LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

2028ರ ಚುನಾವಣೆಯಲ್ಲಿ ರೈತ ವಿರೋಧಿ ಕಾಂಗ್ರೆಸ್ಸಿಗರನ್ನು ಜನರೇ ಮನೆಗೆ ಕಳುಹಿಸಲಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಅನ್ನದಾತನ ಸ್ವಾಭಿಮಾನಕ್ಕಾಗಿ ಹೋರಾಟ; ಬನ್ನೂರಿನಿಂದ ಸಂತೆಮಾಳದವರೆಗೆ `ರೈತ ಸ್ವಾಭಿಮಾನ ಯಾತ್ರೆ’


ತಿ. ನರಸೀಪುರ: ಮುಂಬರುವ 2028ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ರೈತ ವಿರೋಧಿ ಕಾಂಗ್ರೆಸ್ಸಿಗರನ್ನು ರಾಜ್ಯದ ಜನತೆ ಮನೆಗೆ ಕಳುಹಿಸಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭವಿಷ್ಯ ನುಡಿದರು.
ತಾಲ್ಲೂಕಿನ ಬನ್ನೂರಿನ ಕಾವೇರಿ ಸರ್ಕಲ್‌ನಿಂದ ಸಂತೆಮಾಳದವರೆಗೆ ಜೆಡಿಎಸ್ ವತಿಯಿಂದ ಆಯೋಜಿಸಿದ್ದ `ರೈತ ಸ್ವಾಭಿಮಾನ ಯಾತ್ರೆ’ಯಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.ಈ ಯಾತ್ರೆಯನ್ನು ಯಾವುದೇ ಚುನಾವಣಾ ಪ್ರಚಾರ ಅಥವಾ ಮತಯಾಚನೆಗಾಗಿ ನಡೆಸುತ್ತಿಲ್ಲ. ರಾಜ್ಯದ ರೈತರ ಕಷ್ಟ, ನೋವು ಹಾಗೂ ಸಮಸ್ಯೆಗಳನ್ನು ಆಲಿಸಿ, ಅವರ ಸ್ವಾಭಿಮಾನದ ಬದುಕಿಗಾಗಿ ಧ್ವನಿ ಎತ್ತುವ ಉದ್ದೇಶದಿಂದ ರಾಜ್ಯಾದ್ಯಂತ `ರೈತ ಸ್ವಾಭಿಮಾನ ಯಾತ್ರೆ’ ನಡೆಸಲಾಗುತ್ತಿದೆ ಎಂದು ಹೇಳಿದರು.ರಾಜ್ಯದ ರೈತರು ಬರಗಾಲ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ರೈತರಿಗೆ ಎಕರೆಗೆ ಕನಿಷ್ಠ `25 ಸಾವಿರದಿಂದ 30 ಸಾವಿರ ಪರಿಹಾರ ನೀಡಬೇಕೆಂಬ ನಿರೀಕ್ಷೆ ಇತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ನೀಡದೆ ಸರ್ಕಾರ ರೈತರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಪೂರೈಸದೆ ಏಕಾಏಕಿ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ. ಕಾವೇರಿ ಹಾಗೂ ಕಬಿನಿ ಭಾಗದ ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಹರಿಸದೆ ಅನ್ಯಾಯ ಮಾಡಲಾಗುತ್ತಿದೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ಗೊಬ್ಬರ ಸಮರ್ಪಕವಾಗಿ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಆಡಳಿತಾವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ರೈತರ ಸಾಲಮನ್ನಾ ಮಾಡುವ ಮೂಲಕ ರೈತರ ನೆರವಿಗೆ ನಿಂತಿದ್ದರು. ಟಿ. ನರಸೀಪುರ ತಾಲೂಕೊಂದರಲ್ಲೇ `48 ಕೋಟಿ ಸಾಲಮನ್ನಾ ಆಗಿರುವುದನ್ನು ನಿಖಿಲ್ ಕುಮಾರಸ್ವಾಮಿ ನೆನಪಿಸಿದರು.ರೈತರ ಸಮಸ್ಯೆಗಳಿಗಾಗಿ ಸ್ವಾಭಿಮಾನ ಯಾತ್ರೆ: ಅಶ್ವಿನ್ ಕುಮಾರ್ಮಾಜಿ ಶಾಸಕ ಎಂ. ಅಶ್ವಿನ್ ಕುಮಾರ್ ಮಾತನಾಡಿ, ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ `ರೈತ ಸ್ವಾಭಿಮಾನ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದರು.ರೈತರಿಗೆ ಸಮಯಕ್ಕೆ ಸರಿಯಾಗಿ ನೀರು ದೊರೆಯುತ್ತಿಲ್ಲ. ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ತಾವು ಜಾರಿಗೆ ತಂದಿದ್ದ ಏತ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದರೆ ಬನ್ನೂರು ಹಾಗೂ ಸಿಡಿಎಸ್ ಭಾಗದ ರೈತರು ಉತ್ತಮ ಬೆಳೆ ಬೆಳೆಯಬಹುದಿತ್ತು ಎಂದು ಹೇಳಿದರು.ನಿಖಿಲ್‌ಗೆ ಬೆಂಬಲ ನೀಡಲು ಅನ್ನದಾನಿ ಮನವಿ: ಮಳವಳ್ಳಿ ಮಾಜಿ ಶಾಸಕ ಕೆ. ಅನ್ನದಾನಿ ಮಾತನಾಡಿ, ಚುನಾವಣೆಯಲ್ಲಿ ಸೋತರೂ ಧೃತಿಗೆಡದೆ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ರೈತರು ಹಾಗೂ ಯುವಕರ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ಟಿ. ನರಸೀಪುರ ಕ್ಷೇತ್ರದ ರೈತರ ನೋವು, ಕಷ್ಟ ಹಾಗೂ ಸಮಸ್ಯೆಗಳನ್ನು ಆಲಿಸಲು ಅವರು ಬನ್ನೂರಿಗೆ ಆಗಮಿಸಿದ್ದಾರೆ ಎಂದರು.ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರೈತರ ಕಲ್ಯಾಣಕ್ಕಾಗಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಎಚ್.ಡಿ. ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಸ್ಮರಿಸಿದರು.ನಿಖಿಲ್ ಕುಮಾರಸ್ವಾಮಿ ಅವರಿಗೆ ಜನರು ಆಶೀರ್ವಾದ ನೀಡಬೇಕು. ಮುಂದಿನ ದಿನಗಳಲ್ಲಿ ಅವರನ್ನು ರಾಜ್ಯದ ನಾಯಕನಾಗಿ ಬೆಂಬಲಿಸಬೇಕು ಎಂದು ಕೆ. ಅನ್ನದಾನಿ ಮನವಿ ಮಾಡಿದರು.
ಮುಖಂಡರು, ರೈತರು, ಕಾರ್ಯಕರ್ತರು ಭಾಗಿ ಬನ್ನೂರಿನಿಂದ ಸಂತೆಮಾಳದವರೆಗೆ ನಡೆದ ಪಾದಯಾತ್ರೆಯಲ್ಲಿ ಜೆಡಿಎಸ್ ಮುಖಂಡರು, ರೈತರು, ಯುವಕರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ರವಿ, ವರುಣ ಕ್ಷೇತ್ರದ ಅಭ್ಯರ್ಥಿ ಅಭಿಷೇಕ್ ಮಣಿಗಾರ್, ಎಚ್.ಡಿ. ಕೋಟೆ ಕೃಷ್ಣಾನಾಯಕ್, ನರಸಿಂಹಸ್ವಾಮಿ, ಯರಗನಹಳ್ಳಿ ಮಾದೇಗೌಡ, ತಾಲೂಕು ಅಧ್ಯಕ್ಷ ಸಿಬಿ ಹುಂಡಿ ಚಿನ್ನಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗರಾಜಪುರ ಎಂ. ಸಿದ್ದರಾಜು, ಬೀಡನಹಳ್ಳಿ ಸತೀಶ್, ಜಿ.ಪಂ. ಮಾಜಿ ಸದಸ್ಯ ಜಯಪಾಲ ಭರಣಿ, ತಾ.ಪಂ. ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ಬನ್ನೂರು ವೈ.ಎಸ್. ರಾಮಸ್ವಾಮಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಧನಂಜಯ್ ಪಾಪಣ್ಣ, ಹೆಮ್ಮಿಗೆ ಹೊನ್ನ ನಾಯಕ, ಕೆ.ಎನ್. ಪ್ರಭುಸ್ವಾಮಿ, ಮಾದಿಗಹಳ್ಳಿ ಸೂರಜ್, ಮೂಗೂರು ಎಂ.ಕೆ. ಸಿದ್ದರಾಜು, ಅಪುö್ಪ ಗೌಡ, ರಮೇಶ್, ಜಯರಾಮೇಗೌಡ, ತೊಟ್ಟವಾಡಿ ಮಹದೇವಸ್ವಾಮಿ, ಕನ್ನಹಳ್ಳಿ ಮಹದೇವ, ಯುವ ಮುಖಂಡ ಮಹೇಶ್ ವಿವೇಕ್, ಸೋಸಲೆ ಶಿವಕುಮಾರ್ ಬಡ್ದು, ಕನ್ನಹಳ್ಳಿ ಮೊಳೆ ಮಣಿಕಂಠ, ಅತ್ತಹಳ್ಳಿ ರವಿ, ಕಾಡಿ ಮಾದೇವ, ತಿರುಮಕೂಡಲು ಜಯರಾಮ, ರಾಜಣ್ಣ, ರಾಜೇಶ್, ಮಾದೇಶ್, ಚೇತನ್, ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬನ್ನಿ... ಜಾನಪದ ಉಳಿಯಲಿ ಕಲೆಗಳು ಚಿರನೂತನವಾಗಲಿಜಾನಪದ ಕಲಾವಿದರ ಮಾಶಾಸನ ಹೆಚ್ಚಳ, ವಯೋಮಿತಿ ಕಡಿತಕ್ಕೆ ಸಿಎಂ ಜೊತೆ ಚರ್ಚೆ: ಉಮಾಶ್ರೀ2028ರ ಚುನಾವಣೆಯಲ್ಲಿ ರೈತ ವಿರೋಧಿ ಕಾಂಗ್ರೆಸ್ಸಿಗರನ್ನು ಜನರೇ ಮನೆಗೆ ಕಳುಹಿಸಲಿದ್ದಾರೆ: ನಿಖಿಲ್ ಕುಮಾರಸ್ವಾಮಿ`ಶ್ರೀಅನ್ನದಾನೀಶ್ವರ ಮಹಾತ್ಮೆ’ ಟ್ರೇಲರ್ ಅನಾವರಣಧಗೆ ಚಿತ್ರದಲ್ಲಿ ಸುರಕ್ಷ ಚಹಾ ಪಾತ್ರವಾಗಿ ಮೂಡಿಬಂದಿದೆಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ `ಮಹಿಮಾ’ ಚಿತ್ರ ನವದೆಹಲಿಯಲ್ಲಿ ಡಿ.ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಸಂಭ್ರಮಕನ್ನಡ ಸಿನಿ ಬದುಕಿನ ಒಳನೋಟ ಶುಭಂ ಪತ್ರಕರ್ತರು ಗಣೇಶ್ ಕಾಸರಗೋಡುರಚಿತಾ ರಾಮ್ ಬರ್ತ್ಡೇ; ಅಭಿಮಾನಿಗಳ ಸಂಭ್ರಮ ನಟಿ `ಡಿಂಪಲ್ ಕ್ವೀನ್’ ರಚಿತಾ ರಾಮ್  ಜನ್ಮದಿನದ ಸಂಭ್ರಮರೋಲೆಕ್ಸ್’ ಈಗ ‘ರಿಲಾಕ್ಸ್’