿಹಬ್ಬ’ ಎಂಬ ಹೆಸರಿನಲ್ಲಿ ಕಿರುಚಿತ್ರೋತ್ಸವವನ್ನು ಆಯೋಜಿಸಲು ಮುಂದಾಗಿದೆ. ಇದೇ ನವೆಂಬರ್ 21 ಮತ್ತು 22ರಂದು ಬೆಂಗಳೂರಿನಲ್ಲಿ `ಗಂಧದಗುಡಿ ಸಿನಿಹಬ್ಬ’ ಕಿರುಚಿತ್ರೋತ್ಸವ ನಡೆಯಲಿದ್ದು, ಕಾರ್ಯಕ್ರಮದ ಪೂರ್ವಭಾವಿಯಾಗಿ `ಗಂಧದಗುಡಿ ಸಿನಿಹಬ್ಬ’ದ ಲಾಂಛನ ಬಿಡುಗಡೆ ಸಮಾರಂಭ ನಡೆಯಿತು. ಕನ್ನಡ ನಟಿ ತೇಜಸ್ವಿನಿ ಶರ್ಮ, `ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ’ದ ಅಧ್ಯಕ್ಷ ಎನ್.ಆರ್.ಕೆ ವಿಶ್ವನಾಥ್, ಮುಖ್ಯ ಅತಿಥಿಗಳಾಗಿ ಆಗಮಿಸಿ, `ಗಂಧದಗುಡಿ ಸಿನಿಹಬ್ಬ’ ಕಿರುಚಿತ್ರೋತ್ಸವದ ಲಾಂಛನ ಅನಾವರಣ ಮಾಡಿದರು. ಇದೇ ವೇಳೆ ಮಾತನಾಡಿದ ನಟಿ ತೇಜಸ್ವಿನಿ ಶರ್ಮ, `ಕನ್ನಡ ಚಿತ್ರಗಳನ್ನು ಮತ್ತು ಸದಭಿರುಚಿ ಪ್ರೇಕ್ಷಕರನ್ನು ಬೆಳೆಸುವ ನಿಟ್ಟಿನಲ್ಲಿ `ಮೈಸೂರು ಸಿನಿಮಾ ಸೊಸೈಟಿ’ಯಂತಹ ಸಂಸ್ಥೆಗಳ ಅಗತ್ಯವಿದೆ. ಇಂಥ ವೇದಿಕೆಗಳ ಮೂಲಕ ನೂರಾರು ಹೊಸ ಕಲಾವಿದರು, ತಂತ್ರಜ್ಞರಿಗೆ ಮನ್ನಣೆ, ಮಾನ್ಯತೆ ಸಿಗುತ್ತಿದೆ. ಈ ವೇದಿಕೆಯನ್ನು ನಾವೆಲ್ಲರೂ ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಕನ್ನಡ ಸಿನಿಮಾಕ್ಕಾಗಿಯೇ ಇರುವ ಈ ಕಾರ್ಯಕ್ರಮ ಯಶಸ್ವಿಯಾಗಲಿ’ ಎಂದರು. `ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ’ದ ಅಧ್ಯಕ್ಷ ಎನ್.ಆರ್.ಕೆ ವಿಶ್ವನಾಥ್ ಮಾತನಾಡಿ, `ಮೈಸೂರು ಸಿನಿಮಾ ಸೊಸೈಟಿ’ ಇಂಥ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. `ಗಂಧದಗುಡಿ ಸಿನಿಹಬ್ಬ’ದ ಮೂಲಕ `ಮೈಸೂರು ಸಿನಿಮಾ ಸೊಸೈಟಿ’ಯ ಚಟುವಟಿಕೆ ಮೈಸೂರಿನಿಂದ ಬೆಂಗಳೂರಿಗೆ ವಿಸ್ತರಿಸಿದೆ. ಮುಂದೆ ಈ ಚಟುವಟಿಕೆಗಳು ರಾಜ್ಯ ಎಲ್ಲಾ ಕಡೆಗಳಿಗೂ ವಿಸ್ತರಿಸಲಿ. ಮುಂದಿನ ದಿನಗಳಲ್ಲಿ ಈ ಚಿತ್ರೋತ್ಸವ ಇನ್ನಷ್ಟು ದೊಡ್ಡದಾಗಿ ಬೆಳೆಯಲಿ’ ಎಂದು ಹಾರೈಸಿದರು. 
ಇದೇ ವೇಳೆ, `ಮೈಸೂರು ಸಿನಿಮಾ ಸೊಸೈಟಿ’ ಅಧ್ಯಕ್ಷ ಚೇತನ್ ಎಂ., ಕಾರ್ಯದರ್ಶಿ ಜಯಶೇಖರ್ ವಿ. ಆರ್., ಖಜಾಂಚಿ ಸುರೇಶ್ ಚಂದ್ರ ಎಂ. ಆರ್., ಸದಸ್ಯರಾದ ಸೋಮಶೇಖರ್ ಪಿ. ಎಲ್., ಅಲ್ವಿನ್ ಮತ್ತಿತರರು ಈ ವೇಳೆ ಹಾಜರಿದ್ದು `ಮೈಸೂರು ಸಿನಿಮಾ ಸೊಸೈಟಿ’ಯ ಚಟುವಟಿಕೆಗಳು ಮತ್ತು `ಗಂಧದಗುಡಿ ಸಿನಿಹಬ್ಬ’ದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. 
ಇದೇ 2026ರ ನವೆಂಬರ್ 21 ಮತ್ತು 22ರಂದು ಎರಡು ದಿನಗಳ ಕಾಲ ಬೆಂಗಳೂರಿನ ಗಾಂಧಿನಗರದ ಕೆ. ಜಿ. ರಸ್ತೆಯಲ್ಲಿರುವ ಎಫ್.ಕೆ.ಸಿ.ಸಿ.ಐ  ಭವನದ ಸರ್.ಎಂ.ವಿ ಆಡಿಟೋರಿಯಂನಲ್ಲಿ `ಗಂಧದಗುಡಿ ಸಿನಿಹಬ್ಬ’ ನಡೆಯಲಿದ್ದು, ಸುಮಾರು 30ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನವಾಗಲಿವೆ. `ಗಂಧದಗುಡಿ ಸಿನಿಹಬ್ಬ’ದಲ್ಲಿ ಸುಮಾರು 12 ಗಂಟೆ 35 ನಿಮಿಷಗಳ ಕಾಲ ಸುದೀರ್ಘ ಅವಧಿಯಲ್ಲಿ ಚಿತ್ರಗಳು ಪ್ರದರ್ಶನವಾಗುತ್ತಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST