LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಸೋನಿಯಾಗಾಂಧಿ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಪೋಸ್ಟ್

ಕಂಗನಾ ವಿರುದ್ಧ ಎಫ್‌ಐಆರ್ ದಾಖಲು


ನವದೆಹಲಿ: ಸೋನಿಯಾ ಗಾಂಧಿ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಆರೋಪದ ಮೇಲೆ ಬಿಜೆಪಿ ಸಂಸದೆ ಕಂಗನಾ ರಣಾವತ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಿಮಾಚಲ ಪ್ರದೇಶ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಿವೃತ್ತ ಕ್ಯಾಪ್ಟನ್ ಅತುಲ್ ಶರ್ಮಾ ನೀಡಿದ ದೂರಿನ ಆಧಾರದ ಮೇಲೆ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕಂಗನಾ ಅವರ ಹೇಳಿಕೆಗಳು ಸಾರ್ವಜನಿಕ ಶಾಂತಿಗೆ ಭಂಗ ತರುವಂತಿವೆ ಎಂದು ದೂರುದಾರರು ಆರೋಪಿಸಿದ್ದಾರೆ.
ನವೆಂಬರ್ 10ರಂದು ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊAಡ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸಾವಿನ ಬಗ್ಗೆ ಈ ಪೋಸ್ಟ್ನಲ್ಲಿ ಪ್ರಚೋದನಕಾರಿ ಉಲ್ಲೇಖಗಳಿವೆ ಎಂದು ಅತುಲ್ ಶರ್ಮಾ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.`ಎಲ್ಲರೂ ಈಗ ಎನ್‌ವಿಡಿಯಾ ಹನಿಟ್ರ್ಯಾಪ್ ವಿವಾದದ ಬಗ್ಗೆ ಮಾತನಾಡುತ್ತಿದ್ದಾರೆ. ನಾನು `ಎಮರ್ಜೆನ್ಸಿ' ಸಿನಿಮಾಗಾಗಿ ಭಾರತೀಯ ರಾಜಕೀಯ ಮತ್ತು ಗಾಂಧಿ ಕುಟುಂಬದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದೇನೆ. ಆದರೆ ನನಗೆ ಇಂದಿಗೂ ಅರ್ಥವಾಗದ ಒಂದು ವಿಷಯವನ್ನು ನಾನು ಒಪ್ಪಿಕೊಳ್ಳಲೇಬೇಕು' ಎಂದು ಸಾಲು ಆರಂಭಿಸಿದ್ದಾರೆ ಕಂಗನಾ.`ಒಬ್ಬ ನಿಗೂಢ ವಿದೇಶಿ ಪ್ರಜೆ (ಸೋನಿಯಾ ಗಾಂಧಿ) ಗಾಂಧಿ ಕುಟುಂಬವನ್ನು ಪ್ರವೇಶಿಸುತ್ತಾರೆ. ಆನಂತರ ಇಂದಿರಾ ಗಾಂಧಿ ಹತ್ಯೆಯಾಗುತ್ತಾರೆ. ಬಳಿಕ ಸಂಜಯ್ ಗಾಂಧಿ ಮತ್ತು ರಾಜೀವ್ ಗಾಂಧಿ ಹೀಗೆ ಅಧಿಕಾರ ವಹಿಸಿಕೊಳ್ಳಬೇಕಿದ್ದ ಎಲ್ಲ ಸಂಭಾವ್ಯ ಉತ್ತರಾಧಿಕಾರಿಗಳು ಕೊಲ್ಲಲ್ಪಡುತ್ತಾರೆ. ಕೊನೆಗೆ ಅನುಕಂಪದ ಆಧಾರದ ಮೇಲೆ ಸಿಂಹಾಸನಕ್ಕೆ ಉಳಿದಿದ್ದು ಒಬ್ಬರೇ ಆಯ್ಕೆ. ಅವರೇ ಸೋನಿಯಾ ಗಾಂಧಿ ಎಂಬ ವಿದೇಶಿ ಪ್ರಜೆ' ಎಂದಿದ್ದರು ಕಂಗನಾ. ಈ ಮೂಲಕ ಕಾಂಗ್ರೆಸ್ ಗಾಂಧಿ ಕುಟುಂಬದವರ ಕೊಲೆಗೆ ಸೋನಿಯಾ ಕಾರಣ ಎಂದು ಪರೋಕ್ಷವಾಗಿ ಆರೋಪಿಸಿದ್ದರು.`ಇಲ್ಲಿ ಹಲವಾರು ಕಾಕತಾಳೀಯ ಘಟನೆಗಳು ನಡೆದಿವೆ ಎಂದು ಜನರು ಯೋಚಿಸಲೇ ಇಲ್ಲ. ಅಷ್ಟೇ ಅಲ್ಲದೆ, ಆ ವಿದೇಶಿ ಮಹಿಳೆ ಬಹಿರಂಗವಾಗಿಯೇ ವಿದೇಶಿ ಅಜೆಂಡಾಗಳನ್ನು ಪ್ರಚಾರ ಮಾಡಿದರು. ಭಯೋತ್ಪಾದಕರಿಗಾಗಿ ಮೊಸಳೆ ಕಣ್ಣೀರು ಸುರಿಸಿದರು. ಆದರೂ 2014ರ ಬದಲಾವಣೆ ಬರುವವರೆಗೂ, ದಶಕಗಳ ಕಾಲ ಸರ್ಕಾರವನ್ನು ಮುನ್ನಡೆಸುವಲ್ಲಿ ಅವರು ಯಶಸ್ವಿಯಾದರು' ಎಂದಿದ್ದರು ಕಂಗನಾ.
ನವೆAಬರ್ 12ರ ಸಂಜೆ ಡಿಜಿಪಿ ಅವರಿಗೆ ಇಮೇಲ್ ಮೂಲಕ ಅತುಲ್ ಶರ್ಮಾ ದೂರು ಸಲ್ಲಿಸಿದ್ದರು. ಇಂತಹ ಬರಹಗಳು ಸಮಾಜದಲ್ಲಿ ದ್ವೇಷ ಹರಡುತ್ತವೆ ಎಂದು ದೂರುದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಕುರಿತು ತಕ್ಷಣವೇ ಸೈಬರ್ ವಿಧಿವಿಜ್ಞಾನ ತನಿಖೆ ನಡೆಸುವಂತೆ ಅವರು ಮನವಿ ಮಾಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಶಿಮ್ಲಾ ಎಸ್ಪಿ ಗೌರವ್ ಸಿಂಗ್ ಖಚಿತಪಡಿಸಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣದ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.
ಸೋನಿಯಾ ಗಾಂಧಿ ಅವರ `ಬಿಲಾಂಗಿAಗ್: ಎ ಜರ್ನಿ ಆಫ್ ಲವ್' ಎಂಬ ಆತ್ಮಚರಿತ್ರೆ ಬಿಡುಗಡೆಯಾಗಿದೆ. ಕಾಕತಾಳೀಯ ಎಂಬAತೆ ಅದೇ ದಿನ ಕಂಗನಾ ಈ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು. ಉದ್ದೇಶ ಪೂರ್ವಕವಾಗಿಯೇ ಕಂಗನಾ ಈ ಪೋಸ್ಟ್ ಹಂಚಿಕೊAಡಿದ್ದರು ಎನ್ನಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೋನಿಯಾಗಾಂಧಿ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ದೇಗುಲ ಪ್ರವೇಶಕ್ಕೆ ನಿಖಿಲ್ ಕುಮಾರಸ್ವಾಮಿಗೆ ನಿರಾಕರಣೆಕಬೀರಾನಂದಾಶ್ರಮ ಜಾತ್ಯತೀತ ಶ್ರದ್ಧಾಭಕ್ತಿಯ ಕೇಂದ್ರವಾಗಿ ಬೆಳಸುವಲ್ಲಿ ಶ್ರೀಗಳ ಕೊಡುಗೆ ಅಪಾರಕಬೀರಾನಂದಾಶ್ರಮ ಜಾತ್ಯತೀತ ಶ್ರದ್ಧಾಭಕ್ತಿಯ ಕೇಂದ್ರವಾಗಿ ಬೆಳಸುವಲ್ಲಿ ಶ್ರೀಗಳ ಕೊಡುಗೆ ಅಪಾರಸಿಎಂ ಪೋಸ್ಟರ್ ಅಂಟಿಸುವ ಚಾಳಿ ಬಿಡಲಿಮಕ್ಕಳನ್ನು ಹೇಗೆ ಬೆಳೆಸಬೇಕುವರ್ಷವಿಡೀ ಸುಗಮ ಸಂಗೀತ ಶತಮಾನೋತ್ಸವ ತರಬೇತಿ ಕಾರ್ಯಾಗಾರ: ಡಾ.ಕಿಕ್ಕೇರಿ ಕೃಷ್ಣಮೂರ್ತಿ ಘೋಷಣೆಅರಣ್ಯ-ರೈತರ ಮಂಜೂರಾತಿ ಭೂಮಿ ಗೊಂದಲ ನಿವಾರಣೆಗೆ ಕ್ರಮ: ಜಿಲ್ಲಾಧಿಕಾರಿ ರವಿಕುಮಾರ್ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು: 89 ರನ್‌ಗಳಿಗೆ ಆಲೌಟ್ಮೋದಿ ಅವರಿಂದ ಚಾಮರಾಜನಗರ ಅಮೃತ ರೈಲು ನಿಲ್ದಾಣ ಉದ್ಘಾಟನೆ