LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಎಡವಿದ ಪಾಕಿಸ್ತಾನ; ಏಷ್ಯಾಕಪ್ ಫೈನಲ್‌ಗೇರಿದ ಶ್ರೀಲಂಕಾ


ಬೈ: 2026ರ ಮಹಿಳಾ ಏಷ್ಯಾಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆಯಿತು. ದುಬೈನ ದುಬೈ ಅಂತರರಾಷ್ಟಿçÃಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ ನಾಯಕಿ ಚಾಮರಿ ಅಥಪತ್ತು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 130 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ರೋಚಕ ಜಯ ಸಾಧಿಸುವ ಮೂಲಕ ಸತತ ಎರಡನೇ ಬಾರಿಗೆ ಫೈನಲ್‌ಗೇರಿತು. ಇತ್ತ ಪಾಕಿಸ್ತಾನ ಗೆಲುವಿನಂಚಿನಲ್ಲಿ ಎಡವಿ ಫೈನಲ್ ರೇಸ್‌ನಿಂದ ಹೊರಬಿದ್ದಿತು. ಇದೀಗ ಫೈನಲ್‌ನಲ್ಲಿ ಭಾರತ ಹಾಗೂ ಶ್ರೀಲಂಕಾ ಮುಖಾಮುಖಿಯಾಗಲಿದ್ದು, ಕಳೆದ ಬಾರಿಯ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಿದ್ಧವಾಗಿದೆ.ಪಾಕಿಸ್ತಾನಕ್ಕೆ ಕಳಪೆ ಆರಂಭ: ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕಳಪೆ ಆರಂಭ ಪಡೆಯಿತು. ಸ್ಟಾರ್ ಓಪನರ್ ಮುನೀಬಾ ಅಲಿ ಕೇವಲ 5 ರನ್‌ಗಳಿಗೆ ಔಟಾದರು. ನಂತರ 29 ರನ್‌ಗಳಿಗೆ 2 ವಿಕೆಟ್ ಮತ್ತು 37 ರನ್‌ಗಳಿಗೆ 3 ವಿಕೆಟ್ ಪತನಗೊಂಡವು. ಶಾವಲ್ ಜುಲ್ಫಿಕರ್ 24 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆಯೇಷಾ ಜಾಫರ್ ಕೂಡ ಕೇವಲ 7 ರನ್‌ಗಳ ಕೊಡುಗೆ ನೀಡಲಷ್ಟೇ ಶಕ್ತರಾದರು. ಹೀಗಾಗಿ ತಂಡವು 52 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಬಂದ ನಾಯಕಿ ಫಾತಿಮಾ ಸನಾ ತಂಡದ ಇನ್ನಿಂಗ್ಸ್ ಸ್ಥಿರಗೊಳಿಸಿದರು.ಫಾತಿಮಾ ಸನಾ ಏಕಾಂಗಿ ಹೋರಾಟ: ಫಾತಿಮಾ ಐದನೇ ವಿಕೆಟ್‌ಗೆ ಗುಲ್ ಫಿರೋಜಾ ಅವರೊಂದಿಗೆ 40 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊAಡರು. ಗುಲ್ ಫಿರೋಜಾ 32 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. ಆದರೆ ನಾಯಕಿ ಸನಾ ಕೊನೆಯವರೆಗೂ ಆಟ ಮುಂದುವರಿಸಿ ತಂಡವನ್ನು ಉತ್ತಮ ಮತ್ತು ಸವಾಲಿನ ಮೊತ್ತಕ್ಕೆ ಕೊಂಡೊಯ್ದರು. ಅವರಿಗೆ ಆಲ್‌ರೌಂಡರ್ ತುಬಾ ಹಸನ್ ಬೆಂಬಲ ನೀಡಿದರು. ಫಾತಿಮಾ ಸನಾ 36 ಎಸೆತಗಳಲ್ಲಿ ಅಜೇಯ 47 ರನ್ ಗಳಿಸಿದರೆ, ಹಸನ್ 10 ಎಸೆತಗಳಲ್ಲಿ ಅಜೇಯ 12 ರನ್ ಗಳಿಸಿದರು. ಶ್ರೀಲಂಕಾ ಪರ ಚಾಮರಿ ಅಟಪಟ್ಟು ಮತ್ತು ಚಾಮುದಿ ಪ್ರಬೋಧ ತಲಾ ಎರಡು ವಿಕೆಟ್ ಪಡೆದರೆ, ಸುಗಂದಿಕಾ ಕುಮಾರಿ ಒಂದು ವಿಕೆಟ್ ಪಡೆದರು.ಶ್ರೀಲಂಕಾಕ್ಕೂ ಆರಂಭ ಉತ್ತಮವಾಗಿರಲಿಲ್ಲ: ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಮೊತ್ತ 6 ರನ್ ಆಗುವಷ್ಟರಲ್ಲಿ ನಾಯಕಿ ಚಮರಿ ಅಟಾಪಟು ಕೇವಲ 5 ರನ್‌ಗಳಿಗೆ ವಿಕೆಟ್ ಒಪ್ಪಿಸಿದರೆ, ಆ ಬಳಿಕ ಬಂದ ಸಂಜನಾ ಕವಿಂದಿ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್‌ಗೆ ಬಲಿಯಾದರು. ಈ ಎರಡು ವಿಕೆಟ್‌ಗಳನ್ನು ಪಾಕ್ ನಾಯಕಿ ಫಾತಿಮಾ ಸನಾ ಉರುಳಿಸಿದರು. ಅಲ್ಲದೆ ತಂಡದ ಪ್ರಮುಖ 4 ವಿಕೆಟ್‌ಗಳು 33 ರನ್‌ಗಳಿಗೆ ಉರುಳಿದವು.ಕೊನೆಯಲ್ಲಿ ಎಡವಿದ ಪಾಕಿಸ್ತಾನ: ಆದರೆ ಆ ಬಳಿಕ ಜೊತೆಯಾದ ಹರ್ಷಿತಾ ಸಮರವಿಕ್ರಮ ಮತ್ತು ಕವಿಶಾ ದಿಲ್ಹಾರಿ ಅರ್ಧಶತಕದ ಜೊತೆಯಾಟವನ್ನಾಡುವ ಮೂಲಕ ತಂಡವನ್ನು ಶತಕದ ಗಡಿ ದಾಟಿಸಿದರು. ಹಾಗೆಯೇ ತಂಡವನ್ನು ಗೆಲುವಿನ ಸಮೀಪಕ್ಕೆ ಕರೆದೊಯ್ದರು. ಆದರೆ ಪಾಕ್ ನಾಯಕಿ ಸನಾ ಮಾಡಿದ 17ನೇ ಓವರ್‌ನಲ್ಲಿ ಇವರಿಬ್ಬರನ್ನು ಔಟ್ ಮಾಡುವ ಮೂಲಕ ಲಂಕಾ ತಂಡಕ್ಕೆ ಆಘಾತ ನೀಡಿದರು. ಸಮರವಿಕ್ರಮ 36 ರನ್‌ಗಳಿಗೆ ಔಟಾದರೆ, ಕವಿಶಾ 33 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಕೊನೆಯಲ್ಲಿ ನಿಲಾಕ್ಷಿ ಡಿ ಸಿಲ್ವಾ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST