LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಸಿಎಂ ಪೋಸ್ಟರ್ ಅಂಟಿಸುವ ಚಾಳಿ ಬಿಡಲಿ


ಗುಬ್ಬಿ: ಮುಖ್ಯಮಂತ್ರಿಗಳು ಪೋಸ್ಟರ್ ಅಂಟಿಸುವ ಚಾಳಿ ಬಿಟ್ಟು ರೈತ ಪರ ಕಾಳಜಿ ಇಟ್ಟುಕೊಂಡು ಯೋಜನೆ ರೂಪಿಸಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದರು.ಗುಬ್ಬಿ ತಾಲೂಕಿನ ಸಿ.ಎಸ್.ಪುರದಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಮಧ್ಯರಾತ್ರಿ ಮನೆಯ ಮುಂದೆ ಪೋಸ್ಟರ್ ಅಂಟಿಸುವುದು ಕೀಳುಮಟ್ಟದ ರಾಜಕಾರಣವಾಗಿದೆ. ದೊಡ್ಡ ಆಲಹಳ್ಳಿಯಲ್ಲಿ ಟೆಂಟ್ ನಡೆಸುತ್ತಿದ್ದ ಕಾಲದಿಂದಲೂ ಪೋಸ್ಟರ್ ಅಂಟಿಸುವ ಚಾಳಿ ಹೊಂದಿರುವವರು ಮುಖ್ಯಮಂತ್ರಿಯಾದ ಮೇಲೂ ಅದನ್ನು ಬಿಟ್ಟಿಲ್ಲ ಎಂದು ಹೆಸರು ಹೇಳದೆ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಪೋಸ್ಟರ್ ಅಂಟಿಸುವುದು, ಸಿಡಿ ಮಾಡಿಸುವುದು ಮುಖ್ಯಮಂತ್ರಿಯೊಬ್ಬರು ಮಾಡುವ ಕೆಲಸವೇ ಎಂದು ಪ್ರಶ್ನಿಸಿದರು. ಹಾಲಿ ಮುಖ್ಯಮಂತ್ರಿ  ಬಗ್ಗೆ ನನಗೆ ಯಾವುದೇ ಅಸೂಯೆ  ಇಲ್ಲ. ಅವರು ಒಳ್ಳೆಯದು ಮಾಡದಿದ್ದರೂ ಪರವಾಗಿಲ್ಲ, ಕೆಟ್ಟದ್ದನ್ನಾದರೂ ಮಾಡದಿದ್ದರೆ ಸಾಕು. ಲೂಟಿ ಮಾಡುವುದನ್ನೇ ಕೆಲಸವೆಂದು ಭಾವಿಸಿರುವ ಇಂತಹವರಿಗೆ ನಾನು ಹೇಗೆ ಸಹಕಾರ ನೀಡಲಿ ಎಂದು ಕುಮಾರಸ್ವಾಮಿ ಕಿಡಿಕಾರಿದರು. ನಿಮ್ಮ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಕೆಲಸ ಮಾಡಲು ಅವಕಾಶ ನೀಡಿ ಎಂದು ಕೆಲವರು ಹೇಳುತ್ತಾರೆ. ಆದರೆ, ಜನರ ಅಭಿವೃದ್ಧಿಗಿಂತ ಲೂಟಿಯಲ್ಲೇ ತೊಡಗಿರುವವರಿಗೆ ಹೇಗೆ ಸಹಕಾರ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.ದೇಶದ ಹಿತಾಸಕ್ತಿ ಹಾಗೂ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಕೇವಲ 11 ತಿಂಗಳಲ್ಲೇ ಪ್ರಧಾನಿ ಹುದ್ದೆಯನ್ನು ತ್ಯಜಿಸಿದ ಧೀಮಂತ ನಾಯಕ ದೇವೇಗೌಡರು. ಅವರನ್ನು ಪ್ರಧಾನಿ ಮಾಡಿದೆವು ಎಂದು ಹೇಳುವ ಕಾಂಗ್ರೆಸ್ ನಾಯಕರು ಅವರ ಸರ್ಕಾರವನ್ನು ಉರುಳಿಸಿದ್ದನ್ನೂ ನೆನಪಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ದ್ವಂದ್ವ ನಿಲುವಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಎಂದು ಟೀಕಿಸಿದರು.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡುವಾಗಲೆಲ್ಲ ಕುಮಾರಸ್ವಾಮಿ ಅವರ ಮನೆ ದೇವರೇ ಸುಳ್ಳು ಎಂದು ಹೇಳುತ್ತಾರೆ. ಆದರೆ, ಅವರ ಮನೆ ದೇವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಅಧಿಕಾರಕ್ಕೆ ಬಂದಾಗಿನಿAದ ಹೇಳುತ್ತಿರುವುದೆಲ್ಲ ಸುಳ್ಳುಗಳೇ ಎಂದು ವಾಗ್ದಾಳಿ ನಡೆಸಿದರು.ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿ ರೈತರ ಸರಣಿ ಆತ್ಮಹತ್ಯೆಗಳು ನಡೆದ ಸಂದರ್ಭದಲ್ಲಿ ರೈತರಿಗೆ ಸಾಂತ್ವನ ಹೇಳಿ, ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ನಿಮ್ಮ ಸಾಲ ತೀರಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ್ದೆ. ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರೂ ರೈತರ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ ಎಂದು ಸ್ಮರಿಸಿದರು. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಾವುದೇ ಗುತ್ತಿಗೆದಾರರಿಂದ ಪರ್ಸೆಂಟೇಜ್ ಕೇಳದೆ, ಪ್ರತಿ ತಿಂಗಳ ಮೂರನೇ ತಾರೀಖಿನಂದು ಗುತ್ತಿಗೆದಾರರ ಮನೆ ಬಾಗಿಲಿಗೆ ಬಿಲ್ ಪಾವತಿಯಾಗುವ ವ್ಯವಸ್ಥೆ ಮಾಡಿದ್ದೆ. ಆದರೆ, ಈಗ ರಾಜ್ಯ ಸರ್ಕಾರ ಸುಮಾರು 39 ಸಾವಿರ ಕೋಟಿ ಗುತ್ತಿಗೆದಾರರ ಬಾಕಿ ಉಳಿಸಿಕೊಂಡಿದೆ. ಗುತ್ತಿಗೆದಾರರು ಬೀದಿಯಲ್ಲಿ ನಿಂತು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 90 ದಿನಗಳ ಕಾಲ ಮನೆಗೆ ಹೋಗದೆ ಬಸ್ಸಿನಲ್ಲೇ ಮಲಗಿ, ಸ್ನಾನ ಮಾಡಿಕೊಂಡು ಇಡೀ ರಾಜ್ಯ ಪ್ರವಾಸ ಮಾಡಿದ್ದೆ. ಉಚಿತ ಶಿಕ್ಷಣ, ಆರೋಗ್ಯ, ರೈತರ ಬೆಳೆಗಳಿಗೆ ಸೂಕ್ತ ಬೆಲೆ, ರೈತರ ಬದುಕಿನ ಸುಧಾರಣೆ ಹಾಗೂ ಯುವಕರಿಗೆ ಉದ್ಯೋಗ ಕಲ್ಪಿಸುವ ಐದು ಪ್ರಮುಖ ಕಾರ್ಯಕ್ರಮಗಳನ್ನು ಐದು ವರ್ಷಗಳಲ್ಲಿ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದೆ. ಅವುಗಳನ್ನು ಈಡೇರಿಸದಿದ್ದರೆ ಮತ್ತೆ ಮತ ಕೇಳುವುದಿಲ್ಲ ಎಂದಿದ್ದೆ. ಆದರೆ, ಜನರು ಕೇವಲ 17 ಸ್ಥಾನಗಳನ್ನು ನೀಡಿ ಆಶೀರ್ವದಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.ಪ್ರತಿ ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಿಸುವ ಕನಸಿತ್ತು. ಆದರೆ, ಅದಕ್ಕೆ ನಿರೀಕ್ಷಿತ ಜನಬೆಂಬಲ ದೊರೆಯಲಿಲ್ಲ ಎಂದರು.ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ರಾಷ್ಟಿçÃಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಮೂಲಕ ತನ್ನ ಬದ್ಧತೆಯನ್ನು ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.  ರೈತ ಕುಟುಂಬಗಳ ಶುಭ ಸಮಾರಂಭಗಳಿಗೆ ಕಡಿಮೆ ವೆಚ್ಚದಲ್ಲಿ ಅನುಕೂಲವಾಗುವಂತೆ ಸಮುದಾಯ ಭವನ ನಿರ್ಮಿಸಲು ಸಹಕರಿಸಿದ ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಶಾಸಕ ಮಸಾಲೆ ಜಯರಾಮ್ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, ತಾಲೂಕಿನ ಜನರ ಮೇಲೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಋಣ ಅಪಾರವಾಗಿದೆ. ದೇವೇಗೌಡರು ಕಾಲುವೆ ಮೂಲಕ ನೀರು ತಂದು ನಮ್ಮ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸದಿದ್ದರೆ ಇಂದು ಈ ಪ್ರದೇಶವೂ ಬರಪೀಡಿತವಾಗುತ್ತಿತ್ತು. ನೀರಾವರಿಯಿಂದಾಗಿ ಕೃಷಿ ಮತ್ತು ಜನಜೀವನದಲ್ಲಿ ಮಹತ್ತರ ಬದಲಾವಣೆಯಾಗಿದೆ ಎಂದರು.2009ರ ಉಪಚುನಾವಣೆಯಲ್ಲಿ ತಮ್ಮ ಗೆಲುವಿಗೆ ಸಿ.ಎಸ್.ಪುರ ಭಾಗದ ಜನರ ಕೊಡುಗೆ ಅಪಾರವಾಗಿದೆ. ಅವರ ಋಣ ತೀರಿಸುವ ಉದ್ದೇಶದಿಂದ ರೈತರು ಮತ್ತು ಬಡವರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಿಸಲಾಗಿದೆ. ಸುಮಾರು 35 ಸಾವಿರ ಬಾಡಿಗೆ ನಿಗದಿಪಡಿಸಿ ಸಾರ್ವಜನಿಕರ ಶುಭ ಸಮಾರಂಭಗಳಿಗೆ ಭವನವನ್ನು ನೀಡಲು ತೀರ್ಮಾನಿಸಲಾಗಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕಡಿಮೆ ವೆಚ್ಚದಲ್ಲಿ ಸಮಾರಂಭ ಆಯೋಜಿಸಲು ಇದು ಅನುಕೂಲವಾಗಲಿದೆ ಎಂದು ತಿಳಿಸಿದರು.ಭವನದ ನಿರ್ವಹಣೆ, ಸ್ವಚ್ಛತೆ ಹಾಗೂ ಸಾರ್ವಜನಿಕ ಬಳಕೆಯ ನಿಯಮಗಳನ್ನು ಸ್ಥಳೀಯ ಸಮಿತಿ ರೂಪಿಸಲಿದೆ. ಎಲ್ಲ ವರ್ಗದ ಜನರು ಭವನದ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.ಇತ್ತೀಚೆಗೆ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ಹಾಗೂ ಜಿ.ಟಿ. ದೇವೇಗೌಡರನ್ನು ಮನೆಗೆ ಕರೆಸಿ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿದ್ದರು. ಕ್ಷೇತ್ರದ ಅಭಿವೃದ್ಧಿಗೆ 500 ಕೋಟಿ ಅನುದಾನ ನೀಡುವುದಾಗಿ ಆಮಿಷವೊಡ್ಡಿದ್ದರು. ಆದರೆ, ಸಾವಿರ ಕೋಟಿ ರೂಪಾಯಿ ನೀಡಿದರೂ ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ಹೇಳಿ ಅಲ್ಲಿಂದ ಹೊರಬಂದಿದ್ದೇನೆ ಎಂದು ಬಹಿರಂಗಪಡಿಸಿದರು. ದೇವೇಗೌಡರ ಕುಟುಂಬದೊAದಿಗಿನ ಆತ್ಮೀಯ ಸಂಬAಧವನ್ನು ಸ್ಮರಿಸಿದ ಕೃಷ್ಣಪ್ಪ, ದೇವೇಗೌಡರ ಮನೆಯ ಅನ್ನ ತಿಂದಿದ್ದೇನೆ. ತಾಯಿ ಚೆನ್ನಮ್ಮ ಅವರು ನನ್ನನ್ನು ಮನೆಯ ಮಗನಂತೆ ಪ್ರೀತಿಯಿಂದ ಕಾಣುತ್ತಿದ್ದರು. ಅವರ ಪ್ರೀತಿ ಮತ್ತು ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ರಾಜಕೀಯ ಬಿಡುತ್ತೇನೆಯೇ ಹೊರತು ಜೆಡಿಎಸ್ ಪಕ್ಷವನ್ನು ಬಿಡುವುದಿಲ್ಲ. ಜೀವ ಇರುವವರೆಗೂ ಜೆಡಿಎಸ್‌ನಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು. ಮಾಜಿ ಶಾಸಕ ಮಸಾಲೆ ಜಯರಾಮ್, ಜೆಡಿಎಸ್ ಜಿಲ್ಲಾಧ್ಯಕ್ಷ ನಿಂಗಪ್ಪ, ಮಾಜಿ ಶಾಸಕರಾದ ತಿಮ್ಮರಾಯಪ್ಪ, ಮುಖಂಡರಾದ ಬಿ.ಎಸ್. ನಾಗರಾಜು, ರವಿ, ನಾಗರಾಜಯ್ಯ, ನರಸಿಂಹಮೂರ್ತಿ  ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೋನಿಯಾಗಾಂಧಿ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ದೇಗುಲ ಪ್ರವೇಶಕ್ಕೆ ನಿಖಿಲ್ ಕುಮಾರಸ್ವಾಮಿಗೆ ನಿರಾಕರಣೆಕಬೀರಾನಂದಾಶ್ರಮ ಜಾತ್ಯತೀತ ಶ್ರದ್ಧಾಭಕ್ತಿಯ ಕೇಂದ್ರವಾಗಿ ಬೆಳಸುವಲ್ಲಿ ಶ್ರೀಗಳ ಕೊಡುಗೆ ಅಪಾರಕಬೀರಾನಂದಾಶ್ರಮ ಜಾತ್ಯತೀತ ಶ್ರದ್ಧಾಭಕ್ತಿಯ ಕೇಂದ್ರವಾಗಿ ಬೆಳಸುವಲ್ಲಿ ಶ್ರೀಗಳ ಕೊಡುಗೆ ಅಪಾರಸಿಎಂ ಪೋಸ್ಟರ್ ಅಂಟಿಸುವ ಚಾಳಿ ಬಿಡಲಿಮಕ್ಕಳನ್ನು ಹೇಗೆ ಬೆಳೆಸಬೇಕುವರ್ಷವಿಡೀ ಸುಗಮ ಸಂಗೀತ ಶತಮಾನೋತ್ಸವ ತರಬೇತಿ ಕಾರ್ಯಾಗಾರ: ಡಾ.ಕಿಕ್ಕೇರಿ ಕೃಷ್ಣಮೂರ್ತಿ ಘೋಷಣೆಅರಣ್ಯ-ರೈತರ ಮಂಜೂರಾತಿ ಭೂಮಿ ಗೊಂದಲ ನಿವಾರಣೆಗೆ ಕ್ರಮ: ಜಿಲ್ಲಾಧಿಕಾರಿ ರವಿಕುಮಾರ್ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು: 89 ರನ್‌ಗಳಿಗೆ ಆಲೌಟ್ಮೋದಿ ಅವರಿಂದ ಚಾಮರಾಜನಗರ ಅಮೃತ ರೈಲು ನಿಲ್ದಾಣ ಉದ್ಘಾಟನೆ