LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಕಾನೂನು ಅರಿವು ಕಾರ್ಯಾಗಾರಕ್ಕೂ ಶಿಕ್ಷಕರ ಗೈರು!


ಬಂಗಾರಪೇಟೆ: ಸುಪ್ರೀಂಕೋರ್ಟ್ ನಿರ್ದೇಶನದಂತೆ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರದಲ್ಲೇ ಶಿಕ್ಷಣ ಇಲಾಖೆಯ ಶಿಕ್ಷಕರು ಮತ್ತು ಉಪನ್ಯಾಸಕರು ಶಿಸ್ತು, ಸಮಯಪ್ರಜ್ಞೆ ಹಾಗೂ ಕರ್ತವ್ಯಬದ್ಧತೆಯನ್ನು ಮರೆತು ಬೇಕಾಬಿಟ್ಟಿಯಾಗಿ ವರ್ತಿಸಿರುವುದು ನ್ಯಾಯಾಧೀಶರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.ನಗರಸಭೆ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸಂಪನ್ಮೂಲ ವ್ಯಕ್ತಿಗಳಾದ ಸಿಆರ್‌ಪಿ ಶಿಕ್ಷಕರು, ಸರ್ಕಾರಿ ಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಎರಡು ದಿನಗಳ ಕಾರ್ಯಾಗಾರ ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಸಮಗ್ರ ಕಾನೂನು ಅರಿವು ನೀಡಲು ನಗರದ ಸಿವಿಲ್ ನ್ಯಾಯಾಲಯದ ಮೂವರು ನ್ಯಾಯಾಧೀಶರು ಭಾಗವಹಿಸಿದ್ದರು. ಇದಕ್ಕಾಗಿ ನ್ಯಾಯಾಲಯದ ಕಲಾಪಗಳನ್ನೂ ಸ್ಥಗಿತಗೊಳಿಸಿ ನ್ಯಾಯಾಧೀಶರು ಕಾರ್ಯಾಗಾರಕ್ಕೆ ಸಮಯ ಮೀಸಲಿಟ್ಟಿದ್ದರು. ಆದರೆ, ಇಂತಹ ಮಹತ್ವದ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಶಿಕ್ಷಕರು ಮತ್ತು ಉಪನ್ಯಾಸಕರು ಆರಂಭದಿAದ ಅಂತ್ಯದವರೆಗೂ ಶಿಸ್ತಿನಿಂದ ಪಾಲ್ಗೊಳ್ಳದೆ ನಿರ್ಲಕ್ಷ್ಯ ತೋರಿರುವುದು ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಯಿತು. ಕೆಲವರು ಒಂದು ಗಂಟೆ ಮಾತ್ರ ಕಾರ್ಯಾಗಾರದಲ್ಲಿ ಕುಳಿತು ಬಳಿಕ ಯಾವುದೇ ಮಾಹಿತಿ ನೀಡದೆ ಹೊರನಡೆದರೆ, ಬೆಳಿಗ್ಗೆ ಹಾಜರಾದ ಹಲವರು ಮಧ್ಯಾಹ್ನದ ಊಟದ ನಂತರ ಮರಳದೆ ಗೈರುಹಾಜರಾಗಿದ್ದಾರೆ. ಇನ್ನು ಕೆಲವರು ತಮಗೆ ಇಷ್ಟ ಬಂದAತೆ ಬಂದು ಹೋಗುವ ಮೂಲಕ ಕಾರ್ಯಾಗಾರದ ಗಂಭೀರತೆಯನ್ನೇ ಕಡೆಗಣಿಸಿರುವುದು ಕಂಡುಬAದಿದೆ.
ಶಿಕ್ಷಕರಿಗೇ ಶಿಸ್ತು ಇಲ್ಲದಿದ್ದರೆ ಮಕ್ಕಳಿಗೆ ಯಾವ ಪಾಠ ಕಲಿಸುತ್ತೀರಿ?: ಮೊದಲ ದಿನದ ಕಾರ್ಯಾಗಾರದಲ್ಲಿಯೇ ಶಿಕ್ಷಕರ ಈ ಬೇಜವಾಬ್ದಾರಿತನ ಗಮನಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ್ ಅಲಬೂರು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಕಾನೂನು ಅರಿವು ಮೂಡಿಸುವಂತಹ ಮಹತ್ವದ ಕಾರ್ಯಾಗಾರಕ್ಕೆ ಹಾಜರಾಗಿ ಜವಾಬ್ದಾರಿಯಿಂದ ಭಾಗವಹಿಸಬೇಕಾದ ಶಿಕ್ಷಕರೇ ಶಿಸ್ತು ಪಾಲಿಸದಿದ್ದರೆ ವಿದ್ಯಾರ್ಥಿಗಳಿಗೆ ಯಾವ ರೀತಿಯ ಶಿಸ್ತು ಮತ್ತು ಕಾನೂನು ಅರಿವು ಕಲಿಸಲು ಸಾಧ್ಯ ಎಂಬ ಪ್ರಶ್ನೆಯನ್ನು ಮುಂದಿಟ್ಟರು.ಶಿಕ್ಷಕರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕಾದವರು. ಅವರೇ ಸಮಯಪಾಲನೆ ಮತ್ತು ಕರ್ತವ್ಯನಿಷ್ಠೆ ತೋರದಿದ್ದರೆ ಮಕ್ಕಳಲ್ಲಿ ಶಿಸ್ತು, ಕಾನೂನಿನ ಗೌರವ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಹೇಗೆ ಬೆಳೆಸಲು ಸಾಧ್ಯ ಎಂಬ ಆತಂಕವನ್ನು ವ್ಯಕ್ತಪಡಿಸಿದರು.
ಎರಡನೇ ದಿನವೂ ಗೈರುಹಾಜರಿ; ನ್ಯಾಯಾಧೀಶರ ಅಸಮಾಧಾನ: ಮೊದಲ ದಿನದ ಎಚ್ಚರಿಕೆಯ ಹೊರತಾಗಿಯೂ ಎರಡನೇ ದಿನದ ಕಾರ್ಯಾಗಾರಕ್ಕೆ ಹಿಂದಿನ ದಿನ ಹಾಜರಾಗಿದ್ದ ಅನೇಕ ಶಿಕ್ಷಕರು ಮತ್ತು ಉಪನ್ಯಾಸಕರು ಗೈರುಹಾಜರಾಗಿರುವುದು ನ್ಯಾಯಾಧೀಶರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿತು. ಸರ್ಕಾರದ ಆದೇಶದಂತೆ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಆಯೋಜಿಸಿರುವ ಕಾರ್ಯಾಗಾರವನ್ನು ಕೇವಲ ಹಾಜರಾತಿಗೆ ಸೀಮಿತಗೊಳಿಸುವ ಉದ್ದೇಶವಿಲ್ಲ. ಶಿಕ್ಷಕರು ಮತ್ತು ಉಪನ್ಯಾಸಕರು ಕಾನೂನಿನ ವಿವಿಧ ಆಯಾಮಗಳನ್ನು ಸಮಗ್ರವಾಗಿ ತಿಳಿದುಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕೆಂಬ ಸದುದ್ದೇಶ ಇದರ ಹಿಂದಿದೆ. ಇಂತಹ ಕಾರ್ಯಕ್ರಮದಲ್ಲಿಯೇ ಕರ್ತವ್ಯ ನಿರ್ಲಕ್ಷ÷್ಯ ತೋರುವುದು ಸರಿಯಲ್ಲ ಎಂದು ಎಚ್ಚರಿಸಿದರು.ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಿಗೆ ಹಲವು ಜವಾಬ್ದಾರಿಗಳಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಅವರಲ್ಲಿ ಕಾನೂನು ಅರಿವು ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಬೇಕಿದೆ. ಆದರೆ, ಶಿಕ್ಷಕರೇ ಇಂತಹ ಕಾರ್ಯಾಗಾರಗಳಲ್ಲಿ ನಿರ್ಲಕ್ಷ÷್ಯ ವಹಿಸಿದರೆ ಸಮಾಜದಲ್ಲಿ ಕಾನೂನು ಅರಿವು ಮೂಡಿಸುವ ಆಶಯ ಹೇಗೆ ಈಡೇರಲಿದೆ ಎಂದು ನ್ಯಾಯಾಧೀಶರು ಬೇಸರ ವ್ಯಕ್ತಪಡಿಸಿದರು.
ಗೈರುಹಾಜರಾದ ಶಿಕ್ಷಕರಿಗೆ ನೋಟಿಸ್ ನೀಡಲು ಸೂಚನೆ:  ಎರಡು ದಿನಗಳ ಕಾರ್ಯಾಗಾರಕ್ಕೆ ಶಿಕ್ಷಣ ಇಲಾಖೆಯ ಅನುಮತಿ ಪಡೆದು ಹಾಜರಾಗುವ ಹೆಸರಿನಲ್ಲಿ ಕರ್ತವ್ಯ ನಿರ್ವಹಣೆಯಿಂದ ದೂರ ಉಳಿದು, ಕಾರ್ಯಾಗಾರದಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಭಾಗವಹಿಸದೆ ಗೈರುಹಾಜರಾದ ಶಿಕ್ಷಕರು ಮತ್ತು ಉಪನ್ಯಾಸಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನ್ಯಾಯಾಧೀಶರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಸರ್ಕಾರಿ ಆದೇಶದಡಿ ನಡೆಯುವ ತರಬೇತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಕಾಟಾಚಾರಕ್ಕೆ ಪರಿಗಣಿಸುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.ಕಾರ್ಯಾಗಾರದಲ್ಲಿ ಸಿವಿಲ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಸುಕೀತಾ ಎಸ್. ಹದ್ಲಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಹರೀಶ್ ಸಿಂಗ್ ಉಪಸ್ಥಿತರಿದ್ದರು. ಕಾನೂನು ಅರಿವು ಮೂಡಿಸಬೇಕಾದವರಿಗೇ ಶಿಸ್ತಿನ ಪಾಠ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಶಿಕ್ಷಣ ಇಲಾಖೆಯ ಕಾರ್ಯವೈಖರಿ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನ್ಯಾಯಾಧೀಶರ ಎಚ್ಚರಿಕೆಯ ಬಳಿಕವಾದರೂ ಶಿಕ್ಷಕರು ಮತ್ತು ಉಪನ್ಯಾಸಕರು ಇಂತಹ ಮಹತ್ವದ ಕಾರ್ಯಕ್ರಮಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST