LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಅಭಿಷೇಕ್ ಅಬ್ಬರದ ಬ್ಯಾಟಿಂಗ್: ಸರಣಿ ಗೆದ್ದ ಭಾರತ


ವೆಲ್ಲಿಂಗ್ಟನ್: ಅಭಿಷೇಕ್ ಶರ್ಮಾ ಅವರ ಸ್ಫೋಟಕ ಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಜಯ ಗಳಿಸುವ ಮೂಲಕ ಐದು ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ನ್ಯೂಜಿಲೆಂಡ್ 3 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ಭಾರತ ಇನ್ನೂ 40 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 199 ರನ್ ಹೊಡೆದು ಜಯ ಸಾಧಿಸಿತು. ಶತಕದ ಜೊತೆಯಾಟ:ಭಾರತದ ಈ ಗೆಲುವಿಗೆ ಕಾರಣವಾಗಿದ್ದು ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಅವರ ಸ್ಫೋಟಕ ಶತಕದ ಜೊತೆಯಾಟ. ಇವರಿಬ್ಬರು 43 ಎಸೆತಗಳಲ್ಲಿ 133 ರನ್ ಜೊತೆಯಾಟವಾಡಿ ಭದ್ರವಾದ ಬುನಾದಿ ಹಾಕಿದರು. ವೈಭವ್ ಸೂರ್ಯವಂಶಿ 45 ರನ್(19 ಎಸೆತ, 4 ಬೌಂಡರಿ, 4 ಸಿಕ್ಸ್) ಗಳಿಸಿದ್ದಾಗ ಸಿಕ್ಸ್ ಸಿಡಿಸಲು ಹೋಗಿ ಔಟಾದರು.ಸ್ಫೋಟಕ ಶತಕ: ಎದುರಿಸಿದ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ರನ್ ಖಾತೆ ತೆರೆದ ಅಭಿಷೇಕ್ ಶರ್ಮಾ 15 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ವೈಭವ್ ಆಟದ ಬಳಿಕವೂ ಸ್ಫೋಟಕ ಬ್ಯಾಟ್ ಮುಂದುವರಿಸಿದ ಅಭಿಷೇಕ್ ಶರ್ಮಾ 35 ಎಸೆತಗಳಲ್ಲಿ ಮೂರನೇ ಶತಕ ಹೊಡೆದು ಅಂತಿಮವಾಗಿ 113 ರನ್(38 ಎಸೆತ, 9, ಬೌಂಡರಿ, 11 ಸಿಕ್ಸ್) ಸಿಡಿಸಿ ಔಟಾದರು. ಈ ಹಿಂದೆ ಅಭಿಷೇಕ್ ಶರ್ಮಾ 30 ಮತ್ತು 37 ಎಸೆತಗಳಲ್ಲಿ ಶತಕ ಹೊಡೆದಿದ್ದರು.ಪವರ್ ಪ್ಲೇನಲ್ಲಿ 118 ರನ್ಅಭಿಷೇಕ್ ಮತ್ತು ಸೂರ್ಯವಂಶಿಯ ವೈಭವದ ಆಟ ಹೇಗಿತ್ತು ಎಂದರೆ 6 ಓವರ್‌ಗಳ ಪವರ್ ಪ್ಲೇಯಲ್ಲೇ ಭಾರತ 118 ರನ್ ಹೊಡೆದಿತ್ತು. ಮೊದಲ ಓವರ್‌ನಲ್ಲಿ 26 ರನ್, 2ನೇ ಓವರ್‌ನಲ್ಲಿ 17 ರನ್, ಮೂರನೇ ಓವರ್‌ನಲ್ಲಿ 20 ರನ್, 4ನೇ ಓವರ್‌ನಲ್ಲಿ 20 ರನ್, ಐದನೇ ಓವರ್‌ನಲ್ಲಿ 16 ರನ್, ಆರನೇ ಓವರ್‌ನಲ್ಲಿ 18 ರನ್ ಬಂದಿತ್ತು.ಕೊನೆಯಲ್ಲಿ ಸಂಜು ಸ್ಯಾಮ್ಸನ್ 18 ರನ್, ನಾಯಕ ಶ್ರೇಯಸ್ ಅಯ್ಯರ್ 5, ತಿಲಕ್ ವರ್ಮಾ ಔಟಾಗದೇ 1 ರನ್ ಹೊಡೆದು ಭಾರತ ತಂಡಕ್ಕೆ ಜಯವನ್ನು ತಂದುಕೊಟ್ಟರು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST