LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Education News

ಎದ್ದೇಳಿ ಮಕ್ಕಳೇ.., ಕರೆಯುತ್ತಿದೆ ಶಾಲೆ...!

"ಆಹಾ! ಅದೆಂತಹ ಖುಷಿ, ಅದೆಂತಹ ದಿನ ಇದ್ದರೆ ಹೀಗೆ ಇರಬೇಕು ಪ್ರತಿದಿನ" ಎನ್ನುತ್ತಿದ್ದಾರೆ ಮಕ್ಕಳು. ಏಕೆಂದರೆ ಮಕ್ಕಳು ಬೇಸಿಗೆಯ ರಜೆಯಲ್ಲಿ ಪುಸ್ತಕ, ಶಾಲೆ, ಪಾಠ ಮತ್ತು ಪರೀಕ್ಷೆ ಇವುಗಳಿಂದ ದೂರವಿದ್ದಾರೆ. ಕುಟುಂಬದ ಜೊತೆ ಪ್ರವಾಸ ಮಾಡುತ್ತಾ, ಮನೆಯಲ್ಲಿ ಮೋಜು ಮಸ್ತಿ ಮಾಡುತ್ತಾ ಹಾಗೂ ಸ್ನೇಹಿತರ ಜೊತೆ ಆಟವಾಡುತ್ತಾ ಒಂದೊAದು ಕ್ಷಣವನ್ನು ಸಂತಸದಿAದ ಕಳೆಯುತ್ತಿದ್ದಾರೆ. ಆದರೆ ವರ್ಷಪೂರ್ತಿ ರಜೆಯಲ್ಲಿಯೇ ಕಾಲ ಕಳೆದರೆ ಆದೀತೇ. ಜೂನ್ ತಿಂಗಳು ಹತ್ತಿರ ಬರುತ್ತಿದ್ದಂತೆಯೇ ಮಕ್ಕಳೆಲ್ಲರೂ ಶಾಲೆಯ ಕಡೆಗೆ ನಡೆಯಲೇಬೇಕು ಅಲ್ಲವೇ... ಸಾಮಾನ್ಯವಾಗಿ ರಜೆಯಲ್ಲಿ ಮಕ್ಕಳು ಬೆಳಗಿನ ಜಾವ ಬೇಗ ಎದ್ದೇಳುವುದಿಲ್ಲ. ಹಾಗೆಯೇ ರಾತ್ರಿ ಬೇಗ ಮಲಗುವುದು ಇಲ್ಲ. ಆದರೆ ಶಾಲೆ ಪ್ರಾರಂಭವಾಗುತ್ತಿದ್ದAತೆ ಇಂತಹ ಅಭ್ಯಾಸಗಳನ್ನ ಬದಲಾಯಿಸಿಕೊಳ್ಳಲೇಬೇಕಾಗಿದೆ. ಇಲ್ಲವಾದರೆ ಶಾಲೆಗೆ ತಡವಾಗಿ ಹೋಗುವುದು, ತರಗತಿಯಲ್ಲಿ ನಿದ್ದೆ ಮಾಡುವುದು ಮತ್ತು ಓದಿನ ಕಡೆ ಗಮನ ಹರಿಸದೆ ಇರುವಂತಹ ಪರಿಸ್ಥಿತಿ ತಲೆದೋರಬಹುದು. ರಜೆಯಲ್ಲಿ ಮೊಬೈಲ್, ಟಿವಿ ಮತ್ತು ವಿಡಿಯೋ ಗೇಮ್ ಗಳ ಚಟಕ್ಕೆ ಬಿದ್ದಂತಹ ಮಕ್ಕಳು ಇನ್ನು ಮುಂದೆ ಎಚ್ಚೆತ್ತುಕೊಳ್ಳಬೇಕಾಗಿದೆ.ಮಕ್ಕಳು ಶಾಲೆ ಪ್ರಾರಂಭದ ದಿನಾಂಕ, ಸಮವಸ್ತ್ರ ಮತ್ತು ಪುಸ್ತಕಗಳು ಇವುಗಳ ಕಡೆಗೆ ಗಮನ ನೀಡಿ ಶಾಲೆಯ ಪ್ರಾರಂಭಕ್ಕೂ ಮುನ್ನ ಸಿದ್ಧರಾಗಬೇಕು. ಮಕ್ಕಳು ಶಾಲೆಗೆ ಕೇವಲ ದೈಹಿಕವಾಗಿ ಸಿದ್ಧರಾಗಿ ಬಂದರೆ ಸಾಲದು. ಕೆಲವೊಂದು ಸಾರಿ ಮಕ್ಕಳು ತರಗತಿಯಲ್ಲಿಯೇ ಇರುತ್ತಾರೆ, ಆದರೆ ಅವರ ಮನಸ್ಸು ಮಾತ್ರ ಈಗಲೂ ಸ್ನೇಹಿತರ ಜೊತೆ ಆಟವಾಡುತ್ತಾ ಅಥವಾ ಕುಟುಂಬದವರ ಜೊತೆ ಸುತ್ತಾಡುತ್ತಾ ಇರುತ್ತದೆ. ಆದ್ದರಿಂದ ಮಕ್ಕಳು ದೈಹಿಕವಾಗಿ ಸಿದ್ಧವಾಗುವುದರ ಜೊತೆ ಮಾನಸಿಕವಾಗಿಯೂ ಸಿದ್ಧರಾಗಬೇಕು. ತರಗತಿಯಲ್ಲಿ ಏಕಾಗ್ರತೆ ವಹಿಸಲು ತಯಾರಾಗಬೇಕು. ಮುಂದಿನ ಶೈಕ್ಷಣಿಕ ವರ್ಷದ ಕಡೆಗೆ ಗಮನವಿಟ್ಟು ನಡೆದುಕೊಳ್ಳಬೇಕು. ಬನ್ನಿ ಮಕ್ಕಳೇ ಬನ್ನಿ, ಮಕ್ಕಳಿಲ್ಲದ ಶಾಲೆ ಯಾವತ್ತು ಶಾಲೆ ಎನಿಸಿಕೊಳ್ಳುವುದಿಲ್ಲ. ಬೇಸಿಗೆಯಲ್ಲಿ ಮಕ್ಕಳಿಲ್ಲದೆ ಮರುಗುತ್ತಿರುವ ಶಾಲೆ ಕರೆಯುತ್ತಿದೆ ನಿಮ್ಮನ್ನು. ಬನ್ನಿ ಮಕ್ಕಳೆ ಬನ್ನಿ ಶಾಲೆಗೆ, ಸಿದ್ಧರಾಗಿ ಬನ್ನಿ ಮುಂದಿನ ಶೈಕ್ಷಣಿಕ ವರ್ಷಕ್ಕೆ.
- ಯತೀಶ್ವರ ಆರ್ ಗಂಗವಾಡಿ
ಮಂಡ್ಯ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು