ಬೆಂಗಳೂರು: ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಹಾಗೂ 2026ರ ಏಷ್ಯನ್ ಗೇಮ್ಸ್ ಪಂದ್ಯಾವಳಿಗೆ ಆಯ್ಕೆ ಮಾಡಲಾಗಿರುವ ಭಾರತ ಕ್ರಿಕೆಟ್ ತಂಡದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಗಾಯದಿಂದ ಗುಣಮುಖರಾಗಿ ತಂಡಕ್ಕೆ ಆಯ್ಕೆಯಾಗಿದ್ದ ಮಧ್ಯಮ ವೇಗಿ ಹರ್ಷಿತ್ ರಾಣಾ ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಎರಡೂ ಪ್ರಮುಖ ಸರಣಿಗಳಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಅವರ ಬದಲಿಗೆ ವಿದರ್ಭದ ವೇಗಿ ಯಶ್ ಠಾಕೂರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಸ್ಟಾರ್ ವೇಗಿ ಜಸ್ಟ್ರಿತ್ ಬೂಮ್ರಾ ಸಂಪೂರ್ಣ ಫಿಟ್ ಆಗಿ ತಂಡಕ್ಕೆ ಮರಳಿರುವುದು ತಂಡದ ಬೌಲಿಂಗ್ ವಿಭಾಗಕ್ಕೆ ದೊಡ್ಡ ಬಲ ತಂದಿದೆ. 2026ರ ಟಿ20 ವಿಶ್ವಕಪ್‌ಗೆ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮೊಣಕಾಲಿನ ಗಾಯಕ್ಕೂ ತುತ್ತಾಗಿ ಇಡೀ ವಿಶ್ವಕಪ್ ಹಾಗೂ ಐಪಿಎಲ್ ಸರಣಿಯಿಂದ ವಂಚಿತರಾಗಿದ್ದರು. ಸುದೀರ್ಘ ಚಿಕಿತ್ಸೆಯ ನಂತರ ಜೂನ್‌ನಲ್ಲಿ ಅಫ್ಗಾನಿಸ್ತಾನ್ ವಿರುದ್ಧದ ಏಕದಿನ ಪಂದ್ಯಕ್ಕೆ ಮರಳಿದ್ದ ರಾಣಾಗೆ ಮತ್ತೆ ಗಾಯದ ದುರಾದೃಷ್ಟ ಎದುರಾಗಿದೆ. ಇದೀಗ ಗಾಯಕ್ಕೀಡಾಗಿ ತಂಡದಿಂದ ಹೊರಗಿರುವ ಹಾರ್ದಿಕ್ ಪಾಂಡ್ಯ ಅವರ ಸಾಲಿಗೆ ಹರ್ಷಿತ್ ರಾಣಾ ಅವರೂ ಸೇರಿದ್ದಾರೆ.ಯಶ್ ಠಾಕೂರ್‌ಗೆ ಅವಕಾಶ: ಹರ್ಷಿತ್ ರಾಣಾ ಅವರ ಅಲಭ್ಯತೆಯಿಂದ ತೆರವಾದ ಸ್ಥಾನಕ್ಕೆ ವಿದರ್ಭದ 27 ವರ್ಷದ ಯಶ್ ಠಾಕೂರ್ ಅವರನ್ನು ಆಯ್ಕೆಗಾರರು ಸೇರ್ಪಡೆಗೊಳಿಸಿದ್ದಾರೆ. ಕಳೆದ ಜುಲೈನಲ್ಲಿ ನಡೆದ ಜಿಂಬಾಬ್ವೆ ಪ್ರವಾಸದ ಮೂಲಕ ಅಂತಾರಾಷ್ಟ್ರೀಯ ಟಿ20 ಪದಾರ್ಪಣೆ ಮಾಡಿದ್ದ ಯಶ್ ಠಾಕೂರ್, ಆಡಿದ ಎರಡು ಪಂದ್ಯಗಳಲ್ಲಿ 4 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದಿದ್ದರು. ಜಸ್ಟ್ರಿ ತ್ ಬುಮ್ರಾ ಸಂಪೂರ್ಣ ಫಿಟ್: ಮತ್ತೊಂದೆಡೆ, ಭಾರತ ತಂಡದ ಬೌಲಿಂಗ್ ಆಧಾರಸ್ತಂಭ ಜಸ್‌ಪ್ರೀತ್ ಬೂಮ್ರಾ ಸಂಪೂರ್ಣ ಫಿಟ್ ಆಗಿ ಮರಳಿರುವುದು ವೇಗದ ಬೌಲಿಂಗ್ ವಿಭಾಗಕ್ಕೆ ಆನೆಬಲ ತಂದಿದೆ. ಬೂಮ್ರಾ ಜೊತೆಗೆ ಅರ್ಷದೀಪ್ ಸಿಂಗ್ ಹಾಗೂ ಹೊಸದಾಗಿ ಸೇರ್ಪಡೆಯಾಗಿರುವ ಯಶ್ ಠಾಕೂರ್ ವೇಗದ ದಾಳಿಯನ್ನು ಸಂಘಟಿಸಲಿದ್ದಾರೆ. ಈ ಎರಡೂ ಸರಣಿಗಳಲ್ಲಿ ಶ್ರೇಯಸ್ ಅಯ್ಯರ್ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದು, ತಿಲಕ್ ವರ್ಮಾ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.