LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban | Politics News

ಸಿದ್ದರಾಮಯ್ಯ ನಿಲುವಿನತ್ತ ಎಲ್ಲರ ಚಿತ್ತ


ಬೆಂಗಳೂರು: ಸತತವಾಗಿ 20 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ವಿಧಾನಸಭೆಯಲ್ಲಿ ವಿಪಕ್ಷನಾಯಕನಾಗಿ ಅಧಿಕಾರ ನಡೆಸಿದ ಹಿರಿಯ ನಾಯಕ ಸಿದ್ದರಾಮಯ್ಯ ಅವರ ಮುಂದಿನ ರಾಜಕೀಯ ನಡೆ ಏನು ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ.ಈಗಾಗಲೇ ಸಿದ್ದರಾಮಯ್ಯ ಅವರು ಎಐಸಿಸಿ ಪ್ರಮುಖರ ಅದರಲ್ಲೂ ರಾಹುಲ್ ಗಾಂಧಿ ಅವರ ಸೂಚನೆಯಂತೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಇದೀಗ ಯಾವುದೇ ರಾಜಕೀಯ ಸ್ಥಾನಮಾನವಿಲ್ಲದೆ ಕಾಂಗ್ರೆಸ್‌ನ ವರ್ಕಿಂಗ್ ಕಮಿಟಿ ಸದಸ್ಯರಾಗಿದ್ದಾರೆ. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಶಾಸಕರಾದಾಗಲಿಂದ ಇದುವರೆಗೂ ಒಂದಲ್ಲ ಒಂದು ಹುದ್ದೆ ನಿರ್ವಹಿಸುತ್ತ ಬಂದಿದ್ದಾರೆ. 99ರಿಂದ 2004ರವರೆಗೆ ರಾಜಕೀಯವಾಗಿ ಯಾವುದೇ ಹುದ್ದೆಯಲ್ಲಿರದೇ ಜನತಾದಳದ ನಾಯಕನಾಗಿ ಅಷ್ಟೇ ಉಳಿದಿದ್ದರು. 2006ರ ವೇಳೆಗೆ ಅಂದಿನ ಜನತಾದಳ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಪಕ್ಷದಲ್ಲಿ ನಡೆದ ವಿದ್ಯಮಾನಗಳಿಂದ ಬೇಸತ್ತು ಹೊರಬಂದು ಅಹಿಂದ ಸಂಘಟನೆಯನ್ನು ಅಸ್ಥಿತ್ವಕ್ಕೆ ತಂದರು. ಅವರ ಸೇರಿಕೊಂಡ ಅಖಿಲ ಭಾರತೀಯ ಜನತಾದಳ ಸಹ ನಡೆದ ಚುನಾವಣೆಯಲ್ಲಿ ಹಿನ್ನೆ ಸಾಧಿಸಿದ ನಂತರ ಚುನಾವಣೆಕಗೆ ಸ್ವತಃ ಸೋನಿಯಾಗಾಂಧಿ ಅವರೇ ಬೆಂಗಳೂರಿಗೆ ಬಂದು ಬೃಹತ್ ಸಮಾವೇಶ ನಡೆಸಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಅದಾದ ನಂತರ ವಿಧಾನಸಭೆ ವಿಪಕ್ಷ ನಾಯಕರಾಗಿ, 0213ರಲ್ಲಿ ಮುಖ್ಯಮಂತ್ರಿಯಾಗಿ ಅನಂತರ ಮತ್ತೆ ವಿಪಕ್ಷ ನಾಯಕರಾಗಿದ್ದರು. ಒಟ್ಟಾರ ಸುದೀರ್ಘ 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅವರು ರಾಜ್ಯದಲ್ಲಿ ದೇವರಾಜು ಹರಸು ನಂತರ ಹೆಚ್ಚು ದಿನಗಳ ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂತಹ ಸಿದ್ದರಾಮಯ್ಯ ಇವಾಗ ಯಾವುದೇ ಅಧಿಕಾರ ಹೊಂದಿಲ್ಲ. ಅವರ ಮಗ ಯತೀಂದ್ರ ಸಿದ್ದರಾಮಯ್ಯ ಮಂತ್ರಿಯಾಗಿದ್ದಾರೆ. ನಿನ್ನೆ ದಿಢೀರ್ ಎಂದು ದೆಹಲಿಗೆ ಭೇಟಿ ನೀಡಿದ್ದ ಅವರು, ಪಕ್ಷದ ಪ್ರಮುಖ ರಾಹುಲ ಗಾಂಧಿ ಅವರೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ವಿವರ ಏನು ಎಂಬುದು ತಿಳಿದುಬಂದಿದೆ. ಅವರು ರಾಜ್ಯದಲ್ಲೂ ಸಹ ಸಂಪುಟದಲ್ಲಾಗಲೀ ಮತ್ತಿತರ ಯಾವುದೇ ಸ್ಥಾನಮಾನವ ಸಹ ಅವರಿಗಲ್ಲ. ಮುಂದಿನ ದಿನಗಳಲ್ಲಿ ಅವರು ರಾಜಕೀಯವಾಗಿ ಯಾವ ನಿಲುವು ತಳೆಯುತ್ತಾರೆ ಎಂಬುದು ಕಾದು ನೋಡಬೇಕಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST