LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

`ಶ್ರೀಲಂಕದಲ್ಲಿ ಮೊಳಗಿತು ಕನ್ನಡ ಸಂಸ್ಕೃತಿ'


ಭಾರತದ ನೆರೆಯ ರಾಷ್ಟçವಾದ ಶ್ರೀಲಂಕದ ಐತಿಹಾಸಿಕ ತಾಣವಾದ ಕೊಲಂಬೋದಲ್ಲಿ ಕನ್ನಡ ಸಂಸ್ಕೃತಿಯ ಅನಾವರಣವಾಯಿತು. ಆತ್ಮಶ್ರೀ ಕನ್ನಡ ಸಾಂಸ್ಕöÈತಿಕ ಪ್ರತಿಷ್ಠಾನ (ರಿ)ಮತ್ತು ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕöÈತಿಕ ಸಂಘ (ರಿ) ಜಂಟಿಯಾಗಿ ಆಯೋಜಿಸಿದ್ದ ಗಡಿಗಳನ್ನು ಮೀರಿದ ಕನ್ನಡ ಭಕ್ತಿ ಮತ್ತು 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡ ನಮ್ಮ ಉಸಿರು ಕನ್ನಡವೇ ನಮ್ಮ ಅಸ್ತಿತ್ವ ಎನ್ನುವ ಘೋಷ ವಾಕ್ಯಗಳೊಂದಿಗೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಜರುಗಿತು. ಭರತನಾಟ್ಯ, ಕೊಳಲು ವಾದನ, ಸಾಂಪ್ರದಾಯಿಕ ನೃತ್ಯ ವೈಭವ, ಕನ್ನಡ ರತ್ನ ಕೃತಿ ಬಿಡುಗಡೆ, ವಿಚಾರ ಸಂಕಿರಣ ಹೀಗೆ ಮುಂತಾದ ಸಾಂಸ್ಕöÈತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ಮೇಳೈಸಿದವು.ಸಮ್ಮೇಳನದ ಅಧ್ಯಕ್ಷರಾದ ಡಾ. ಎಸ್ ಅಕ್ಬರ್ ಭಾಷಾ ಅವರು ಮಾತನಾಡಿ ಕನ್ನಡದ ಭಕ್ತಿ ಭಾವನೆಗಳ ಸಮ್ಮಿಲನವಾಗಿ ಗಡಿಗಳನ್ನು ಮೀರಿ ಬೆಳೆಯಬೇಕು. ಕರುನಾಡಿನ ಧ್ವನಿ ಪ್ರತಿಧ್ವನಿಯಾಗಿ ಸಮುದ್ರದಾಚೆಗೆ ಝೇಂಕರಿಸುತ್ತಿರುವುದು ಒಂದು ರೋಚಕ ಕ್ಷಣ ಎಂದರು. 
ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ ಮತ್ತು ಕಾರ್ಯಕ್ರಮದ ಆಯೋಜಕರಾದ ಡಾ. ಗುಣವಂತ ಮಂಜು ಅವರು ಮಾತನಾಡಿ ಕನ್ನಡದ ಮಣ್ಣಿನಲ್ಲಿ ಕನ್ನಡ ಧ್ವಜ ಹೆಮ್ಮೆಯಿಂದ ಹಾರುತ್ತಿರಬೇಕು. ಆ ಧ್ವಜವನ್ನು ಭೂಮಂಡಲದ ಎಲ್ಲಾ ರಾಷ್ಟçಗಳಲ್ಲಿ ಹಾರಿಸುವ ಮೂಲಕ ವಿಶ್ವ ಭಾರತಿಗೆ ಕನ್ನಡದ ಆರತಿಯನ್ನು ಬೆಳಗಬೇಕು. ಸಂಸ್ಕöÈತಿಗಳ ಸಂಗಮವಾದಾಗ ಪರಸ್ಪರ ಗೌರವ ಹೆಚ್ಚಾಗಿ ವಿಶ್ವಬಂದುತ್ವ ಮೂಡುತ್ತದೆ. ಅದಕ್ಕಾಗಿ ನಾವೆಲ್ಲರೂ ಒಂದು ಐತಿಹಾಸಿಕ ಸಂಕಲ್ಪವನ್ನು ಮಾಡೋಣ. ವಿಶ್ವದ ವೇಗಕ್ಕೆ ಸಮನಾಗಿ ಕನ್ನಡದ ಕೀರ್ತಿಯನ್ನು ಬೆಳಗುವಂತೆ ಕಂಕಣಭದ್ಧರಾಗೋಣ  ಎಂದರು.ಕಲಾವಿದರಾದ ಪವಿತ್ರ ಹಿರೇಮಠ, ಡಾ. ಮೀನಾ ಕುಮಾರಿ,ಕು.ಪರಿಣಿಕ, ಕುಮಾರಿ ಭಾರತಿ ನೃತ್ಯದ ಮೂಲಕ ರಂಜಿಸಿದರು.
ಪ್ರಜ್ಞಾ ಜೋಶಿ ಕೊಳಲು ವಾದನ, ಶ್ರೀ ರಾಮದಾಸ್ ಅವರ ಕನ್ನಡ ಗೀತೆಗಳ ಗಾಯನ ಸಾಂಪ್ರದಾಯಿಕವಾಗಿತ್ತು.ಕರುನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ವಿಶ್ವಖ್ಯಾತಿಯ ರೋಬೋ ತಂತ್ರಜ್ಞಾನ ಶ್ರೀ ರೋಬೋ ಕಿಶೋರ್ ಅವರ ಅಮೃತಸ್ಥದಿಂದ ಯುನಿವರ್ಸಲ್ ಕನ್ನಡಿಗ ಮತ್ತು ಯುನಿವರ್ಸಲ್ ಕನ್ನಡತಿ ಅಂತರರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಮುಖ್ಯ ಅತಿಥಿಗಳಾಗಿ ಡಾ. ಸಂಪತ್ ವೇಣುಗೋಪಾಲ್ ಆಚಾರ್ಯ, ಡಾ. ಸತೀಶ್ ಗುಡಿಬಂಡೆ. ಡಾ. ಸುಕನ್ಯಾ ಹಿರೇಮಠ.ಡಾ. ಮಂಜುನಾಥ್ ಭಟ್ ಗುರೂಜಿ ಮುಂತಾದವರು ಉಪಸ್ಥಿತರಿದ್ದರು. ಶ್ರೀಲಂಕದ ಪ್ರಜೆಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕನ್ನಡ ಧ್ವಜ ಸ್ವೀಕರಿಸಿದ್ದು ವಿಶೇಷವಾಗಿತ್ತು. ಇದರೊಂದಿಗೆ ನಾಡಿನ ಸಾಹಿತ್ಯ ಮತ್ತು ಸಾಂಸ್ಕöÈತಿಕ ವಲಯದ ಗಣ್ಯರಾದ ಶ್ರೀ ಪ್ರದೀಪ್ ಬಿ ಆರ್, ಶ್ರೀ ನಾಗರಾಜ್, ಶ್ರೀಮತಿ ಮಹಾದೇವಿ, ಶ್ರೀ ಗೋವಿಂದಹಳ್ಳಿ ಕೃಷ್ಣೇಗೌಡ, ಡಾ.ಎ.ಪಿ. ರಾಮಕೃಷ್ಣ ಶ್ರೀಮತಿ ಮಂಜುಳ , ಡಾ. ಬಿ ಆರ್ ಬಸವರಾಜ್, ಶ್ರೀ ಕರಿಬಡ್ಡೆ ಶ್ರೀನಿವಾಸ್, ಶ್ರೀ ನಿರಂಜನ ಬಡಿಗೇರ, ಡಾ. ಸಂಪಂಗಿ ಟಿ.ವಿ, ಶ್ರೀ ಜಯಪ್ರಕಾಶ್ ಶ್ರೀಮತಿ ಅದ್ರಿಜಾ, ಶ್ರೀಮತಿ ನಾಗವೇಣಿ ಮಮತಾ, ಶ್ರೀ ನಾಗರಾಜ್ ಕೆ,ಶ್ರೀಮತಿ ಗೀತಾ ನಾಗರಾಜ್, ಶ್ರೀ ರಮೇಶ್, ಶ್ರೀಮತಿ ಸುಮಿತ್ರ ರಮೇಶ್, ಶ್ರೀ ವೆಂಕಟೇಶ್ ಭುಜಂಗ, ಶ್ರೀ ಎಂ ಆರ್ ಲೋಕೇಶ್, ಶ್ರೀ ಕೃಷ್ಣಯ್ಯ ಚಿಕ್ಕನಹಳ್ಳಿ, ಶ್ರೀಮತಿ ಆಶಾ, ಶ್ರೀ ಸುನಿಲ್ ಕುಮಾರ್ ಜಂಬಗಿ, ಶ್ರೀಕಾಂತ್ ಎನ್, ಶ್ರೀ ಶಿವಕುಮಾರ್, ಶ್ರೀ ಸರ್ವೇ ಮಂಜು, ಶ್ರೀ ಪ್ರಕಾಶ್, ಶ್ರೀ ಅನಿಲ್,ಶ್ರೀ ಪ್ರಸನ್ನ,ಶ್ರೀಮತಿ ಅನ್ನಪೂರ್ಣ ,ಕು.ಅರ್ಪಿತ, ಬೇಬಿ ಉತ್ಸವಿಗೌಡ, ಶ್ರೀ ವಿಕಾಸ್ ಮುಂತಾದ ಕನ್ನಡಿಗರು ಭಾಗಿಯಾಗಿದ್ದರು. ಎರಡು ಸಂಸ್ಥೆಗಳ ಕಾರ್ಯದರ್ಶಿ ಮತ್ತು ನಿರ್ದೇಶಕರಾದ ಶ್ರೀಮತಿ ವರಲಕ್ಷಿ÷್ಮ ಗುಣವಂತ ಮಂಜು ಕಾರ್ಯಕ್ರಮವನ್ನು ನಿರೂಪಿಸಿದರು.ಅಬಕಾರಿ ಇಲಾಖೆಯ ಉಪ ಆಯುಕ್ತರು ಮತ್ತು ಸಾಹಿತಿಗಳಾದ ಡಾ. ಬಿ.ಆರ್ ಹಿರೇಮಠ. ದೇವನಹಳ್ಳಿಯ ಶ್ರೀ ಅಂಬರೀಶ್ ಗೌಡ.ಇಂದು ಸಂಜೆ ಪತ್ರಿಕೆ, ಸಂಜೆ ಪ್ರಭಾ ಪತ್ರಿಕೆ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಕರ್ನಾಟಕ ಸರ್ಕಾರ. ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ನಿಯಮಿತ ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST