LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಹನೂರಿನಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ


ಹನೂರು: ಭೌಗೋಳಿಕ ಪ್ರದೇಶಕ್ಕಿಂತ ಅರಣ್ಯ ಪ್ರದೇಶವೇ ಹೆಚ್ಚಿರುವ ಜಿಲ್ಲೆ ಚಾಮರಾಜನಗರ. ಜಿಲ್ಲೆಯ ಶೇ. 51 ರಷ್ಟು ಪ್ರದೇಶ ಅರಣ್ಯವೇ ಇದೆ ಹಾಗಾಗಿ ಇಲ್ಲಿ ಅರಣ್ಯ ಇಲಾಖೆಯ ಪಾತ್ರ ತುಂಬಾ ಮುಖ್ಯವಾಗುತ್ತದೆ ಎಂದು ಸಿಸಿಎಫ್ ಮಾಲತಿ ಪ್ರಿಯಾ ತಿಳಿಸಿದರು.ತಾಲ್ಲೂಕಿನ ಕಾವೇರಿ ವನ್ಯಜೀವಿ ವ್ಯಾಪ್ತಿಯ ಗೋಪಿನಾಥಂ ಯರಿಕೆಯಂ ನಲ್ಲಿ ವೀರಪ್ಪನ್ ಗುಂಡಿಗೆ ಬಲಿಯಾದ ದಿ ಶ್ರೀನಿವಾಸ್ ಅವರ ಸ್ಮಾರಕ ಬಳಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಾಚರ್ ನಿಂದ ಹಿಡಿದು, ಫಾರೆಸ್ಟ್ ಗಾರ್ಡ್, ಆರ್‌ಎಫ್‌ಒ, ಎಸಿಎಫ್, ಡಿಸಿಎಫ್, ಎಪಿಸಿಸಿಎಫ್ ವರೆಗೆ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.ನಮ್ಮ ಸಿಬ್ಬಂದಿಯ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದಲೇ ಇಂದು ಕರ್ನಾಟಕ ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ, ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನ ಮತ್ತು ಚಿರತೆಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದು ನಮಗೆ ಹೆಮ್ಮೆಯ ವಿಷಯ. ಇಲ್ಲಿರುವ ಎಲ್ಲಾ ಅರಣ್ಯ ಅಧಿಕಾರಿ, ಸಿಬ್ಬಂದಿಗೆ ನಾನು ಹೃದಯಪೂರ್ವಕವಾಗಿ ವಂದನೆ ಸಲ್ಲಿಸುತ್ತಾ ಅರಣ್ಯವನ್ನು ಕಾಪಾಡುವುದು ಕೇವಲ ಅರಣ್ಯ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ನಮ್ಮ ಸಿಬ್ಬಂದಿ ಜೊತೆಗೆ ರೈತ ಬಾಂಧವರು ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಅಪಾರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಸ್ವಜಿತ್ ಮಿಶ್ರಾ ಮಾತನಾಡಿ ಇಲಾಖೆಯ ಸಿಬ್ಬಂದಿಗಳು ಹುತಾತ್ಮರ ತ್ಯಾಗ ಬಲಿದಾನವನ್ನು ಸ್ಮರಿಸುತ್ತಾ ಅವರು ನೀಡಿರುವ ಸಂದೇಶವನ್ನು ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದಲ್ಲದೇ ಇವತ್ತಿನ ದಿನ ನಾವೆಲ್ಲರೂ ಹುತಾತ್ಮರು ಮಾಡಿರುವ ತ್ಯಾಗ ಬಲಿದಾನವನ್ನ ನೆನೆಸಿಕೊಳ್ಳುವ ಯಾವುದೇ ಸಂದರ್ಭದಲ್ಲೂ ಧೃಡಿಗೇಡದೆ ಧೈರ್ಯದಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು, ಈ ನಿಟ್ಟಿನಲ್ಲಿ ದಿವಂಗತ ಶ್ರೀನಿವಾಸ್ ಅವರು ತ್ಯಾಗ ನಾವು ಸ್ಮರಿಸುತ್ತಾ ಅವರ ಹೇಗೆ ಕರ್ತವ್ಯ ನಿರ್ವಹಿಸಿ ಜನರಿಗೆ ಯಾವ ರೀತಿ ಹತ್ತಿರವಾಗಿದ್ದರು ಎಂಬುದನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತ ಅರಣ್ಯ ಉಪ ಸಂರಕ್ಷಣಾ ಅಧಿಕಾರಿ ವಾಸುದೇವ್ ಮಲೈಮಹದೇಶ್ವರ ವನ್ಯಜೀವಿ ವಿಭಾಗದ ಪ್ರಭಾರ ಎಸಿಎಫ್ ವಿರಾಜ್ ಹೊಸೂರು,ಮ.ಬೆಟ್ಟ ಪೊಲೀಸ್ ಠಾಣೆಯ ಜಯರಾಂ, ವಲಯ ಅರಣ್ಯಾಧಿಕಾರಿಗಳಾದ ಗುರುಮೂರ್ತಿ,ರಾಜಶೇಖರ್ ಮೂರ್ತಿ, ಜಿತೇಂದ್ರ ರಮೇಶ್,ಗೋಪಿನಾಥಂ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುತ್ತು, ಅರಣ್ಯ ಪರಿಸರ ಸಮಿತಿ ಅಧ್ಯಕ್ಷ ದೊರೆಸ್ವಾಮಿ, ಜಂಗಲ್ ರೆಸಾರ್ಟ್ ನ ಸ್ವಾಮಿ, ಹಾಗೂ ವಿವಿಧಢಯಿಂದ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST