LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News | Entertainment News

ಕಿರು ಚಿತ್ರಕ್ಕೆ ಶುಭಕೋರಿ ಕ್ಲಾಪ್ ಮಾಡಿದ ಶಿವಕುಮಾರ್ ನಾಗರ ನವಿಲೆ


ಕಿರು ಚಿತ್ರದ ಹೆಸರು: “ತ್ವಮೇವ ಮಮ ಪ್ರೇಮ”ರಚನೆ-ನಿರ್ದೇಶನ-ನಿರ್ಮಾಣ: ಸೂರ್ಯ ಬ.ಸು ಧೂಮಪಾನದಿಂದ ಆಗುವ ದುಷ್ಪರಿಣಾಮದ ಬಗ್ಗೆ ಪ್ರೀತಿಯ ಮೂಲಕ ಹೊಸ ರೀತಿಯ ಕಥೆ ಹೇಳಲು ಹೊರಟಿರುವ ಹೊಸ ತಂಡ.ಕಿರು ಚಿತ್ರದ ಮಹೂರ್ತ ಕಾರ್ಯಕ್ರಮ ಚಂದ್ರ ಲೇಔಟ್‌ನ ದುರ್ಗಾ ಪರಮೇಶ್ವರಿ ದೇವಸ್ಥಾದಲ್ಲಿ ಜರುಗಿತು.
ಭೂಮಿಕೆಯಲ್ಲಿ ರಾಜೇಂದ್ರ ರಚ್ಚ (ನಾಯಕ), ದಿವ್ಯ (ನಾಯಕಿ), ಯೋಗೀಶ್ ನಾಯಕ್, ಸಿದ್ದು ಗೌಡ (ಛಾಯಾಗ್ರಾಹಕರು), ಲೋಕೇಶ್ ಹಾಗೂ ಯಶವಂತ(ಸಹ ನಿರ್ದೇಶಕರು), ಸಂತೋಷ್ ಕೋರಿ (ಸಾಹಿತ್ಯ).ಉತ್ತರ ಕರ್ನಾಟಕದಿಂದ ನಿರ್ದೇಶಕನಾಗುವ ಕನಸುನ್ನು ಹೊತ್ತು ಬಂದಿರುವ ಚಿತ್ರದ ನಿರ್ದೇಶಕ ಸೂರ್ಯ.ಬ.ಸು ಅವಕಾಶಗಳಿಗೆ ಕಾಯುತ್ತ ಕೂರದೇ ತಾವೇ ಒಂದು ತಂಡ ಕಟ್ಟಿಕೊಂಡು ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ನಿಂತಿದ್ದಾರೆ. ಸ್ವತಃ ತಾವೇ ಕಥೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿರುವುದರ ಜೊತೆಗೆ ತಮ್ಮ ಸ್ವಂತ ಹಣದಿಂದಲೇ ನಿರ್ಮಾಣ ಮಾಡುತ್ತಿದ್ದಾರೆ. ಧೂಮಪಾನದಿಂದ ಆಗುವ ಅಡ್ಡ ಪರಿಣಾಮಗಳು ತಮಗಷ್ಟೇ ಅಲ್ಲದೆ, ಅಕ್ಕ-ಪಕ್ಕದಲ್ಲಿರುವ ಜನರಿಗೆ ಹೆಚ್ಚು ಹಾನಿ ಮಾಡುತ್ತದೆ ಎಂಬುದನ್ನು ಹೇಳುವುದೇ ಈ ಚಿತ್ರದ ಮೂಲ ಕಥೆ,ಅದರೊಳಗೇ ಒಂದು ಮುದ್ದಾದ ಪ್ರೇಮ ಕಾವ್ಯವನ್ನೇ ನಿರ್ದೇಶಕರು ಸೇರಿಸಿದ್ದಾರೆ. ಎಲ್ಲಾ ಹೊಸ ಪ್ರತಿಭೆಗಳೇ ಇಂಥ ಚಿಕ್ಕ ಪ್ರಯತ್ನಗಳೇ ಮುಂದೆ ದೊಡ್ಡ ಸಾಧನೆಗೆ ಮೆಟ್ಟಿಲಾಗವುದು. ಯಾವಾಗಲು ಹೊಸ ಪ್ರತಿಭೆಗಳಿಗೆ ಸದಾ ಬೆನ್ನು ತಟ್ಟಿ ಬೆಳೆಸಲು ಮುಂದಿರುವ ಕರ್ನಾಟಕ ಪ್ರೆಸ್ ಕೌನ್ಸಿಲ್ ನ ಅಧ್ಯಕ್ಷರಾದ ಶ್ರೀ ಶಿವಕುಮಾರ್ ನಾಗರನವಿಲೇ ಅವರು ಹೊಸ ತಂಡದ ಈ ಹೊಸ ಪ್ರಯತ್ನಕ್ಕೆ ಬಂದು ಕ್ಲಾಪ್ ಮಾಡುವುದರ ಮೂಲಕ ಶುಭ ಹಾರೈಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST