ಚಿತ್ರದುರ್ಗ: ಕಬೀರಾನಂದಾಶ್ರಮವನ್ನು ಜಾತ್ಯಾತೀತ ಹಾಗೂಶ್ರದ್ಧಾ-ಭಕ್ತಿಯ ಧಾರ್ಮಿಕ ಕೇಂದ್ರವಾಗಿ ಬೆಳೆಸುವ ನಿಟ್ಟಿನಲ್ಲಿ ಪೂಜ್ಯರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಪೂಜ್ಯರು ತಮ್ಮ ಜೀವಿತಾವಧಿಯಲ್ಲಿ ಕೇವಲ ಹುಟ್ಟುಹಬ್ಬಗಳನ್ನು ಆಚರಿಸಿಕೊಳ್ಳುವುದರ ಜೊತೆಗೆ, ತಾವೇನು ಸಾಧನೆ ಮಾಡಿದ್ದೇವೆ ಎಂದು ಚಿಂತನೆ ನಡೆಸುವ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಮಾದಾರ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.ನಗರದ ಕಬೀರಾನಂದ ನಗರದಲ್ಲಿ ಶ್ರೀ ಸದ್ಗುರು ಕಬೀರಾನಂದಾಶ್ರಮದ ಆವರಣದಲ್ಲಿ ಶ್ರೀ ಕಬೀರಾನಂದ ಸ್ವಾಮಿ ವೇದಿಕೆಯಲ್ಲಿ ಹಮ್ಮಿಕೊಳ್ಳಲಾದ ಪೀಠಾಧಿಪತಿಗಳಾದ ಶ್ರಿ ಶಿವಲಿಂಗಾನAದ ಶ್ರೀಗಳವರ ವರ್ಧಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಕಬೀರಾ ನಂದಾಶ್ರಮವು ಹಿಂದೆ ಶಿಥಿಲಾವಸ್ಥೆಯಲ್ಲಿತ್ತು ಆದರೆ ಪೂಜ್ಯರ ಕೆಲವೇ ವರ್ಷಗಳ ಆಡಳಿತಾವಧಿಯಲ್ಲಿ ಆಶ್ರಮವು ಮುಗಿಲೆತ್ತರಕ್ಕೆ ಬೆಳೆದು ನಿಂತಿರುವುದು ಅವರ ಪರಿಶ್ರಮದ ಫಲವಾಗಿದೆ. ಈ ಆಶ್ರಮವು ಕೇವಲ ಗೋಶಾಲೆಗೆ ಮಾತ್ರ ಸೀಮಿತವಾಗಿರದೆ, ಅನ್ನ, ಆಹಾರ ಹಾಗೂ ವಿದ್ಯಾದಾಸೋಹ ದಂತಹ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾ ಹಾಗೂ ಅನ್ನದಾಸೋಹವನ್ನು ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮಧ್ಯ ಕರ್ನಾಟಕದ ಒಂದು ಪ್ರಮುಖ ಶ್ರದ್ಧಾ ಕೇಂದ್ರವಾಗಿ ಇದು ಬೆಳೆಯುತ್ತಿದೆ ಎಂದರು. ಚಿತ್ರದುರ್ಗ ನಗರದಲ್ಲಿ ಅನೇಕ ಜಾತಿಯ ಮಠ ಮಾನ್ಯಗಳಿದ್ದರೂ, ಕಬೀರಾನಂದಾಶ್ರಮವು ಒಂದು ಜಾತ್ಯಾತೀತ ಮಠವಾಗಿ ಮೂಡಿ ಬಂದಿದೆ. ಶ್ರೀ ಶಿವಲಿಂಗಾನAದ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಈ ಮಠವು ಮುನ್ನಡೆಯುತ್ತಿದ್ದು, ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಿ ಸಾಗಬೇಕಿದೆ. ಬಸವಾದಿ ಪ್ರಮಥರ ಕೃಪೆಯಿಂದ
ಪೂಜ್ಯರು ನೂರು ಕಾಲ ಆಯುರೋಗ್ಯದೊಂದಿಗೆ ಬಾಳಿ ಬದುಕಿ ಮತ್ತಷ್ಟು ಸಮಾಜಮುಖಿ ಸಾಧನೆಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.ಹೊಸದುರ್ಗದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಶ್ರೀಗಳು ಮಾತನಾಡಿ, ಶಿವಲಿಂಗಾನAದ ಮಹಾ ಸ್ವಾಮೀಜಿಯವರು ಎಂದಿಗೂ ತಮ್ಮ ಜನ್ಮದಿನವನ್ನು ವೈಯಕ್ತಿಕವಾಗಿ ಆಚರಿಸಿಕೊಳ್ಳದೆ, ಶಿಕ್ಷಣ, ಧರ್ಮ ಹಾಗೂ ಸಮಾಜ ಕಲ್ಯಾಣದ ಪವಿತ್ರ ಕಾರ್ಯಗಳ ಮೂಲಕ ನಾಡಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ, ಪ್ರತಿಯೊ ಬ್ಬರೂ ತಮ್ಮ ಮನೆಗಳಲ್ಲಿ ಜನ್ಮದಿನಾಚರಣೆ ಮಾಡಿಕೊಳ್ಳುವುದು ಸಾಮಾನ್ಯವಾದರೂ, ಶಿವಲಿಂಗಾನAದ ಸ್ವಾಮೀಜಿಯವರು ಮಾತ್ರ ತಮ್ಮ ಹುಟ್ಟುಹಬ್ಬವನ್ನು ಎಂದಿಗೂ ಆಚರಿಸಿ ಕೊಂಡಿಲ್ಲ. ಬದಲಾಗಿ ಅವರು ಶಿವರಾತ್ರಿ ಮಹೋತ್ಸವ ಮತ್ತು ವಿಜಯದಶಮಿಯ ದಸರಾ ಮಹೋತ್ಸವಗಳ ಮೂಲಕ ನಾಡಿನ ಅನೇಕ ಮಠಾಧೀಶರು, ಸಾಹಿತಿ ಗಳು ಹಾಗೂ ದಿಗ್ಗಜರನ್ನು ಕರೆಸಿ ಜ್ಞಾನ ದಾಸೋಹದಂತಹ ಪವಿತ್ರ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ ಎಂದರು.ಶ್ರೀ ಶಿವಲಿಂಗಾನಂದ ಸ್ವಾಮೀಜಿಯವರು ಯಾವುದೇ ಭೇದ ಭಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಜಾತ್ಯತೀತಮಠವನ್ನು ಮುನ್ನಡೆಸುತ್ತಿದ್ದಾರೆ. ಇವರ 70ನೇ ವರ್ಷದ ಈ ವಿಶೇಷ ಕಾರ್ಯಕ್ರ ಮದಲ್ಲಿ ನಾವೆಲ್ಲರೂ ಭಾಗವಹಿಸಿ, ಪೂಜ್ಯರ ಸಾರಸ್ವತ ಹಾಗೂ ಸಮಾಜಮುಖಿ ಸಾಧನೆಯಲ್ಲಿ ಸಾಥ್ ನೀಡುವುದೇ ನಮ್ಮೆಲ್ಲರ ಭಾಗ್ಯ ಎಂದು ಹೇಳಿದರು.ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಸುಮಾರು 30 -40 ವರ್ಷಗಳ ಹಿಂದೆ ಆದಿಚುಂಚನಗಿರಿ ಮಠದಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ, ಮಂಜೂರು ಹನುಮಂತಪ್ಪನವರ ಮೂಲಕ ಆ ದಿಚುಂಚನಗಿರಿ ಸ್ವಾಮೀಜಿಯವರ ಬಳಿ ತೆರಳಿ, ಚಿತ್ರದುರ್ಗಕ್ಕೆ ಒಬ್ಬ ಸಿದ್ಧರೂಢ ಪರಂಪರೆಯ ಸ್ವಾಮೀಜಿಯನ್ನು ನೀಡುವಂತೆ ಕೇಳಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದ ಕಬೀರಾನಂದ ಸ್ವಾಮೀಜಿಯವರನ್ನು, ಮಠದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಆಗ ಕೇವಲ ಒಂದು ಸಣ್ಣ ಕುಟೀರದಲ್ಲಿದ್ದ ಮಠವು, ಕಳೆದ ಮೂವತ್ತು ವರ್ಷಗಳಲ್ಲಿ ಸ್ವಾಮೀಜಿಯವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ ಸ್ವಾಮೀಜಿಯವರು ಮಠದ ಅಭಿವೃದ್ಧಿಗೆ ಹಾಗೂ ಬಡ ಮಕ್ಕಳು, ನಿರ್ಗತಿಕರು ಹಾಗೂ ಸಮಾಜದ ಹಿತಕ್ಕಾಗಿ ಕಳೆದ ಮೂರು ದಶಕಗಳಿಂದ ಹತ್ತಾರು ಶ್ರೇಷ್ಠ ಹಾಗೂ ಸಮಾಜಮುಖಿ ಸೇವೆಗಳನ್ನು ಮಾಡುತ್ತಿದ್ದಾರೆ ಎಂದರು.ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನAದ ಶ್ರೀಗಳು ತಮ್ಮ ಆರ್ಶೀವಚನದಲ್ಲಿ ಮನುಷ್ಯನ ಬದುಕಿನಲ್ಲಿ ಆಯುಷ್, ಕರ್ಮ,ವಿತ್ತ, ವದ್ಯಾ ಮತ್ತು ನಿಧನ ಎಂಬ ಐದು ಅಂಶಗಳು ಹುಟ್ಟಿನಿಂದಲೇ ನಿರ್ಧಾರವಾಗಿರುತ್ತವೆ ಲಭ್ಯವಿರುವ ಜೀವನದಲ್ಲಿ ಸದ್ವಿಚಾರಗಳನ್ನು ರೂಢಿಸಿಕೊಳ್ಳುತ್ತಾ, ಉತ್ತಮ ಮನ ಸ್ಸಿನಿಂದ ಸತ್ಕಾರ್ಯಗಳನ್ನು ಮಾಡಬೇಕು ಮನುಷ್ಯನ ಬದುಕಿನಲ್ಲಿ ಈ ಐದು ಸಂಗತಿಗಳನ್ನು ಹಾಗೂ ಆಯುಷ್ಯವನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ ಜೀವನದ ಪ್ರತಿಯೊಂದು ಹಂತದಲ್ಲೂ ಸದ್ಗುರುವಿನ ಮಾರ್ಗದರ್ಶನ ಹಾಗೂ ದೈವಿಕ ಶಕ್ತಿಯ ಮಹತ್ವದ ಅಗತ್ಯ ವಾಗಿದೆ ಯಾವುದೇ ವಸ್ತು ಅಥವಾ ವ್ಯಕ್ತಿಗೆ ನಿರ್ದಿಷ್ಟ ಅವಧಿಯ ಗ್ಯಾರಂಟಿ ಇದ್ದಂತೆ, ಮನುಷ್ಯನ ಆಯಸ್ಸು ಕೂಡ ಪೂರ್ವಯೋಜಿತ ವಾಗಿರುತ್ತದೆ. ಕರ್ಮ ಎಂದರೆ ಕೆಲಸವಾಗಿದ್ದು, ದೇವರು ಪ್ರತಿಯೊಬ್ಬರಿಗೂ ಅವರವರ ಕೆಲಸವನ್ನು ನಿಗದಿಪಡಿಸಿದ್ದಾನೆ ಎಂದು ಆಶೀರ್ವಾಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜ್, ಇಂಡಿಯನ್ ಸಂಸ್ಥೆಯ ಮಾಲೀಕರಾದ ರೂಪೇಶ್, ಸಿದ್ದವ್ವನಹಳ್ಳಿ ಪರಮೇಶ್ವರ್, ಉಪನ್ಯಾಸಕ ಪ್ರೊ.ಬಿ.ರಾಜಶೇಖರಪ್ಪ, ಮೆದೇಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ವಿಜಯಕುಮಾರ್, ಮತ್ತು ನಗರಸಭೆಯ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ತಿಪ್ಪಮ್ಮ ಮಾಜಿ ಸದಸ್ಯ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸಿಂಹರಾಜು,
ಬಿಜೆಪಿ ಮುಖಂಡ ಹನುಮಂತಗೌಡ, ಪ್ರಶಾಂತ್, ಗಣಪತಿ ಶಾಸ್ತಿç, ತಿಪ್ಪೇಸ್ವಾಮಿ, ಯೋಗಿಶ್, ನಿರಂಜನ, ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.