ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಐದು ಮ್ಯಾಚ್‌ಗಳ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದರೆ, ಕೊನೆಯ ಎರಡು ಮ್ಯಾಚ್‌ಗಳಲ್ಲಿ ಕಿವೀಸ್ ಪಡೆ ಜಯಭೇರಿ ಬಾರಿಸಿದೆ. ಈ ಎರಡು ಗೆಲುವುಗಳೊಂದಿಗೆ ನ್ಯೂಝಿಲೆಂಡ್ ತಂಡ ಟೀಮ್ ಇಂಡಿಯಾದ 17 ವರ್ಷಗಳ ದಾಖಲೆಗೆ ಬ್ರೇಕ್ ಹಾಕಿದೆ.
ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ 3-2 ಅಂತರದಿಂದ ಗೆದ್ದುಕೊಂಡಿದೆ. ಆದರೆ, ಈ ಸರಣಿ ಗೆಲುವಿನ ಹೊರತಾಗಿಯೂ ಭಾರತ ತಂಡದ 17 ವರ್ಷಗಳ ಹಳೆಯ ಅಜೇಯ ದಾಖಲೆಯೊಂದು ಪತನಗೊಂಡಿದೆ. ಸರಣಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದು ಟ್ರೋಫಿ ವಶಪಡಿಸಿಕೊಂಡಿದ್ದ ಟೀಮ್ ಇಂಡಿಯಾ, ಆ ಬಳಿಕ ನಡೆದ ಕೊನೆಯ ಎರಡು ಪಂದ್ಯಗಳಲ್ಲಿ ಸತತವಾಗಿ ಸೋಲನುಭವಿಸಿದೆ.ದ್ವಿಪಕ್ಷೀಯ ಟಿ20 ಸರಣಿಯೊಂದರಲ್ಲಿ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಸೋತಿರಲಿಲ್ಲ. ಕೊನೆಯ ಬಾರಿಗೆ ಇಂತಹದ್ದೊAದು ಘಟನೆ ನಡೆದಿದ್ದು ಬರೋಬ್ಬರಿ 17 ವರ್ಷಗಳ ಹಿಂದೆ, ಅಂದರೆ 2009ರ ಫೆಬ್ರವರಿಯಲ್ಲಿ. ಅಂದು ನ್ಯೂಝಿಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ತಂಡ ಕ್ರೆöÊಸ್ಟ್ಚರ್ಚ್ ಮತ್ತು ವೆಲ್ಲಿಂಗ್ಟನ್‌ನಲ್ಲಿ ನಡೆದಿದ್ದ ಸತತ ಎರಡು ಪಂದ್ಯಗಳಲ್ಲಿ ಸೋಲೊಪ್ಪಿಕೊಂಡಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಕೀವಿಸ್ ಪಡೆ ಭಾರತಕ್ಕೆ ಇಂತಹದ್ದೊAದು ಶಾಕ್ ನೀಡಿದೆ. ಅಂದರೆ, ಹದಿನೇಳು ವರ್ಷಗಳ ಹಿಂದೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ ಸತತ ಎರಡು ಟಿ20 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಅದಾದ ಬಳಿಕ ದ್ವಿಪಕ್ಷೀಯ ಸರಣಿಯೊಂದರಲ್ಲಿ ಕಿವೀಸ್ ಪಡೆ ವಿರುದ್ಧ ಭಾರತ ಒಮ್ಮೆಯೂ ಬ್ಯಾಕ್-ಟು-ಬ್ಯಾಕ್ ಪಂದ್ಯಗಳಲ್ಲಿ ಸೋತಿರಲಿಲ್ಲ. ಆದರೆ ಈ ಬಾರಿ ಶ್ರೇಯಸ್ ಅಯ್ಯರ್ ಮುಂದಾಳತ್ವದ ಭಾರತ ತಂಡ, ಸರಣಿ ಗೆದ್ದ ಹೊರತಾಗಿಯೂ ಕೊನೆಯ ಎರಡು ಪಂದ್ಯಗಳಲ್ಲಿ ಮುಗ್ಗರಿಸುವ ಮೂಲಕ ಈ ಐತಿಹಾಸಿಕ ದಾಖಲೆಯನ್ನು ಕೈಚೆಲ್ಲಿದೆ.