LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Education News

ಮಕ್ಕಳನ್ನು ಹೇಗೆ ಬೆಳೆಸಬೇಕು


ಮಕ್ಕಳು ಬಾಲ್ಯದಲ್ಲಿ ಒಂದು ಸಣ್ಣ ಗಿಡ ಹಾಗೂ ಜೇಡಿ ಮಣ್ಣಿನ ರೀತಿ,...! ಗಿಡವನ್ನು ಸಣ್ಣದರಲ್ಲಿಯೇ ಹೇಗೆ ಬೇಕಾದರೂ ಹಾಗೇ ಬೆಳೆಸಬಹುದು, ಅದೇ ರೀತಿ ಜೇಡಿ ಮಣ್ಣನ್ನು ನಮ್ಮ ಅನುಕೂಲಕ್ಕೆ  ತಕ್ಕಂತೆ ಕಲಸಿ ಅದಕ್ಕೆ ಶೇಪ್ ಕೊಡಬಹುದು, ಅದೇ ರೀತಿಯಲ್ಲಿ ಮಕ್ಕಳ ಬೆಳೆಸುವುದೂ ಕೂಡ.ಚಿಕ್ಕದಿದ್ದ ಗಿಡವನ್ನು ನೇರವಾಗಿ ಹೇಗೆ ಬೆಳೆಸಲು ಸಾಧ್ಯವಿದೆಯೋ, ಅದೇ ರೀತಿಯಲ್ಲಿ ಮಕ್ಕಳು ತಪ್ಪು ದಾರಿ ಹಿಡಿಯದಂತೆ ಒಳ್ಳೆಯ ಸೂಕ್ತ ಮಾರ್ಗದರ್ಶನ ನೀಡಿ ಬೆಳೆಸಲು ಸಾಧ್ಯ ಎಂದು ಹಲವು ಸಂಶೋಧನ ನಿದರ್ಶನಗಳು ಹೇಳಿವೆ. ಹಾಗಾಗಿ ಹಿರಿಯರ ಮಾತು ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ.. ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಂಡು.ಹದಿಹರೆಯದ ಬಾಲ್ಯದಲ್ಲಿ ಮಕ್ಕಳ ಬಗ್ಗೆ ಸೂಕ್ತ ನಿಗಾ ವಹಿಸುವುದರ ಜೊತೆಗೆ,  ಅವರನ್ನು ಬೆಳೆಸುವ ರೀತಿ ಅದೇ ಸಂದರ್ಭದಲ್ಲಿ ಸಾಧ್ಯವಿರುವುದರಿಂದ. ಆ ಸಮಯದ ಬಗ್ಗೆ ಹಾಗೂ ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ವಿಶೇಷ ಗಮನ ವಹಿಸಬೇಕಾಗುತ್ತದೆ.ಒಂದು ಪುಸ್ತಕವು ಇಡೀ ಜೀವನವನ್ನೇ  ಬದಲಿಸುತ್ತದೆ ಎಂಬ ಮಾತಿನಂತೆ “ ಮಕ್ಕಳ ಸುಸಂಸ್ಕೃತ ವ್ಯಕ್ತಿತ್ವಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಮಹಾತ್ಮರ ಹಾಗು ಉದಾತ್ತ ಚಿಂತನೆಗಳ ಪುಸ್ತಕಗಳನ್ನು ಮಕ್ಕಳಿಗೆ ಓದಿಸುವುದನ್ನು ಅಭ್ಯಾಸ ಮಾಡಿಸಬೇಕು.ವೈಜ್ಞಾನಿಕ ಮನೋಭಾವ ಬೆಳೆಸುವ ಹಾಗೂ ಒಳ್ಳೊಳ್ಳೆಯ ವಿಚಾರಗಳನ್ನು ಮಕ್ಕಳಿಗೆ ಆಗಾಗ್ಗೆ ತಿಳಿಯಪಡಿಸುತ್ತಿರಬೇಕು.ಉದಾತ್ತ ಚಿಂತನೆಗೆ ಅನುಕೂಲವಾಗುವ ನಿಟ್ಟಿನಲ್ಲಿ: ವ್ಯಕ್ತಿತ್ವ ಬೆಳವಣಿಗೆಯ ಶಿಬಿರಗಳಲ್ಲಿ ಮಕ್ಕಳು ಭಾಗವಹಿಸುವಂತೆ ಮಾಡಬೇಕು. ಬಹಳ ಮುಖ್ಯವಾಗಿ ಮಕ್ಕಳು ಸಾಮಾಜಿಕ ಜಾಲತಾಣ ಹಾಗೂ ರೀಲ್ಸ್ ಗಳ ಚಟದಿಂದ ದೂರ ಇರುವಂತೆ ನೋಡಿಕೊಳ್ಳುವುದು ಆದ್ಯ ಕರ್ತವ್ಯವಾಗಬೇಕಿದೆ. ಮಕ್ಕಳಲ್ಲಿ ಆಗುವ ದೈಹಿಕ ಬದಲಾವಣೆಗಳನ್ನು ವೈಜ್ಞಾನಿಕ ರೀತಿಯಲ್ಲಿ ತಿಳಿಯಪಡಿಸಬೇಕಿದೆ.ಸಾಮಾಜಿಕ ಪ್ರಜ್ಞೆಯುಳ್ಳ ವಿಚಾರವಂತಿಕೆ, ಪಾಲಿಸಬೇಕಾದ ನಿಯಮಗಳು, ಸಮಾಜದ ಹಿತದೃಷ್ಟಿಯಿಂದ ಯಾವುದನ್ನ ಮಾಡದಿರುವುದು, ಯಾವುದನ್ನು ಮಾಡುವುದು, ಒಳ್ಳೆಯ ವ್ಯಕ್ತಿತ್ವದ ಹಿತ ದೃಷ್ಟಿಯಿಂದ ಕೆಲವು ಒಳ್ಳೆಯ ವಿಚಾರಗಳನ್ನು ತಿಳಿಯಪಡಿಸುವುದು ಸೂಕ್ತ.
“ಮೂರು ವರ್ಷದಲ್ಲಿ ಕಲಿತದ್ದು ನೂರು ವರ್ಷದ ತನಕ”: ಎಂಬAತೆ ಚಿಕ್ಕಂದಿನಲ್ಲಿ ನಾವು ಮಕ್ಕಳನ್ನು ಯಾವ ವಾತಾವರಣದಲ್ಲಿ ಹೇಗೆ ಬೆಳೆಸುತ್ತೇವೆಯೋ ಅದೇ ವ್ಯಕ್ತಿತ್ವವೂ ರೂಪುಗೊಂಡು ಮಕ್ಕಳು ನಾವು ಬೆಳೆಸಿದ ರೀತಿಯ ವ್ಯಕ್ತಿಗಳಾಗುತ್ತಾರೆ ಎಂಬುದನ್ನು ಮರೆಯಬಾರದು.ಮಕ್ಕಳು ಮನೆಯಲ್ಲಿ ಪೋಷಕರ ಜೊತೆ ಹೆಚ್ಚು ಸಮಯ ಕಳೆಯುವುದಕ್ಕಿಂತ ಹೆಚ್ಚಾಗಿ, ಶಾಲೆಯಲ್ಲಿ ಸಹಪಾಠಿಗಳ ಜೊತೆ, ಶಿಕ್ಷಕರ ಜೊತೆ ಹೆಚ್ಚು ಸಮಯ ಕಳೆಯುವುದರಿಂದ ( ಟ್ಯೂಷನ್ ಸಮಯವನ್ನು ಸೇರಿಸಿಕೊಂಡಂತೆ ), ಶಿಕ್ಷಕರು ಬರೀ ಪಾಠದ ಬೋಧನೆಯನ್ನು ಮಾಡುವುದರ ಜೊತೆ ಜೊತೆಗೆ ಒಳ್ಳೆಯ ವ್ಯಕ್ತಿತ್ವಕ್ಕೆ ಪೂರಕವಾದ ವಿಚಾರಗಳನ್ನು ಆಗಾಗ್ಗೆ ತಿಳಿಸುತ್ತಿರಬೇಕು ಎಂಬುದನ್ನು ಶಿಕ್ಷಕರು ಮರೆಯಕೂಡದು. 
“ಬೆಲ್ ಹೊಡಿ ಸಂಬಳ ತಕೋ” ಪರೀಕ್ಷಾ ದೃಷ್ಟಿಯಿಂದ ಕೇವಲ ಪಠ್ಯವನ್ನು ಮಾತ್ರ ಬೋಧಿಸುತ್ತೇನೆ, ಅವರ ವ್ಯಕ್ತಿತ್ವದ ವಿಚಾರ ನನಗೇಕೆ ಎನ್ನುವ ಧೋರಣೆಯಿಂದ ಶಿಕ್ಷಕರು ಹಿಂದೆ ಸರಿದು “ಉತ್ತಮ ಸಮಾಜ ನಿರ್ಮಾಣಕ್ಕೆ  ಶಿಕ್ಷಕರ ಕೊಡುಗೆ ಬಹಳ ಮುಖ್ಯ ಎಂಬುದನ್ನ ಯಾವ ಶಿಕ್ಷಕರು ಮರೆಯಕೂಡದು.”  ಹಾಗಾಗಿ ಸಮಾಜದ ಹಾಗೂ ಮಕ್ಕಳಂತ ದೃಷ್ಟಿಯಿಂದ ಶಿಕ್ಷಕರ ಮನೋವೃತ್ತಿಯೂ ಕೂಡ ಬದಲಾಗಬೇಕಿದೆ.ಕೇವಲ ಪಾಠ ಮಾಡುವುದು ಮಾತ್ರವೇ ನಮ್ಮ ಕರ್ತವ್ಯ: ಎಂಬುದರ ಜೊತೆಗೆ ಮಕ್ಕಳ ವ್ಯಕ್ತಿತ್ವ ರೂಪಿಸುವುದು ನಮ್ಮ ಹೊಣೆ ಎಂಬುದನ್ನು ಪ್ರತಿಯೊಬ್ಬಶಿಕ್ಷಕರೂ ಮರೆಯಬಾರದು. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕನೇ ವಿದ್ಯಾರ್ಥಿಗಳ ಮನದಲ್ಲಿ ಕೊನೆಯವರೆಗೂ ಉಳಿಯುವನು ಎಂಬುದನ್ನು ಮರೆಯಬಾರದು.ಮಗು ಹುಟ್ಟುತ್ತಾ ವಿಶ್ವಮಾನವ ಬೆಳೆಯುತ್ತಾ ಅಲ್ಪ ಮಾನವ:  ಕುವೆಂಪುರವರು ಹೇಳಿದ ಹಾಗೆ ತಾಯಿಯ ಗರ್ಭದಿಂದ ಹುಟ್ಟುವಾಗ ಬೇದಭಾವವಿಲ್ಲದೆ ಹುಟ್ಟುವ ಮಗು, ಸಮಾಜದಲ್ಲಿ ಬೆಳೆಯುತ್ತಾ, ಸ್ವಾರ್ಥ ಹಾಗೂ ಸಂಕುಚಿತ ಮನೋಭಾವನೆಗಳನ್ನು ಸಮಾಜದಿಂದಲೇ ಕಲಿತು ತಾನು  ಬೆಳೆಸಿಕೊಳ್ಳುವುದರ ಜೊತೆಗೆ ಅಲ್ಪ ಮಾನವನಾಗುತ್ತಾನೆ. ಇದಕ್ಕೆ ಸಮಾಜವೇ ಕಾರಣ ಹೊರತು ಮಗುವಿನ ತಪ್ಪಲ್ಲ. ಸಮಾಜದಲ್ಲಿ ತಾನು ಕಲಿತ ಅನುಭವವನ್ನೇ ಮಗು ತನ್ನ ದಿನನಿತ್ಯದಲ್ಲಿ ಕಲಿತದನ್ನ ಜೀವನದ ವ್ಯಕ್ತಿತ್ವದ ಒಂದು ಭಾಗವಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಹಾಗಾಗಿ ಕುವೆಂಪುರವರ ಆಶಯದಂತೆ ವಿಶ್ವ ಮಾನವರಾಗಿ ಹುಟ್ಟಿದ ಮಕ್ಕಳನ್ನು ವಿಶ್ವಮಾನವರನ್ನಾಗಿಯೇ ಬೆಳೆಸುವುದು ಸಮಾಜದ ಆದ್ಯ ಕರ್ತವ್ಯವಾಗಬೇಕಿದೆ.
-ಡಾ.ಸತ್ಯಮೂರ್ತಿ ಗೂಗಿ, ಚಿಂತಕರು, ಬೆಂಗಳೂರು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೋನಿಯಾಗಾಂಧಿ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ದೇಗುಲ ಪ್ರವೇಶಕ್ಕೆ ನಿಖಿಲ್ ಕುಮಾರಸ್ವಾಮಿಗೆ ನಿರಾಕರಣೆಕಬೀರಾನಂದಾಶ್ರಮ ಜಾತ್ಯತೀತ ಶ್ರದ್ಧಾಭಕ್ತಿಯ ಕೇಂದ್ರವಾಗಿ ಬೆಳಸುವಲ್ಲಿ ಶ್ರೀಗಳ ಕೊಡುಗೆ ಅಪಾರಕಬೀರಾನಂದಾಶ್ರಮ ಜಾತ್ಯತೀತ ಶ್ರದ್ಧಾಭಕ್ತಿಯ ಕೇಂದ್ರವಾಗಿ ಬೆಳಸುವಲ್ಲಿ ಶ್ರೀಗಳ ಕೊಡುಗೆ ಅಪಾರಸಿಎಂ ಪೋಸ್ಟರ್ ಅಂಟಿಸುವ ಚಾಳಿ ಬಿಡಲಿಮಕ್ಕಳನ್ನು ಹೇಗೆ ಬೆಳೆಸಬೇಕುವರ್ಷವಿಡೀ ಸುಗಮ ಸಂಗೀತ ಶತಮಾನೋತ್ಸವ ತರಬೇತಿ ಕಾರ್ಯಾಗಾರ: ಡಾ.ಕಿಕ್ಕೇರಿ ಕೃಷ್ಣಮೂರ್ತಿ ಘೋಷಣೆಅರಣ್ಯ-ರೈತರ ಮಂಜೂರಾತಿ ಭೂಮಿ ಗೊಂದಲ ನಿವಾರಣೆಗೆ ಕ್ರಮ: ಜಿಲ್ಲಾಧಿಕಾರಿ ರವಿಕುಮಾರ್ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು: 89 ರನ್‌ಗಳಿಗೆ ಆಲೌಟ್ಮೋದಿ ಅವರಿಂದ ಚಾಮರಾಜನಗರ ಅಮೃತ ರೈಲು ನಿಲ್ದಾಣ ಉದ್ಘಾಟನೆ