ಕೆ.ಆರ್.ಪೇಟೆ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಹಾಲಿನ ಪುಡಿ ಹಗರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಹಾಗೂ ಹಾಗೂ ಜೆಡಿಎಸ್ ಬೆಂಬಲಿತ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೇಲೆ ನಡೆಸುತ್ತಿರುವ ಕಿರುಕುಳ ಖಂಡಿಸಿ ತಾಲ್ಲೂಕು ಜೆಡಿಎಸ್ ಪಕ್ಷದ ಸಾವಿರಾರು ಕಾರ್ಯಕರ್ತರು ಪಟ್ಟಣದ ಮನ್‌ಮುಲ್ ಹಾಲು ಶಿಥಲೀಕರಣ ಘಟಕಕ್ಕೆ ಬೃಹತ್ ಪ್ರತಿಭಟನೆ ನಡೆಸಿದರು.ಶಾಸಕ ಹೆಚ್.ಟಿ.ಮಂಜು, ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್ ಹಾಗೂ ಜೆಡಿಎಸ್ ರೈತ ಮೋರ್ಚಾ ಅಧ್ಯಕ್ಷ ಹುಲ್ಲೇಗೌಡ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೆಲಕಾಲ ರಸ್ತೆ ತಡೆ ಚಳುವಳಿ ನಡೆಸಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೇಲೆ ಅಧಿಕಾರಿಗಳು ಹಾಗೂ ನಿರ್ದೇಶಕರುಗಳು ನಡೆಸುತ್ತಿರುವ ಧೋರಣೆಯನ್ನು ಖಂಡಿಸಿದರು.ಶಾಸಕ ಹೆಚ್.ಟಿ.ಮಂಜು ಮಾತನಾಡಿ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ ಮುಲ್)ದಲ್ಲಿ ನಡೆದಿದೆ ಎನ್ನಲಾದ ಹಾಲಿನ ಪುಡಿ ಕಲಬೆರಕೆ ಪ್ರಕರಣವನ್ನು ರಾಜ್ಯ ಸರ್ಕಾರವು ಕೂಡಲೇ ಸಿಬಿಐನಂತಹ ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳು ಹಾಗೂ ನಿರ್ದೇಶಕರುಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮನ್‌ಮುಲ್ ನಲ್ಲಿ ಹಾಲಿನ ಪುಡಿ ಹಗರಣವು ಕಪುö್ಪ ಚುಕ್ಕೆಯಾಗಿದೆ. ಇದರಲ್ಲಿ ಈ ಹಗರಣದಲ್ಲಿ ಕೇವಲ ಅಧಿಕಾರಿಗಳು ಸೇರಿಲ್ಲ. ಅನೇಕ ಪ್ರಭಾವಿ ನಿರ್ದೇಶಕರ ಪ್ರಮುಖ ಪಾತ್ರವಿದೆ ಹಾಗಾಗಿ ಮನ್ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣವು ಹಾಲು ಉತ್ಪಾದಕರಲ್ಲಿ ಆತಂಕ ಮೂಡಿಸಿದೆ. ಒಕ್ಕೂಟವನ್ನು ಕಪುö್ಪ ಚುಕ್ಕಿಯಿಂದ ರಕ್ಷಣೆ ಮಾಡಬೇಕಾದರೆ ಕೂಡಲೇ ತನಿಖೆ ಆಗಲೇಬೇಕು. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಸಹ ನಿರ್ಧಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ರೈತರು, ಹಾಲು ಉತ್ಪಾದಕರು ಹಾಗೂ ರೈತ ಮಹಿಳೆಯರ ಬದುಕಿನ ಹಿತದೃಷ್ಟಿಯಿಂದ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವುದು ಅತ್ಯಗತ್ಯ ಎಂದು ಶಾಸಕರು ಒತ್ತಾಯಿಸಿದರು.ಪ್ರತಿಭಟನೆಯನ್ನು ಹತ್ತಿಕ್ಕುವ ದೃಷ್ಠಿಯಿಂದ ಮನ್‌ಮುಲ್ ಶೀಥಲೀಕರಣ ಉಪಕಚೇರಿಯ ಒಳಗೆ ಯಾರೂ ಪ್ರವೇಶ ಮಾಡದಂತೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಆಗ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜೆಡಿಎಸ್ ಕಾರ್ಯಕರ್ತರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲು ಉತ್ಪಾದಕರು ಷೇರುದಾರರು ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ಆರಂಭಿಸಿದರು. ಪೊಲೀಸರಿಗೂ ದಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಕಾರ್ಯಕರ್ತರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಹಿನ್ನೆಲೆಯಲ್ಲಿ ಹತ್ತಾರು ಬಸ್ಸುಗಳು ಹಾಗೂ ಲಾರಿಗಳು ಮುಖ್ಯ ರಸ್ತೆಯಲ್ಲಿ ನಿಂತ ಕಾರಣ ಟ್ರಾಫಿಕ್ ಜಾಮ್ ಹೆಚ್ಚಾದ ಕಾರಣ ಪೊಲೀಸರು ಮನ್‌ಮುಲ್ ಕಚೇರಿಯ ಒಳಗೆ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟರು. ನಂತರ ಟ್ರಾಫಿಕ್ ಜಾಮ್ ಕಡಿಮೆಯಾಯಿತು.ಕೊನೆಗೆ ಮಧ್ಯಾಹ್ನ 3ಗಂಟೆಗೆ ಮನ್‌ಮುಲ್ ಅಧಿಕಾರಿಗಳು ಹಾಗೂ ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಭರವಸೆ ನೀಡಿದರು. ಜೆಡಿಎಸ್ ಬೆಂಬಲಿತ ಸಹಕಾರ ಸಂಘಗಳಾಗಲಿ, ಬೇರೆ ಸಂಘಗಳಾಗಲಿ ಎಲ್ಲಾ ಸಂಘಗಳಿಗೂ ಒಂದೇ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಿಕೊಡಲು ಹಾಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿ ಪ್ರತಿಭಟನೆಯನ್ನು ಕೈಬಿಡುವಂತೆ ಮನವೊಲಿಸಿದರು. ನಂತರ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಸಂಜೆ ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದರು.ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಸುನಿಲ್‌ಕುಮಾರ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ಸಮಿತಿ ಸದಸ್ಯರಾದ ಅಕ್ಕಿಹೆಬ್ಬಾಳು ರಘು, ರಾಜೇನಹಳ್ಳಿ ಕುಮಾರಸ್ವಾಮಿ, ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಮೆಣಸ ಮಹದೇವೇಗೌಡ, ತಾಲ್ಲೂಕು ಜೆಡಿಎಸ್ ಉಪಾಧ್ಯಕ್ಷ ನಂಜೇಗೌಡ, ಕೊರಟೀಕೆರೆ ದಿನೇಶ್, ಐನೋರಹಳ್ಳಿ ಮಲ್ಲೇಶ್, ಐಕನಹಳ್ಳಿ ಕೃಷ್ಣೇಗೌಡ, ಕಿಕ್ಕೇರಿ ಶೇಖರ್, ಶೀಳನೆರೆ ಸಿದ್ದೇಶ್, ಹರೀನಹಳ್ಳಿ ರಘು, ಯುವ ಘಟಕ ಅಧ್ಯಕ್ಷ ಮೀಸೆ ಮಹದೇವೇಗೌಡ, ಕಾನೂನು ಘಟಕ ಅಧ್ಯಕ್ಷ ವಿ.ಎಸ್.ಧನಂಜಯ್‌ಕುಮಾರ್, ತಾಲ್ಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಲದೇವ್, ನಿರ್ದೇಶಕರಾದ ನಾಗರಘಟ್ಟ ಎನ್.ಕೆ.ದಿಲೀಪ್‌ಕುಮಾರ್, ಕಿಕ್ಕೇರಿ ಮಧು, ಹೆಚ್.ಟಿ.ಲೋಕೇಶ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಅಶೋಕ್, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲೇಶ್, ಐಕನಹಳ್ಳಿ ಕೃಷ್ಣೇಗೌಡ, ಹುಬ್ಬನಹಳ್ಳಿ ಬಲರಾಮು, ಸಾರಂಗಿ ನಾಗೇಶ್, ದೊಡ್ಡೇಗೌಡ, ರಾಮಕೃಷ್ಣೇಗೌಡ, ಸಾಮಿಲ್ ರವಿಕುಮಾರ್, ರಾಮಕೃಷ್ಣೇಗೌಡ, ಕೃಷ್ಣೇಗೌಡ, ಭಾಗ್ಯಮ್ಮ, ಅಲೋಕ್, ನಾಗರಾಜೇಗೌಡ, ಸೇರಿದಂತೆ ಇತರರು ಹಾಜರಿದ್ದರು.