ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಮೆಜೆಸ್ಟಿಕ್) ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಖಾಲಿ ರೈಲು ಬೋಗಿಗೆ ಬೆಂಕಿ ತಗುಲಿದ ಪ್ರಕರಣಕ್ಕೆ ಸಂಬAಧ ಹೊರರಾಜ್ಯದ ಆರೋಪಿಯನ್ನು ಸಿಟಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.ಮಹಾರಾಷ್ಟçದ ನಾಶಿಕ್ ಜಿಲ್ಲೆಯ ರವಿ ಗೋರಖ್ ತಿರ್ವ ಬಂಧಿತ ಆರೋಪಿಯಾಗಿದ್ದು, ಗಾಂಜಾ ನಶೆಯಲ್ಲಿ ಆರೋಪಿಯು ಕೃತ್ಯ ಎಸಗಿರುವುದನ್ನು ತಪ್ಪೊಪ್ಪಿ ಕೊಂಡಿದ್ದಾನೆ. ಕಳೆದ ಸೆ.6ರಂದು ಮೆಜೆಸ್ಟಿಕ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ 1ರಲ್ಲಿ ನಿಲ್ಲಿಸಿದ್ದ ರೈಲಿನ ಖಾಲಿ ಬೋಗಿಗೆ ರಾತ್ರಿ ಸುಮಾರು 11:30ರ ವೇಳೆ ಬೆಂಕಿ ಬಿದ್ದಿತ್ತು ,ಈ ಸಂಬಂಧ ದಾಖಲಿಸಿದ ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಅವಘಡದ ಹಿಂದಿನ ರಹಸ್ಯ ಭೇದಿಸಿದ್ದಾರೆ.ಮಲಗಲು ಖಾಲಿ ಬೋಗಿಗೆ ಹೋಗಿದ್ದ ಆರೋಪಿಯು ಗಾಂಜಾ ನಶೆಯಲ್ಲಿ ಸಿಗರೇಟ್ ಸೇದಿ ರೈಲಿನ ಬೋಗಿಯಲ್ಲಿ ಬಿಸಾಡಿದ್ದಾನೆ.