LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

`ವಿದ್ಯಾರ್ಥಿಗಳು ವಿದ್ಯಾಜ್ಞಾನ ಪಡೆದುಕೊಳ್ಳುವ ಜೊತೆಗೆ ಆತ್ಮಜ್ಞಾನ ಪಡೆದುಕೊಳ್ಳಬೇಕು’


ಕೆ.ಆರ್.ನಗರ:     ವ್ಯಕ್ತಿ ಹಂತ ಹಂತವಾಗಿ ಮೇಲೆ ಹೋದಂತೆ ಅಹಂಕಾರವನ್ನು ತ್ಯಜಿಸುತ್ತಾ ಹೋಗಬೇಕು. ಆಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಮೂಳೆ ತಜ್ಞ ಹಾಗೂ ಜಿವಾ ಆರ್ಥೋಕೇರ್‌ನ ಮುಖ್ಯಸ್ಥರಾದ ಡಾ.ಗೌತಮ್ ಹೇಳಿದರು.   ಪಟ್ಟಣದ ಅಂಬಾ ಭವಾನಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸೃಜನ ಲೇಖಕರು ಮತ್ತು ಕಲಾವಿದರ ಬಳಗದ ವತಿಯಿಂದ ಜಾತ್ಯತೀತ ವಾಗಿ, ಧರ್ಮಾತೀತವಾಗಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದ ಎಲ್ಲಾ ಜನಾಂಗದ ಪ್ರತಿ ಭಾನ್ವಿತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು ತಮ್ಮ ಅಧ್ಯಕ್ಷತಾ ಭಾಷಣದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಜ್ಞಾನವನ್ನು ಪಡೆದುಕೊಳ್ಳುವ ಜೊತೆಗೆ ಆತ್ಮಜ್ಞಾನವನ್ನು ಪಡೆದುಕೊಳ್ಳಬೇಕು. ಇದು ಏನೂ ಇಲ್ಲದ ವ್ಯಕ್ತಿಯ ನ್ನು ಸಂತೋಷವಾಗಿ ಇರುವಂತೆ ಮನಸ್ಸನ್ನು ರೂಪಿಸುತ್ತದೆ. ಉದ್ಯೋಗ, ದುಡ್ಡು, ವಿದ್ಯೆ ಎಲ್ಲಾ ಇದ್ದವರಲ್ಲಿ ಆತ್ಮ ಜ್ಞಾನ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂತಹವರು ನೆಮ್ಮದಿ ಕಂಡುಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ನೀವು ವಿದ್ಯೆಯ ಜ್ಞಾನದ ಜೊತೆಗೆ ಆತ್ಮಜ್ಞಾನವನ್ನು ಪಡೆ ದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಲಾಳಂದೇವನಹಳ್ಳಿ ಮಠದ ಮಾತೆ ಜಯದೇವಿ ತಾಯಿ ಅವರು ತಮ್ಮ ಆಶೀರ್ವಚನದಲ್ಲಿ, ವಿದ್ಯಾರ್ಥಿಯು ತನ್ನ ಬದುಕಿನಲ್ಲಿ ಹಠ, ಛಲ, ಭಕ್ತಿ, ಹುರುಪು ಇಟ್ಟುಕೊಳ್ಳಬೇಕು. ಆಗ ಮಾತ್ರ ಯಶಸ್ಸಿನ ಕಡೆಗೆ ಸಾಗಲು ಸಾಧ್ಯ ಯಾವ ಸಂದರ್ಭದಲ್ಲಿಯೂ ಧೃತಿಗೆಡದೆ ಆತ್ಮವಿಶ್ವಾಸ ಮತ್ತು ದೃಢತೆಯಿಂದ ಬದುಕನ್ನು ನಡೆಸುವಂತಾಗಬೇಕು. ಇಂತಹ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ರಾ.ಸುರೇಶ್‌ರವರಿಗೆ ದೇವರು ಒಳ್ಳೆಯ ಆರೋಗ್ಯ ನೀಡಲಿ ಎಂದರು.ಸ್ತ್ರೀರೋಗ ತಜ್ಞೆ ಡಾ.ಭವಾನಿ, ಇಸ್ಮಾಯಿಲ್‌ಖಾನ್, ಭೀಮ್‌ರಾವ್, ಮೋಹನ್‌ರಾವ್, ಶಿಕ್ಷಕ ಕೃಷ್ಣನಾಯಕ್, ಪತ್ರಕರ್ತೆ ಆಶಾ, ಶಿಕ್ಷಕ ವಸಂತ, ಶಿವಮ್ಮ, ತಿಮ್ಮಶೆಟ್ಟಿ ಮಾತನಾಡಿದರು.
ಸೃಜನ ಲೇಖಕರು ಮತ್ತು ಕಲಾವಿದರ ಬಳಗದ ಅಧ್ಯಕ್ಷರು ಹಾಗೂ ವಿಚಾರ ಪ್ರಜ್ಞೆ ಪತ್ರಿಕೆಯ ಸಂಪಾದಕರಾದ ರಾ.ಸುರೇಶ್ ಅವರು ಗಣ್ಯರನ್ನು ಸ್ವಾಗತಿಸುತ್ತಾ, ಕಳೆದ 25 ವರ್ಷಗಳಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಉತ್ತಮ ಕಾರ್ಯಕ್ಕೆ ಸಹಕರಿಸಿದ ಎಲ್ಲರನ್ನೂ ಆತ್ಮೀಯವಾಗಿ ಸ್ಮರಿಸಿದರು.ಸಮಾರಂಭದಲ್ಲಿ ಜಾತ್ಯಾತೀತವಾಗಿ ಧರ್ಮಾತೀತವಾಗಿ 150 ಮಕ್ಕಳಿಗೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿ ವಿದ್ಯಾರ್ಥಿನಿಯರÀನ್ನು ಪುರಸ್ಕರಿಸ ಲಾಯಿತು. ಕಾರ್ಯಕ್ರಮದಲ್ಲಿ ಡಾ.ನಟರಾಜ್, ಮರಾಠ ಮಂಡಳಿ ಅಧ್ಯಕ್ಷ ಮೋಹನ್‌ರಾವ್, ಕಾರ್ಯದರ್ಶಿ ಭೀಮರಾವ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಮೇಶ್, ರೋಟರಿ ಕ್ಲಬ್ ಅಧ್ಯಕ್ಷ ಪುರುಷೋತ್ತಮ್, ಜಿ.ಶೇಷಾದ್ರಿ, ಶಿಕ್ಷಕಿಯರಾದ ಭಾರತಿ, ಶಿವಮ್ಮ, ಸುರೇಶ್‌ಕಶ್ಯಪ್, ಕೃಷ್ಣನಾಯಕ್, ಪ್ರಗತಿಪರ ರೈತ ಚಿಕ್ಕಕೊಪ್ಪಲು ಸ್ವಾಮಿ, ಲೋಕನಾಥ್, ಎಂ.ಎನ್.ಮAಜುನಾಥ್, ದೊಡ್ಡಯ್ಯ, ನಿವೃತ್ತ ಇಂಜಿನಿಯರ್ ಕೆ.ಬಿ.ಪ್ರಕಾಶ್, ಲೆಕ್ಕ ಸಹಾಯಕಿ ಅಶ್ವಿನಿ, ಶಶಿಶಂಕರ್, ಎಸ್.ಸೌಮ್ಯ ಇನ್ನಿತರು ಸೇರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST